ಸಿದ್ದಾಪುರ, ಸೆ. ೮: ಬಾಡಗ ಬಾಣಂಗಾಲ ಕಾಫಿ ತೋಟದಲ್ಲಿ ಹಾಡಹಗಲಿನಲ್ಲೇ ೩೦ಕ್ಕೂ ಹೆಚ್ಚು ಕಾಡಾನೆಗಳು ಕಂಡುಬAದಿದ್ದು, ಜನರು ಭಯಭೀತರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಮಾಲ್ದಾರೆ, ಮೈಲಾಪುರ, ಕರಡಿಗೋಡು, ಬಾಡಗ ಬಾಣಂಗಾಲ, ಹುಂಡಿ, ಮಟ್ಟಂ, ಬಜೆಕೊಲ್ಲಿ ಸೇರಿದಂತೆ ಹಲವೆÀಡೆ ಕಾಡಾನೆಗಳ ಹಿಂಡು ದಿನನಿತ್ಯ ಕಾಣಿಸಿಕೊಳ್ಳುತ್ತಿದ್ದು ಕಾರ್ಮಿಕರು, ಬೆಳೆಗಾರರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ನೆಮ್ಮದಿಯಾಗಿ ನಡೆದಾಡಲು ಸಾಧ್ಯ ವಾಗದಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ.
ಬಾಣಂಗಾಲ ಆರ್ಗನಿಕ್ ತೋಟ ದಲ್ಲಿ ಪ್ರತ್ಯಕ್ಷಗೊಂಡ ಮೂವತ್ತಕ್ಕೂ ಹೆಚ್ಚು ಕಾಡಾನೆಗಳನ್ನ ಕಂಡ ಕಾರ್ಮಿಕರು ಭಯಭೀತರಾಗಿ ಮನೆಗೆ ಹಿಂತಿರುಗಿ ದ್ದಾರೆ.
ಕಾಫಿ ತೋಟಗಳಲ್ಲಿ ಮರಿಯಾನೆ ಗಳೊಂದಿಗೆ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡಿನಿAದ ಅಪಾರ ಪ್ರಮಾಣದ ಕೃಷಿ ಫಸಲುಗಳು ನಾಶವಾಗುತ್ತಿದೆ. ಸುತ್ತಮುತ್ತಲ ಭಾಗದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಹಿಂದೇಟು ಹಾಕುತ್ತಿದ್ದು, ಶಿಕ್ಷಣದಿಂದ ವಂಚಿತರಾಗಿ ಮನೆಯಲ್ಲಿ ಉಳಿದುಕೊಳ್ಳಬೇಕಾದ ಪರಿಸ್ಥಿತಿಯು ಸೃಷ್ಟಿಯಾಗಿದೆ. ಹೊಟ್ಟೆಪಾಡಿನ ಜೀವನಕ್ಕಾಗಿ ತೋಟ ಕೆಲಸಕ್ಕೆ ತೆರಳುವ ಕಾರ್ಮಿಕರು
(ಮೊದಲ ಪುಟದಿಂದ) ಕಾಡು ಪ್ರಾಣಿಗಳ ಭಯದ ನಡುವೆ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗಷ್ಟೇ ಹಾಡಹಗಲಿನಲ್ಲೇ ಮಟ್ಟಂ ಗ್ರಾಮದಲ್ಲಿ ಮಹಿಳೆಯೊಬ್ಬಳನ್ನು ಬಲಿ ತೆಗೆದುಕೊಂಡ ನಂತರ ಇದೀಗ ಕಾಡಾನೆಗಳು ಗುಂಪುಗಳಾಗಿ ಕಾಣಿಸಿಕೊಳ್ಳುತ್ತಿವೆ.
ಕೆಲ ದಿನಗಳಿಂದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆಯಾದರೂ, ಆನೆಗಳು ಕಾಡಿಗೆ ತೆರಳಿ ಮತ್ತೆ ವಾಪಸ್ ಬರುತ್ತಿವೆ. ಕಾಡಾನೆಗಳನ್ನು ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. -ಮುಬಾರಕ್