ಗೋಣಿಕೊಪ್ಪ ವರದಿ, ಸೆ. ೧೧ : ಮುಳಿಯ ಪ್ರತಿಷ್ಠಾನ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಆಯೋಜಿಸಿದ್ದ ಕೃಷ್ಣ ವೇಷ ಸ್ಪರ್ಧೆಯಲ್ಲಿ ೬೦ ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಗಮನ ಸೆಳೆದರು. ಶಿಕ್ಷಕಿ ಬೆಂಜಾAಡ ರಶ್ಮಿ ದೇವಯ್ಯ ಮಾತನಾಡಿ ಕಿರಿಯ ವಯಸ್ಸಿನಲ್ಲಿ ಪ್ರತಿಭೆ ಅನಾವರಣಕ್ಕೆ ವೇದಿಕೆ ದೊರೆತಿರುವುದು ಉತ್ತಮ ಬೆಳವಣಿಗೆ ಎಂದರು.
ಕಲಾವಿದೆ ಪುತ್ತಾಮನೆ ವಿದ್ಯಾ ಜಗದೀಶ್ ಮಾತನಾಡಿ, ಶ್ರೀಕೃಷ್ಣ ಧರ್ಮವನ್ನು ನಂಬಿ ರಕ್ಷಣೆಗೆ ನಿಂತಿದ್ದರು. ಇದರಂತೆ ನಾವು ಧರ್ಮ ಪೋಷಣೆಗೆ ಒತ್ತು ನೀಡಬೇಕಿದೆ ಎಂದರು. ಮುಳಿಯ ಸಹಾಯಕ ವ್ಯವಸ್ಥಾಪಕ ಅನಿಲ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಇದ್ದರು.