ಕುಶಾಲನಗರ, ಸೆ. ೧೨: ಕುಶಾಲನಗರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕೂಲಿ ಮಾಡುತ್ತಿದ್ದ ಅನಾಥ ವ್ಯಕ್ತಿಯೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದು ಆತನ ಅಂತ್ಯಕ್ರಿಯೆಯನ್ನು ಸ್ಥಳೀಯ ಆಟೋ ಚಾಲಕರು ನಡೆಸಿ ಮಾನವೀಯತೆ ಮೆರೆದರು.
ಕುಶಾಲನಗರ ಬಸ್ ನಿಲ್ದಾಣದಲ್ಲಿ ಕಳೆದ ಹಲವು ವರ್ಷಗಳಿಂದ ಕೂಲಿ ಕೆಲಸ ನಿರ್ವಹಿಸಿಕೊಂಡು ಇತ್ತೀಚೆಗೆ ಅನಾರೋಗ್ಯ ಸಂದರ್ಭ ಆಟೋ ಚಾಲಕರು ಸೇರಿದಂತೆ ಸ್ಥಳೀಯರು ಆತನನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು.
ಶನಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಅನಾಥ ವ್ಯಕ್ತಿಯ ಶವವನ್ನು ಕುಶಾಲನಗರಕ್ಕೆ ತಂದು ಸ್ಥಳೀಯ ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗದ ಪ್ರಮುಖರಾದ ಬೆಳ್ಳುಳ್ಳಿ ಮಂಜು, ಯೋಗೇಶ, ಲೋಕೇಶ, ಸಿಪಾಯಿ, ಸಂಪತ್ ಕುಮಾರ್, ಗಿರಿ ಮತ್ತು ಬಸ್ ನಿಲ್ದಾಣದ ಸಿಬ್ಬಂದಿಗಳು ಸೇರಿ ಕುಶಾಲನಗರ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.