ವೀರಾಜಪೇಟೆ, ಸೆ. ೧೧: ಭೌಗೋಳಿಕವಾಗಿ ಚಿಕ್ಕದಾಗಿದ್ದರೂ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟç ಅಂತರರಾಷ್ಟಿçÃಯ ಮಟ್ಟದಲ್ಲಿ ಚಾಪುಮೂಡಿಸಿರುವ ವೀರಾಜಪೇಟೆ ತಾಲೂಕಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಪೂರಕ ಸೌಲಭ್ಯಗಳೇ ಇಲ್ಲದಂತಾಗಿದೆ.

ಇದು ಕ್ರೀಡಾಪಟುಗಳು ಹಾಗೂ ಯುವಜನತೆಯ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ವೀರಾಜಪೇಟೆ ತಾಲೂಕಿನಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಅಂದಾಜು ೨೫ರಿಂದ ೩೦ ಸಾವಿರ ಶಾಲಾ ವಿದ್ಯಾರ್ಥಿಗಳಿದ್ದಾರೆ. ರಾಜ್ಯ, ರಾಷ್ಟç ಅಂತರರಾಷ್ಟಿçÃಯ ಮಟ್ಟದ ಆಟಗಾರರು, ಒಲಂಪಿಯನ್ ಹಾಕಿ ಆಟಗಾರರಿದ್ದಾರೆ. ಜೂನಿಯರ್ ಕಾಲೇಜು ಮೈದಾನದಲ್ಲಿ ಬಾಸ್ಕೆಟ್ ಬಾಲ್ ಕೋರ್ಟ್ ಇದ್ದರೂ ಕೂಡ ಅದು ನಿಷ್ಪçಯೋಜಕವಾಗಿದೆ.

ಒಳಾಂಗಣ ಕ್ರೀಡಾಂಗಣ ಅವ್ಯವಸ್ಥೆ: ವೀರಾಜಪೇಟೆ ಜೂನಿಯರ್ ಕಾಲೇಜು ಬಳಿ ನೂತನವಾಗಿ ನಿರ್ಮಿಸಿರುವ ೬ ಕೋಟಿ ರೂ.ಗಳ ಒಳಾಂಗಣ ಕ್ರಿಡಾಂಗಣ ನಿರ್ಮಾಣದ ಸಲುವಾಗಿ ೨೦೧೨ ರಲ್ಲಿ ಬಿಜೆಪಿ ಸರಕಾರ ಇದ್ದಾಗ ನಾಲ್ಕು ಕೋಟಿ ಅನುದಾನ ಬಜೆಟ್‌ನಲ್ಲಿ ನೀಡಲಾಗಿತ್ತು ಕಾರಣಾಂತರದಿAದ ಈ ಕ್ರೀಡಾಂಗಣ ಕೆಲಸ ತಡವಾಯಿತು. ಇದೀಗ ಕ್ರೀಡಾಂಗಣ ಬಹುತೇಕ ಪೂರ್ಣವಾಗಿದೆ, ಹೊರ ಆವರಣದಲ್ಲಿ ತಡೆಗೋಡೆ, ನೆಲ ಹಾಸುಗಳಿಗೆ ಮಳೆ ಹಾನಿಯಲ್ಲಿ ೯೧ ಲಕ್ಷ ರೂ ನೀಡಲಾಗಿತ್ತು. ಈ ಒಳಾಂಗಣದಲ್ಲಿ ನಾಲ್ಕು ಒಳಾಂಗಣ ಬ್ಯಾಡ್‌ಮಿಂಟನ್ ಕೋರ್ಟ್ಗಳಿವೆ.

