ಮಡಿಕೇರಿ, ಸೆ. ೧೧: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮಡಿಕೇರಿ ಶಾಸಕ ಡಾ. ಮಂಥರ್ಗೌಡ ಭರವಸೆ ನೀಡಿದರು.
ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ದಸರಾ ಸಮಿತಿ ಅಧ್ಯಕ್ಷೆ, ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ದಸರಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದಸರಾ ಉತ್ಸವಕ್ಕೆ ಮೆರುಗು ನೀಡುವ ದಶಮಂಟಪಗಳ ವೈಭವದ ಹಿಂದೆ ಇರುವ ಮಂಟಪ ಸಮಿತಿಗಳ ಶ್ರಮವನ್ನು ತಾನು ಹತ್ತಿರದಿಂದ ಕಂಡಿದ್ದೇನೆ. ಅಲ್ಲದೇ, ಉತ್ಸವದ ಯಶಸ್ಸಿಗಾಗಿ ಉಪಸಮಿತಿಗಳ ಪರಿಶ್ರಮದ ಅರಿವು ಕೂಡ ತನಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನಸೆಳೆದು ಸೂಕ್ತ ಅನುದಾನ ಒದಗಿಸಲು ಶ್ರಮಿಸುತ್ತೇನೆ ಎಂದು ಮಂಥರ್ಗೌಡ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಧ್ಯಕ್ಷೆ ಅನಿತಾ ಪೂವಯ್ಯ ದಸರಾ ಸಮಿತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ೩ ಕೋಟಿ ಅನುದಾನದ ಬೇಡಿಕೆ ಮುಂದಿಡಲಾಗಿದೆ. ಈ ಬಾರಿ ದಸರಾ ಉತ್ಸವವನ್ನು ವಿಜೃಂಭಣೆಯಿAದ ನಡೆಸುವ ನಿಟ್ಟಿನಲ್ಲಿ ಸರ್ವರ ಸಹಕಾರ ಅಗತ್ಯ ಎಂದು ಹೇಳಿದರು.
ದಸರಾ ಸಮಿತಿ ಆಹ್ವಾನಿತರು ಗಳಾದ ಟಿ.ಪಿ. ರಮೇಶ್ ಮಾತನಾಡಿ, ದಸರಾ ಸಮಿತಿಗೆ ಬೈಲಾ ರಚನೆ ಸಂಬAಧ ಈಗಾಗಲೇ ಬೈಲಾ ಸಮಿತಿಯು ಸಾಕಷ್ಟು ಸಭೆಗಳನ್ನು ನಡೆಸಿದ್ದು, ಅಂತಿಮ ಹಂತಕ್ಕೆ ಬಂದು ತಲುಪಿದೆ ಎಂದು ಮಾಹಿತಿ ನೀಡಿದರಲ್ಲದೇ, ದಸರಾ ಸಮಿತಿಯು ಯಾವ ಯಾವ ಕಾರ್ಯಕ್ರಮಗಳಿಗೆ ಎಷ್ಟೆಷ್ಟು ಅನುದಾನ ಬೇಕೆಂದು ಸಮರ್ಪಕವಾದ
(ಮೊದಲ ಪುಟದಿಂದ) ಕ್ರಿಯಾ ಯೋಜನೆಯನ್ನು ತಯಾರಿಸಿ, ಸರ್ಕಾರದ ಬಳಿಗೆ ನಿಯೋಗ ತೆರಳುವಂತಾಗಬೇಕು ಎಂದು ಸಲಹೆಯಿತ್ತರು.
ಎಂ.ಬಿ. ದೇವಯ್ಯ ಮಾತನಾಡಿ, ನೂತನವಾಗಿ ರಚನೆಗೊಳ್ಳುವ ಬೈಲಾ ಸಮರ್ಪಕವಾಗಿ ಸ್ಪಷ್ಟತೆಯಿಂದ ಕೂಡಿರಬೇಕು. ಸರ್ಕಾರದ ಅನುದಾನ ಆದಷ್ಟು ಶೀಘ್ರ ದಸರಾ ಸಮಿತಿಗೆ ತಲುಪುವಂತಾಗಲು ಶಾಸಕರು ಗಮನಹರಿಸಬೇಕೆಂದು ಮನವಿ ಮಾಡಿದರು.
