ವೀರಾಜಪೇಟೆ, ಸೆ. ೧೧: ಪರಿಸರದಲ್ಲಿ ನದಿಗಳು ಬಹುಮುಖ್ಯ ಪಾತ್ರವಹಿಸುತ್ತವೆ. ನದಿಗಳ ಹಂಗಿಲ್ಲದೆ ಮನುಷ್ಯರು ಬದುಕುವುದು ಸಾಧ್ಯವಿಲ್ಲ. ಅರ್ಧ ದಕ್ಷಿಣ ಭಾರತವನ್ನು ಸಲಹುವ ಕಾವೇರಿ ನದಿಯ ಹರಿವು ಶೇಕಡ ನಲವತ್ತರಷ್ಟು ಕಡಿಮೆಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಹಾಗಾಗಿ ನದಿಮೂಲದ ರಕ್ಷಣೆಗೆ ಸರ್ಕಾರಗಳು ಒತ್ತು ಕೊಡಬೇಕು ಎಂದು ಪತ್ರಕರ್ತೆ ಉಷಾಪ್ರೀತಮ್ ಹೇಳಿದರು.
ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವೀರಾಜಪೇಟೆ ಕಾವೇರಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಕೊಡಗು ಜಿಲ್ಲೆಗೆ ಸಂಬAಧಿಸಿದ ಪರಿಸರದ ಕುರಿತಾದ ಸುಲೋಚನಾ ಡಾ.ಎಂ.ಜಿ ನಾಗರಾಜ್ ಅವರು ಸ್ಥಾಪಿಸಿರುವ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡಿದರು. ಕಾವೇರಿ ನದಿ ಹರಿವು ಯಾಕಾಗಿ ಕಡಿಮೆಯಾಗಿದೆ ಎನ್ನುವ ನಿಟ್ಟಿನಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ವೈಜ್ಞಾನಿಕ ಅಧ್ಯಯನಕ್ಕೆ ಮುಂದಾಗಬೇಕು. ನದಿಯ ಹರಿವನ್ನು ಕಡಿಮೆಯಾಗಲು ಏನೇನು ಅಡೆತಡೆಗಳಾಗಿವೆ ಎಂಬುದನ್ನು ವೈಜ್ಞಾನಿಕವಾಗಿ ಪತ್ತೆಹಚ್ಚುವ ಮೂಲಕ ಕಾವೇರಿ ಎಂದಿನAತೆ ಮೈದುಂಬಿ ಹರಿಯುವಂತೆ ಮಾಡಿದರೆ ಪರಿಸರದಲ್ಲಿ ಸಾಕಷ್ಟು ಸಮಸ್ಯೆಗಳು ತನ್ನಿಂದ ತಾನೇ ಸರಿಹೋಗುತ್ತವೆ ಎಂದರು.
ವೀರಾಜಪೇಟೆ ತಾಲೂಕು ಕ.ಸಾ.ಪ ಅಧ್ಯಕ್ಷ ರಾಜೇಶ್ ಪದ್ಮನಾಭ ಮಾತನಾಡಿ, ಈ ರೀತಿಯ ದತ್ತಿನಿಧಿ ಉಪನ್ಯಾಸಗಳನ್ನು ಕನ್ನಡ ಸಾಹಿತ್ಯ ಪರಿಷತ್ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸುವ ಮುಖ್ಯ ಉದ್ದೇಶವೆಂದರೆ ವಿದ್ಯಾರ್ಥಿಗಳು ಸಮಾಜದ ನಾನಾ ವಿಚಾರಗಳ ಬಗ್ಗೆ ಜ್ಞಾನ ಹೊಂದುವAತಾಗಲಿ ಎಂದಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಆಚೆಗಿನ ಜಗತ್ತನ್ನು ನೋಡಬೇಕು. ಪರಿಸರ ಸಂಬAಧಿತ ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕಾವೇರಿ ಕಾಲೇಜಿನ ಪ್ರಾಂಶುಪಾಲ ಡಾ. ಆನಂದ್ ಕಾರ್ಲ ಮಾತನಾಡಿ ಪರಿಸರದ ಸಮತೋಲನ ಬಹಳ ಮುಖ್ಯ. ಪ್ರಕೃತಿಗೆ ಯಾವುದು ಮುಖ್ಯ ಮತ್ತು ಅಮುಖ್ಯ ಎಂದು ಇರುವುದಿಲ್ಲ. ವಿದ್ಯಾರ್ಥಿಗಳು ಗಿಡಗಳನ್ನು ನೆಡಿ, ನೆಟ್ಟ ಗಿಡಕ್ಕೆ ನಿಮ್ಮ ಹೆಸರನ್ನೇ ಇಟ್ಟು ಪೋಷಣೆ ಮಾಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ಕಸಾಪ ಗೌರವ ಕೋಶಾಧಿಕಾರಿ ಶಬರೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಸಾಪದ ಗೌರವ ಕಾರ್ಯದರ್ಶಿ ಸಾವಿತ್ರಿ ಹೆಚ್.ಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಸಾಪದ ಗೌರವ ಕಾರ್ಯದರ್ಶಿ ಸಾವಿತ್ರಿ ಹೆಚ್.ಜಿ ಸ್ವಾಗತಿಸಿದರೆ ಕಾವೇರಿ ಕಾಲೇಜಿನ ವಿದ್ಯಾರ್ಥಿನಿ ಧನ್ಯಾಶ್ರೀ ಗೌರಮ್ಮ, ಉಪನ್ಯಾಸಕಿ ಅಂಬಿಕಾ ನಿರೂಪಿಸಿದರು.