ವೀರಾಜಪೇಟೆ, ಸೆ. ೮: ರಾತ್ರಿ ಮನೆಗೆ ಬಂದ ಬಾಲಕನ ಮೇಲೆ ಹಲ್ಲೆ ಮಾಡಿ ಹತ್ಯೆಗೈದ ಘಟನೆ ವೀರಾಜಪೇಟೆ ಹೊರವಲಯದ ಕಾವಾಡಿ ಕಾಲೋನಿಯಲ್ಲಿ ನಡೆದಿದೆ.

ಅಮ್ಮತ್ತಿ ಹೋಬಳಿಯ ಕಾವಾಡಿ ಗ್ರಾಮದ ನಿವಾಸಿ ದಿ. ಅರುಣ್ ಎಂಬವರ ಪುತ್ರ ದಿವಿನ್ ಸೋಮಯ್ಯ ಹತ್ಯೆಯಾದ ಯುವಕ. ಅದೇ ಗ್ರಾಮದ ನಿವಾಸಿ ವೃತ್ತಿಯಲ್ಲಿ ಚಾಲಕನಾಗಿರುವ ವಿ.ಪಿ. ರಮೇಶ್ (೪೪) ಬಂಧಿತ ಆರೋಪಿ. ಮೃತನ ತಾಯಿ ಕೆಲವು ವರ್ಷಗಳಿಂದ ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದು, ಮೃತ ದಿವಿನ್ ಹಾಗೂ ಆತನ ಸಹೋದರ ತನ್ನ ಅಜ್ಜಿ ಜೊತೆ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಮೃತ ಬಾಲಕ ಎಸ್.ಎಸ್. ಎಲ್.ಸಿ ಪೂರ್ಣಗೊಳಿಸಿ ಖಾಸಗಿ ಟ್ಯೂಷನ್ ಸೆಂಟರ್‌ನಲ್ಲಿ ಪದವಿ ಪೂರ್ವ ಕಲಿಕೆಗೆ ತೆರಳುತ್ತಿದ್ದ.

ತಾ. ೭ ರ ರಾತ್ರಿ ೧೧ ರಿಂದ ೧೨-೩೦ರ ಸಮಯದಲ್ಲಿ ರಮೇಶ್ ಅವರ ಮನೆಗೆ ಹಿಂಬದಿ ಬಾಗಿಲಿನಿಂದ ಒಳ ಪ್ರವೇಶ ಮಾಡಲು ದಿವಿನ್ ಪ್ರಯತ್ನ ಮಾಡಿದ್ದಾನೆ. ನಿದ್ರೆಯಲ್ಲಿದ್ದ ರಮೇಶ್ ಅವರಿಗೆ ಸದ್ದು ಕೇಳಿ ಎದ್ದ ಸಂದರ್ಭ ಬಾಲಕÀ ಮನೆಯೊಳಗೆ ಬಂದಿರುವುದು ಕಂಡುಬAದಿದೆ. ರಮೇಶ್ ಮತ್ತು ಬಾಲಕನ ಮಧ್ಯೆ ವಾಗ್ವಾದ ನಡೆದು ಕಲಹ ಏರ್ಪಟ್ಟಿದೆ. ರಮೇಶ್ ಮನೆಯಲ್ಲಿದ್ದ ಮರದ ಕಟ್ಟಿಗೆಯಿಂದ ಬಾಲಕನ ಮೇಲೆ ಹಲ್ಲೆ ಮಾಡಿದ್ದು, ಗಾಯಗೊಂಡ ಬಾಲಕ ಮನೆಗೆ ಓಡಿ ಬಂದು ಕೊಂಚ ಹೊತ್ತು ವಿಶ್ರಾಂತಿ ತೆಗೆದುಕೊಂಡಿದ್ದಾನೆ. ನಂತರದಲ್ಲಿ ಬಾಲಕ ತಮ್ಮನೊಂದಿಗೆ ಕುಡಿಯಲು ನೀರು ಕೇಳಿದ್ದಾನೆ.

(ಮೊದಲ ಪುಟದಿಂದ) ತೀವ್ರವಾಗಿ ಅಸ್ವಸ್ಥನಾಗಿರುವುದನ್ನು ಕಂಡು ತಮ್ಮ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾನೆ.

ಸಂಬAಧಿಕರು ಮುಂಜಾನೆ ೪ ಗಂಟೆ ಸುಮಾರಿಗೆ ಬಂದು ಬಾಲಕನನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯ ವೈದ್ಯರು ಪರೀಕ್ಷೆ ಮಾಡಿದ್ದು ಮರಣ ಹೊಂದಿದ್ದಾನೆ ಎಂದು ದೃಢಪಡಿಸಿದ್ದಾರೆ.

ವೀರಾಜಪೇಟೆ ಗ್ರಾಮಾಂತರ ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆ ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆಯ ವೇಳೆಯಲ್ಲಿ ಆರೋಪಿಯು ಹತ್ಯೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ.

ಮೃತ ಬಾಲಕನ ಸಂಬAಧಿ ಭವಾನಿ ನೀಡಿದ ದೂರಿನ ಅನ್ವಯ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಕೊಲೆ ೩೦೨, ೩೦೭ ಐ.ಪಿ.ಸಿ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

ಮೃತ ಬಾಲಕನ ಮೃತದೇಹವನ್ನು ಮರಣೋತ್ತರ ಪರಿಕ್ಷೇಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಿಸುದಾರರಿಗೆ ಮೃತದೇಹ ಹಸ್ತಾಂತರಿಸಲಾಗುವುದು. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಡಿವೈಎಸ್ಪಿ ಆರ್. ಗಂಗಾಧರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. -ಕಿಶೋರ್ ಕುಮಾರ್ ಶೆಟ್ಟಿ