ಸುAಟಿಕೊಪ್ಪ, ಸೆ. ೯: ಒಂದೇ ಜಾತಿ, ಒಂದೇ ಮತ, ಒಂದೇ ಧರ್ಮ ಎಂದು ಸಾರಿದ. ನಾರಾಯಣ ಗುರುಗಳ ತತ್ತ್ವವನ್ನು ಎಲ್ಲರೂ ಪಾಲಿಸಬೇಕೆಂದು ಶಿಕ್ಷಕ ಸತೀಶ್ ಅವರು ಹೇಳಿದರು.

ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ, ದೇಯಿ ಬೈದೇತಿ ಬಿಲ್ಲವ ಸೇನಾ ಸಂಘ, ಬಿಲ್ಲವ ವಿದ್ಯಾರ್ಥಿ ಘಟಕದ ವತಿಯಿಂದ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಗುರುವಾರ ರಾತ್ರಿ ನಡೆದ ನಾರಾಯಣ ಗುರುಗಳ ೧೬೯ ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ಕಾರ್ಯಕ್ರಮಕ್ಕೆ ಮೊದಲು ನಾರಾಯಣ ಗುರುಗಳ ಭಾವಚಿತ್ರಕ್ಕೆ ಮೋಣಪ್ಪ ಪೂಜಾರಿ ಅವರು ಪೂಜೆ, ಪುಷ್ಪಾರ್ಚನೆ, ಮಂಗಳಾರತಿ ಮಾಡಿದರು.

ನಂತರ ನೆರೆದಿದ್ದ ಬಿಲ್ಲವ ಬಂಧುಗಳು ಸಿಹಿ ಹಂಚಿ ನಾರಾಯಣ ಗುರುಗಳ ಆಚರಣೆ ನಡೆಸಿದರು.

ಬಿಲ್ಲವ ಸಂಘದ ಅಧ್ಯಕ್ಷ ಬಿ.ಎಂ.ಮಣಿ, ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಕೋಟ್ಯಾನ್, ಖಜಾಂಚಿ ಚಂದ್ರ, ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಮಧುನಾಗಪ್ಪ, ಪದಾಧಿಕಾರಿಗಳಾದ ನಾಗೇಶ್ ಪೂಜಾರಿ, ಡಾ.ಯಶೋಧರ ಪೂಜಾರಿ, ಕೆ.ಪಿ.ಜಗನ್ನಾಥ್, ರಮೇಶ್ ಪೂಜಾರಿ, ಬಾಬು ಪೂಜಾರಿ, ಜಿನ್ನಪ್ಪ ಪೂಜಾರಿ, ವೀಣಾ, ಅಂಜಲಿ, ಪೂರ್ಣಿಮಾ, ಗೀತಾ ಸೇರಿದಂತೆ ಹೆಚ್ವಿನ ಸಂಖ್ಯೆಯಲ್ಲಿ ಬಿಲ್ಲವ ಸಮುದಾಯ ಭಾಂದವರು ಇದ್ದರು. ಹಿರಿಯರಿಗೆ, ಈ ಹಿಂದೆ ನಡೆದ ಕ್ರೀಡಾಕೂಟಕ್ಕೆ ಸಹಕರಿಸಿದ ದಾನಿಗಳಿಗೆ ನೆನೆಪಿನ ಕಾಣಿಕೆ ನೀಡಿ ಗೌರವಿಸಲಾಯಿತು.