ಮಡಿಕೇರಿ, ಸೆ. ೧೦: ಮಡಿ ಕೇರಿಯ ಗೌಳಿಬೀದಿ ಅಂಗನವಾಡಿ ಕೇಂದ್ರದಲ್ಲಿ ರಾಷ್ಟಿçÃಯ ಪೋಷಣ್ ಅಭಿಯಾನ ಕಾರ್ಯಕ್ರಮದ ಅಂಗವಾಗಿ ರೋಟರಿ ಕ್ಲಬ್ ಮಡಿಕೇರಿ ವುಡ್ಸ್ ನ ಸಹಯೋಗದಲ್ಲಿ ಪೌಷ್ಟಿಕ ಆಹಾರ ಸಪ್ತಾಹವನ್ನು ಏರ್ಪಡಿಸಲಾಗಿತ್ತು.
ರೋಟರಿ ಕ್ಲಬ್ನ ಪದಾಧಿಕಾರಿ ಗಳಾದ ‘ಶಕ್ತಿ’ ಪತ್ರಿಕೆಯ ಸಲಹಾ ಸಂಪಾದಕ ಅನಂತಶಯನ, ಸಂಪತ್ ಕುಮಾರ್ ಸರಳಾಯ, ಪ್ರಮೀಳಾ ಶೆಟ್ಟಿ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಾಮೂಹಿಕ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಅAಗನವಾಡಿ ಕಾರ್ಯಕರ್ತೆ ಗೀತಾ ಸ್ವಾಗತಿಸಿದರು. ಸಂಪತ್ ಕುಮಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಸ್ಪಂದನಾ ಮಹಿಳಾ ಸಂಘದ ಅಧ್ಯಕ್ಷೆ ಕಟ್ರತನ ಲಲಿತಾ ಅಯ್ಯಣ್ಣ ಅವರು ಪ್ರಾಸ್ತಾವಿಕ ನುಡಿಯಾಡಿ, ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ತಿಳಿಸಿದರು.
ಅನಂತಶಯನ ಅವರು ಮಾತ ನಾಡಿ, ತಾಯಂದಿರು ಶಕ್ತಿ ಸ್ವರೂಪರು, ಇವರ ತ್ಯಾಗ ಮಕ್ಕಳ ಸರ್ವತೋ ಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಸ್ಪAದನಾ ಮಹಿಳಾ ಸಂಘದ ಸದಸ್ಯೆರೆಲ್ಲಾ ಪೌಷ್ಟಿಕ ಆಹಾರಗಳನ್ನು ತಯಾರಿಸಿ ಸ್ಪರ್ಧೆಯಲ್ಲಿ ಭಾಗವಹಿ ಸಿದ್ದರು. ಪ್ರಮೀಳಾ ಶೆಟ್ಟಿ ಹಾಗೂ ಸಂಪತ್ ಕುಮಾರ್ ಅವರು ತೀರ್ಪುಗಾರರಾಗಿದ್ದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಭಾಗವ ಹಿಸಿದ ಎಲ್ಲರಿಗೂ ಪ್ರೋತ್ಸಾಹಕ ಬಹು ಮಾನವನ್ನು ರೋಟರಿ ಸಂಸ್ಥೆಯವರು ನೀಡಿದರು. ಗೀತಾ ಅಶೋಕ್ ಕಾರ್ಯ ಕ್ರಮ ನಿರೂಪಿಸಿದರು. ಸ್ಪಂದನಾ ಮಹಿಳಾ ಸಂಘದ ಕಾರ್ಯದರ್ಶಿ ವಿಜಯಲಕ್ಷಿö್ಮ ವಂದಿಸಿದರು.