ಜಿ. ರಾಜೇಂದ್ರ ಅವರು ಮಾತನಾಡಿ, ಕಳೆದ ಬಾರಿಯ ಅನುದಾನದಲ್ಲಿ ೨೫ ಲಕ್ಷ ರೂ. ಸರ್ಕಾರದಿಂದ ಬಿಡುಗಡೆಯಾಗಲು ಬಾಕಿ ಇದ್ದು, ದಸರಾ ಸಮಿತಿಯು ಉತ್ಸವ ಮುಗಿದ ಬಳಿಕ ಬಾಕಿ ಅನುದಾನಕ್ಕಾಗಿ ಸತತ ಪ್ರಯತ್ನ ಪಡುವಂತಾಗಬೇಕು. ಪದಾಧಿಕಾರಿಗಳು ಸಭೆ ಸೇರಿ, ನಿಯೋಗ ತೆರಳಿ ಬಾಕಿ ಅನುದಾನಕ್ಕಾಗಿ ನಿರಂತರ ಪ್ರಯತ್ನ ಮಾಡಬೇಕು. ಹಾಗಾದಾಗ ಮಾತ್ರ ಸರ್ಕಾರದ ಅನುದಾನ ಸಂಪೂರ್ಣ ವಾಗಿ ಸಿಗಲು ಸಾಧ್ಯವಾಗುತ್ತದೆ ಎಂದು ಸಲಹೆಯಿತ್ತರು.
ದಸರಾ ಮುಂಚಿತವಾಗಿ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕೆಲಸಗಳಾಗಬೇಕು, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು, ಮಂಟಪಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಹೇಳಿದರು.
ಸತೀಶ್ ಪೈ ಮಾತನಾಡಿ, ಗಾಂಧಿ ಮೈದಾನದಲ್ಲಿ ನೂತನ ಶಾಶ್ವತ ವೇದಿಕೆ ನಿರ್ಮಾಣವಾಗಬೇಕು ಎಂದು ಹೇಳಿದರು.
ಈ ವೇಳೆ ಮಾತನಾಡಿದ ಶಾಸಕ ಮಂಥರ್ಗೌಡ, ಮಡಿಕೇರಿ ನಗರವನ್ನು ದಸರಾ ಉತ್ಸವದ ವೇಳೆ ಸುಂದರವಾಗಿಸುವ ನಿಟ್ಟಿನಲ್ಲಿ ನಗರಸಭೆ ಕಾರ್ಯಪ್ರವೃತ್ತವಾಗಬೇಕು. ಅಕ್ಟೋಬರ್ ಮೊದಲ ವಾರದೊಳ ಗಾಗಿ ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ಮಾಡಿ ಮುಗಿಸಬೇಕು. ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಬೇಕು, ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯೂ ಸಮರ್ಪಕವಾಗಿರಬೇಕು ಎಂದು ಸೂಚಿಸಿದರು.
ಗಾಂಧಿ ಮೈದಾನದಲ್ಲಿ ಶಾಶ್ವತ ವೇದಿಕೆ ನಿರ್ಮಾಣ ಸಂಬAಧ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸುವಂತೆ ನಗರಸಭೆ ಅಯುಕ್ತರಿಗೆ ಸೂಚಿಸಿದರಲ್ಲದೇ ಶಾಶ್ವತ ವೇದಿಕೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಒದಗಿಸಲು ಶ್ರಮಿಸುವುದಾಗಿ ಭರವಸೆಯಿತ್ತರು.