ಆದರೆ ಇಲ್ಲಿ ಕ್ರೀಡಾಂಗಣಕ್ಕೆ ಮುಖ್ಯವಾಗಿ ಇರಬೇಕಾದ ವಿದ್ಯುತ್ ಸಂಪರ್ಕವೇ ಇಲ್ಲದಾಗಿದೆ. ಕ್ರೀಡಾಂಗಣಕ್ಕೆ ಬೇಕಾದ ವಿದ್ಯುತ್ ಕಾಮಗಾರಿ ಪೂರ್ಣಗೊಂಡಿದ್ದು ವಿದ್ಯುತ್ ಸಂಪರ್ಕ ಕಿತ್ತುಕೊಳ್ಳಲಾಗಿದೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಇಲ್ಲಿನ ಮೂಲಭೂತ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಗಿದ್ದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಂತರರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಬ್ಯಾಡ್‌ಮಿಂಟನ್ ಆಡುವಾಗ ಅದಕ್ಕೆ ಸೂಕ್ತವಾದ ವಿದ್ಯುತ್ ಬೆಳಕು ನೀಡುವ ಬಲ್ಬನ್ನು ಅಳವಡಿಸಬೇಕು. ಜನರೇಟರ್, ಯುಪಿಎಸ್ ವ್ಯವಸ್ಥೆ ಯಾವುದು ಇಲ್ಲ, ಇಲ್ಲಿ ಎಲ್ಲವನ್ನೂ ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ಒಬ್ಬ ವ್ಯಕ್ತಿಯನ್ನು ನೇಮಿಸಬೇಕು. ಸರಕಾರಿ ಕಟ್ಟಡಕ್ಕೆ ಇಂತಿಷ್ಟು ಸದಸ್ಯತ್ವ ಹಣ ನೀಡಿರುವಾಗ ಅದಕ್ಕೆ ತಕ್ಕ ಮೂಲಭೂತ ಸೌಕರ್ಯ ಒದಗಿಸಬೇಕು ಎನ್ನುವುದು ಕ್ರೀಡಾಪಟುಗಳಾದ ಕೂತಂಡ ಸುರೇಶ್, ಚೇಂದ್ರಮಾಡ ಗಿಲ್ಲ್ ಸೋಮಯ್ಯ, ಅಮ್ಮುಣಿಚಂಡ ಸುಬ್ರಮಣಿ, ಪಿ.ಕೆ ಹನೀಫ್, ರಶೀದ್, ಭರತ್ ರೈ, ನೌಶದ್, ಪಿ.ಜಿ. ಸುಮೇಶ್ ಮುಂತಾದವರ ಆಗ್ರಹವಾಗಿದೆ.

ಅವ್ಯವಸ್ಥೆಯ ಕಾಮಗಾರಿ

೧೩-೧೪ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಭಾಗ್ಯ ದೊರಕಿದ್ದರೂ ಒಳಾಂಗಣದಲ್ಲಿ ಹಾಕಿರುವ ಟೈಲ್ಸ್ ಕೆಲವೊಂದು ಅಲ್ಲಲ್ಲಿ ಒಡೆದುಹೋಗಿದೆ. ಕೊಠಡಿಗಳ ಮರದ ಬಾಗಿಲುಗಳು ಬಿರುಕು ಬಿಟ್ಟಿವೆ. ಉತ್ತಮ ಮರದ ಬಾಗಿಲುಗಳನ್ನು ಅಳವಡಿಸದಿರುವುದು ಇದಕ್ಕೆ ಕಾರಣವಾಗಿದೆ. ಗೋಡೆಯ ಮೇಲೆ ಹಸಿರು ಪಾಚಿ ಕಟ್ಟಿಕೊಂಡಿದೆ.

ಕ್ರೀಡಾಪಟುಗಳಿಗಿಲ್ಲ ಪೂರಕ ವಾತಾವರಣ

ಐತಿಹಾಸಿಕ ಹಿನ್ನೆಲೆಯೊಂದಿಗೆ ಗಡಿ ಪ್ರದೇಶವಾಗಿದ್ದು ವಾಣಿಜ್ಯ ಕ್ಷೇತ್ರದಲ್ಲೂ ತೀವ್ರಗತಿಯಲ್ಲಿ ಬೆಳೆಯುತ್ತಿರುವ ನಗರದಲ್ಲಿ ಕ್ರೀಡೆಗೆ ಉತ್ತೇಜನ ನೀಡುವಂತಹ ಯಾವೊಂದು ಮೈದಾನ ಇಲ್ಲದಿರುವುದು ಕ್ರೀಡಾಪಟುಗಳ ಆಕ್ರೋಶಕ್ಕೆ ಕಾರಣವಾಗಿದೆ. ಕ್ರೀಡಾ ಸೌಲಭ್ಯಗಳಲ್ಲಿ ಸಂಪೂರ್ಣ ಶೂನ್ಯ ಸಾಧನೆಯಾಗಿದ್ದು ಪೂರಕ ವಾತಾವರಣ ಕ್ರೀಡಾಪಟುಗಳಿಗಿಲ್ಲ.

