ಕೂಡಿಗೆ, ಸೆ. ೦೯: ಕರ್ನಾಟಕ ಸರಕಾರದಿಂದ ಸುಮಾರು ರೂ. ೧.೮೮ ಕೋಟಿ ವೆಚ್ಚದಲ್ಲಿ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಕೆ ಹಾಲು ಉತ್ಪಾದನಾ ಘಟಕದ ನೂತನ ಕಟ್ಟಡ ಮತ್ತು ಅದಕ್ಕೆ ಸಂಬAಧಿಸಿದ ಕಾಮಗಾರಿಗಳನ್ನು ರಾಜ್ಯ ಕುರಿ ಉಣ್ಣೆ ನಿಗಮದ ರಾಜ್ಯ ವ್ಯವಸ್ಥಾಪಕ ನಿರ್ದೇಶಕ ಶಿವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಮಗಾರಿಯು ಪ್ರಾರಂಭವಾದ ಸಂದರ್ಭದಲ್ಲಿ ಕಟ್ಟಡ ಮತ್ತು ಅದರ ಉಸ್ತುವಾರಿಯನ್ನು ಪಶುಪಾಲನಾ ಇಲಾಖೆ ವಹಿಸಿಕೊಂಡಿದ್ದು ಆ ಇಲಾಖೆಯ ಮುಖೇನ ಟೆಂಡರ್ ಪ್ರಕ್ರಿಯೆ ಮೂಲಕ ಕಟ್ಟಡ ಕಾಮಗಾರಿ ಗಳು ನಡೆದಿದ್ದು, ನಂತರದ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಈ ಘಟಕವನ್ನು ಕುರಿ ಮತ್ತು ಉಣ್ಣೆ ನಿಗಮಕ್ಕೆ ವಹಿಸಲಾದ ಹಿನ್ನೆಲೆಯಲ್ಲಿ ಅದಕ್ಕೆ ಸಂಬAಧ ಪಟ್ಟಂತೆ ಯೋಜನೆಗಳನ್ನು ಕೈಗೊಂಡು ಅಭಿವೃದ್ಧಿಪಡಿಸುವ ಉದ್ದೇಶದಿಂದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮೈಸೂರು ವಿಭಾಗಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡು ಅಭಿವೃದ್ಧಿಪಡಿಸುವ ಚಿಂತನೆ ವ್ಯಕ್ತಪಡಿಸಿದ್ದಾರೆ.

(ಮೊದಲ ಪುಟದಿಂದ) ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ರಾಜ್ಯದಲ್ಲೇ ಪ್ರಥಮ ವಾಗಿರುವ ಮೇಕೆ ಹಾಲು ಘಟಕದ ಅಭಿವೃದ್ಧಿಗೆ ಸಂಬAಧಿಸಿದAತೆ ರಾಜ್ಯ ಸರಕಾರವು ಎಲ್ಲಾ ರೀತಿಯ ಸಹಕಾರ ನೀಡಿದೆ. ರೈತರಿಗೆ ಅನುಕೂಲವಾಗುವ ಮತ್ತು ಮೇಕೆ, ಕುರಿಗಳನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ನಿಗಮದ ಮೂಲಕ ಎಲ್ಲಾ ರೀತಿಯ ಕಾರ್ಯಸೂಚಿ ಯೋಜನೆಗಳನ್ನು ಕೈಗೊಳ್ಳಲು ಕ್ರಮವಹಿಸಲಾಗಿದೆ.

ಈಗಾಗಲೇ ಕಾಯ್ದಿರಿಸಿರುವ ೧೧೨ ಎಕರೆ ಪ್ರದೇಶದ ಜಾಗದಲ್ಲಿ ತಡೆಗೋಡೆ ನಿರ್ಮಿಸಿ ಮೇಕೆಗಳಿಗೆ ಬೇಕಾಗುವ ಹುಲ್ಲುಗಳನ್ನು ಬೆಳೆಸುವುದು ಮತ್ತು ಮೇಕೆಗಳನ್ನು ಖರೀದಿಸಲು ರಾಜ್ಯಮಟ್ಟದ ಸಮಿತಿ ರಚಿಸಿ ಈ ವಾತಾವರಣಕ್ಕೆ ಹೊಂದಿಕೊಳ್ಳುವAತಹ ಮೇಕೆಗಳನ್ನು ಖರೀದಿಸಿ, ಬ್ಯಾಡಗೊಟ್ಟ ಕೇಂದ್ರದಲ್ಲಿ ಸಾಕಾಣಿಕೆ ಮಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭ ಮೈಸೂರು-ಕೊಡಗು ಕುರಿ ಉಣ್ಣೆ ನಿಗಮದ ನಿರ್ದೇಶಕ ಡಾ. ನಾಗರಾಜ್, ಇಲಾಖೆಯ ರಾಜೇಗೌಡ, ಕೊಡಗು ಜಿಲ್ಲೆಯ ಕುರಿ ಮತ್ತು ಉಣ್ಣೆ ಸಹಕಾರ ನಿಗಮದ ಜಿಲ್ಲಾಧ್ಯಕ್ಷ ಡಿ.ಆರ್. ಪ್ರಭಾಕರ್ ಮತ್ತು ನಿರ್ದೇಶಕರಾದ ಉದಯಕುಮಾರ್, ಕಾರ್ಯದರ್ಶಿ ಭರಮಣ್ಣ ಬೆಟಗೇರಿ ಇದ್ದರು.