ಕಾರ್ಯಾಧ್ಯಕ್ಷರಾಗಿ ಘೋಷಣೆ
ದಸರಾ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ದಶಮಂಟಪ ಸಮಿತಿಯಿಂದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಪ್ರಕಾಶ್ ಆಚಾರ್ಯ ಅವರನ್ನು ಅಧಿಕೃತವಾಗಿ ಕಾರ್ಯಾಧ್ಯಕ್ಷರಾಗಿ ಸಭೆಯಲ್ಲಿ ಘೋಷಿಸಲಾಯಿತು. ಉಪಾಧ್ಯಕ್ಷರಾಗಿ ಸಾರ್ವಜನಿಕ ಕ್ಷೇತ್ರದಿಂದ ನೆರವಂಡ ಜೀವನ್ ಆಯ್ಕೆಯಾದರು. ಖಜಾಂಚಿಯಾಗಿ ಅರುಣ್ಶೆಟ್ಟಿ, ಸಹಕಾರ್ಯದರ್ಶಿ ಯಾಗಿ ಲೋಕೇಶ್ ಆಯ್ಕೆಯಾದರು.
ಗೊಂದಲ ಸೃಷ್ಟಿಸಿದ ಪ್ರಧಾನ ಕಾರ್ಯದರ್ಶಿ ಸ್ಥಾನ
ದಸರಾ ಸಮಿತಿ ಸಭೆಯಲ್ಲಿ ಸಮಿತಿಗೆ ಪ್ರಧಾನ ಕಾರ್ಯದರ್ಶಿ ಆಯ್ಕೆ ಸಂಬAಧ ಕೆಲ ಸಮಯ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ನಗರಸಭಾ ಸದಸ್ಯರುಗಳಾದ ಅಪ್ಪಣ್ಣ, ಅರುಣ್ಶೆಟ್ಟಿ, ರಾಜೇಶ್ ಯಲ್ಲಪ್ಪ ಪ್ರಧಾನ ಕಾರ್ಯದರ್ಶಿ ಸ್ಥಾನದ ಆಕಾಂಕ್ಷಿಗಳಾಗಿದ್ದರು. ರಾಜೇಶ್ ಯಲ್ಲಪ್ಪ ಆಯ್ಕೆಯಾಗುವುದಾದರೆ ತಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಅರುಣ್ಶೆಟ್ಟಿ ಹೇಳಿದರು. ಕೊನೆಗೆ ರಾಜೇಶ್ ಯಲ್ಲಪ್ಪ ಹಾಗೂ ಅಪ್ಪಣ್ಣ ಇವರಿಬ್ಬರ ನಡುವೆ ಪೈಪೋಟಿ ಏರ್ಪಟ್ಟಿತು. ಈ ವೇಳೆ ನಗರಸಭೆ ಸದಸ್ಯರುಗಳು ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡಬೇಕೆಂದು ಕೆಲವರು ಪಟ್ಟುಹಿಡಿದರೆ; ಮಂಟಪ ಹಾಗೂ ಕರಗ ಸಮಿತಿಗಳು ಪ್ರಧಾನ ಕಾರ್ಯದರ್ಶಿ ಆಯ್ಕೆಮಾಡಬೇಕೆಂದು ಮತ್ತೆ ಕೆಲವರು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಸಭೆ ಗದ್ದಲದ ಗೂಡಾಗಿ ಮಾರ್ಪಾಡಾಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಜಿ. ರಾಜೇಂದ್ರ ಅವರು, ಶಾಸಕರ ಸಮ್ಮುಖದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಇಂತಹ ಗೊಂದಲಗಳು ಉಂಟಾಗಬಾರದು ಎಂದು ಹೇಳಿದರು. ಗೊಂದಲ ಮುಂದುವರೆ ಯುತ್ತಿದ್ದಂತೆ ಅಧ್ಯಕ್ಷೆ ಅನಿತಾ ಪೂವಯ್ಯ, ಟಿ.ಪಿ. ರಮೇಶ್ ಅವರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿ ಎಂದರು.
