ಕಡಂಗ, ಸೆ. ೧೦: ಎಸ್ವೈಎಸ್ ಮತ್ತು ಎಸ್ಕೆಎಸ್ಎಸ್ಎಫ್ ಶಾಖಾ ವತಿಯಿಂದ ಹತ್ತನೇ ವಾರ್ಷಿಕ ಮಜಿಲಿಸುನೂರ್ ಹಾಗೂ ಇಸ್ಲಾಮಿಕ್ ಕಥಾಪ್ರಸಂಗವು ಕಡಂಗ ಶಾದಿ ಮಹಲ್ ಸಭಾಂಗಣದಲ್ಲಿ ನಡೆಸಲಾಯಿತು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾತ್ ಅಧ್ಯಕ್ಷ ಅಬ್ದುಲ್ಲ ಅವರು ನಿರ್ವಹಿಸಿದರು. ಖತೀಬ್ ಉಸ್ತಾದರಾದ ಲತೀಫ್ ಲತೀಫಿ ಪ್ರಾರ್ಥನೆ ನಿರ್ವಹಿಸಿಕೊಟ್ಟರು.
ಮಜಿಲಿಸುನ್ನೋರ್ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲಾ ನಾಯಿಬ್ ಕಾಜಿ ಅಬ್ದುಲ್ಲಾ ಮುಸ್ಲಿಯರ್ ಎಡಪಲ್ಲ ಅವರು ನೇತೃತ್ವ ವಹಿಸಿದರು.
ಸ್ವಾಗತವನ್ನು ಮದರಸ ಮುಖ್ಯೋಪಾಧ್ಯಾಯರಾದ ಶುಹೈಬ್ ಫೈಜಿ ನೆರವೇರಿಸಿದರು. ಕಥಾಪ್ರಸಂಗವನ್ನು ಕೇರಳದ ಪ್ರಖ್ಯಾತ ಝುಬಿರ್ ಮಾಸ್ಟರ್ ಮತ್ತು ಸಂಗಡಿಗರು ಅರ್ಥವತ್ತಾದ ಶೈಲಿಯಲ್ಲಿ ಸಂಬೋಧಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಅಮಿಲಾ ಅಧ್ಯಕ್ಷ ಹ್ಯಾರಿಸ್ ಅವರನ್ನು ಸನ್ಮಾನಿಸಲಾಯಿತು
ಎಸ್ಕೆಎಸ್ಎಸ್ಎಫ್ ಸಮಿತಿ ಸದಸ್ಯರಾದ ಇಸಾಕ್, ಇಕ್ಬಾಲ್, ಸಮದ್, ಅಬೂಬಕರ್, ಹನೀಫ್ ಫೈಜಿ, ಯುಸಫ್ ಮುಸ್ಲಿಯಾರ್, ಹನೀಫ್ ಉಸ್ತಾದ್, ಮಾಹಿನ್ ದಾರಿಮಿ, ಅಬ್ದುಲ್ ರೆಹಮಾನ್, ಇಬ್ರಾಹಿಂ, ಜುನೈದ್, ಮಮ್ಮು, ಉಸ್ಮಾನ್ ಉಪಸ್ಥಿತರಿದ್ದರು.