ಐತಿಹಾಸಿಕವಾಗಿ ವೀರಾಜಪೇಟೆ ಶ್ರೀಮಂತವಾಗಿದೆ, ಆದರೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಶಿಖರವೇರುತ್ತಿರುವ ಯುವಪೀಳಿಗೆಗೆ ಪೂರಕವಾದ ಕ್ರೀಡಾಂಗಣ, ಸಲಕರಣೆಗಳನ್ನು ಒದಗಿಸುವಲ್ಲಿ ಬಡವಾಗಿದೆ. ತಾಲೂಕಿನ ಕ್ರೀಡಾಪಟುಗಳು ಕ್ರೀಡೆಯ ವಿವಿಧ ವಿಭಾಗಗಳಲ್ಲಿ ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಅಂತವರಿಗೆ ನೆರವಾಗಲು ಕನಿಷ್ಟ ಸರಕಾರದಿಂದ ಕ್ರೀಡಾಂಗಣವಾಗಲಿ, ಸಲಕರಣೆಗಳಾಗಲಿ ಆರೋಗ್ಯ ವೃದ್ಧಿಗೆ ಸರಕಾರಿ ಜಿಮ್ ಸಹ ಇಲ್ಲದಿರುವುದು ಬೇಸರಕ್ಕೆ ಕಾರಣವಾಗಿದೆ.

ತಾಲೂಕಿನಲ್ಲಿ ದೊಡ್ಡ ಮಟ್ಟದ ಯುವಕರ ಪಡೆಯಿದೆ. ಹಾಕಿ, ಕ್ರಿಕೆಟ್, ವಾಲಿಬಾಲ್‌ನಂತಹ ಕ್ರೀಡೆಗಳು ವರ್ಷವಿಡೀ ನಡೆಯುತ್ತಿರುತ್ತವೆ. ಆದರೆ ಮೈದಾನದ ಕೊರತೆಯಿಂದ ಖಾಸಗಿಯವರ ಬಯಲು ಜಾಗ, ಗದ್ದೆಗಳಲ್ಲಿ ವಿವಿಧ ಶಾಲಾ ಮೈದಾನಗಳಲ್ಲಿ ಪಂದ್ಯಾವಳಿಗಳನ್ನು ಏರ್ಪಡಿಸುವ ದುಸ್ಥಿತಿ ಈ ಭಾಗದ ಯುವಕರಿಗೆ ಬಂದೊದಗಿದೆ.

ಪ್ರತಿಭೆಗಳಿಗಿಲ್ಲ ಸೌಕರ್ಯ

ಬೆಳಗ್ಗೆ ಸಾಕಷ್ಟು ಮಹಿಳೆಯರು ಪುರುಷರು ರಸ್ತೆಯಲ್ಲಿಯೇ ವಾಯುವಿಹಾರಕ್ಕೆ ಆಗಮಿಸುತ್ತಾರೆ. ಕ್ರೀಡಾಪಟುಗಳು ರಸ್ತೆಯಲ್ಲಿಯೇ ವ್ಯಾಯಾಮ ಮಾಡುವ ಸ್ಥಿತಿ ಇದೆ. ಹೆಚ್ಚಿನವರು ಶಾಲೆಗಳ ಮೈದಾನವನ್ನೇ ಆಶ್ರಯಿಸಬೇಕಾಗಿದೆ. ಒಂದೆರಡು ಗಂಟೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮಾಡಲು ಸೂಕ್ತ ಮೈದಾನದ ಕೊರತೆ ಇದೆ.

ಈಗಲಾದರೂ ಜನಪ್ರತಿನಿಧಿಗಳು ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಬೇಕು ಎಂಬುದು ಕ್ರೀಡಾಪಟುಗಳ ಆಗ್ರಹವಾಗಿದೆ. ಮುಂದಿನ ಪ್ರತಿಭೆಗಳು ಕ್ರೀಡಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ನೀಡಲು ಒಳಾಂಗಣ ಕ್ರೀಡಾಂಗಣ ಅನೂಕೂಲವಾಗಲಿದೆ.