ಟಿ.ಪಿ. ರಮೇಶ್ ಮಾತನಾಡಿ, ಆಕಾಂಕ್ಷಿಗಳು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಹೊಂದಾಣಿಕೆ ಮನೋಭಾವದೊಂದಿಗೆ ಸಹಕರಿಸ ಬೇಕೆಂದು ಕೋರಿದರು. ಆದರೂ ವಾತಾವರಣ ತಿಳಿಯಾಗಲಿಲ್ಲ.
ಬಳಿಕ ಅಪ್ಪಣ್ಣ ಹಾಗೂ ರಾಜೇಶ್ ಯಲ್ಲಪ್ಪ ಇವರುಗಳೊಂದಿಗೆ ಸಮಿತಿಯ ಪ್ರಮುಖರು ಮಾತುಕತೆ ನಡೆಸಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕಾಂಗ್ರೆಸ್ನ ರಾಜೇಶ್ ಯಲ್ಲಪ್ಪ ಅವರನ್ನು ಬೆಂಬಲಿಸಬೇಕೆAದು ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮೊಬೈಲ್ ಸಂದೇಶಗಳನ್ನು ಹರಿಯಬಿಟ್ಟಿದ್ದರು. ಪಕ್ಷಾತೀತವಾಗಿ ರಾಜಕೀಯ ರಹಿತವಾಗಿ ನಡೆಯುವ ದಸರಾದಲ್ಲಿ ಈ ರೀತಿ ಸಂದೇಶಗಳನ್ನು ರವಾನೆ ಮಾಡಿರುವುದು ನೋವುಂಟುಮಾಡಿದೆ ಎಂದು ಪ್ರಮುಖರ ಗಮನ ಸೆಳೆದ ಅಪ್ಪಣ್ಣ ಈ ಹಿನ್ನೆಲೆಯಲ್ಲಿ ಪ್ರಕಾಶ್ ಆಚಾರ್ಯ ಸಭೆಯಲ್ಲಿ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದರು. ಅದರಂತೆ ಪ್ರಕಾಶ್ ಆಚಾರ್ಯ ವಿಷಾದ ವ್ಯಕ್ತಪಡಿಸಿದರು. ಅಪ್ಪಣ್ಣ ಸ್ಪರ್ಧೆಯಿಂದ ಹಿಂದೆ ಸರಿದರು. ರಾಜೇಶ್ ಯಲ್ಲಪ್ಪ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ವೇದಿಕೆಯಲ್ಲಿ ದಸರಾ ಸಮಿತಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಮಾಜಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್, ದಶಮಂಟಪ ಸಮಿತಿ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಮನುಮಂಜುನಾಥ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್, ಆಯುಕ್ತ ವಿಜಯ ಉಪಸ್ಥಿತರಿದ್ದರು. ಕಳೆದ ಬಾರಿಯ ಖಜಾಂಚಿ ಶ್ವೇತಾ ಪ್ರಶಾಂತ್ ಲೆಕ್ಕ ಪತ್ರ ಮಂಡಿಸಿದರು. ಸಂಧ್ಯಾ ಅಶೋಕ್ ಪ್ರಾರ್ಥಿಸಿ, ರಾಜೇಶ್ ಯಲ್ಲಪ್ಪ ನಿರೂಪಿಸಿ, ಮಾಜಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಸ್ವಾಗತಿಸಿದರು.
ಪೇಟೆ ರಾಮಮಂದಿರದಲ್ಲಿ ಪೂಜೆ
ದಸರಾ ಉತ್ಸವದ ಹಿನ್ನೆಲೆಯಲ್ಲಿ ಸಂಪ್ರದಾಯದAತೆ ಇಂದು ಬೆಳಿಗ್ಗೆ ಪೇಟೆ ಶ್ರೀ ರಾಮಮಂದಿರ ದೇವಾಲಯದಲ್ಲಿ ದಸರಾ
ಸಮಿತಿ ವತಿಯಿಂದ ಪೂಜೆ ಸಲ್ಲಿಸಲಾಯಿತು.