ಬೆಂಗಳೂರು, ಸೆ. ೭ : ತಾ.೨ ರಂದು ಸೂರ್ಯನ ಅಧ್ಯಯನಕ್ಕೆಂದು ಶ್ರೀಹರಿಕೋಟಾದ ಸತೀಶ್ ಧವಾನ್ ಬಾಹ್ಯಾಕಾಶ ಕೇಂದ್ರದಿAದ ಉಡಾವಣೆಗೊಂಡ ಆದಿತ್ಯ ಎಲ್-೧ ನೌಕೆಯು ದೂರದಿಂದ ಭೂಮಿ ಹಾಗೂ ಚಂದ್ರನ ಚಿತ್ರವನ್ನು ಸೆರೆಹಿಡಿದಿದೆ. ಸೂರ್ಯನ ಬೆಳಕಿಗೆ ಪ್ರಕಾಶಿತವಾಗಿರುವ ಭೂಮಿಯ ಅರ್ಧಭಾಗವನ್ನು ಚಿತ್ರದಲ್ಲಿ ಗಮನಿಸಬಹುದು. ಚಿತ್ರದ ಬಲ ಭಾಗದಲ್ಲಿ ಕತ್ತಲಲ್ಲಿರುವ ಭೂಮಿಯ ಸ್ವಲ್ಪ ಬಲ ಭಾಗದಲ್ಲಿ ಚಂದ್ರನು ಸಣ್ಣ ಚುಕ್ಕಿಯಾಗಿ ಕಾಣಿಸುತ್ತಿದ್ದಾನೆ. ಸೆಪ್ಟೆಂಬರ್ ೪ ರಂದು ಈ ಚಿತ್ರವನ್ನು ಆದಿತ್ಯ ಸೆರೆಹಿಡಿದಿದ್ದು, ಇಂದು ಇಸ್ರೋ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

(ಮೊದಲ ಪುಟದಿಂದ) ಇದೀಗ ಆದಿತ್ಯ ನೌಕೆಯು ೨೮೨ ಕಿ.ಮೀ (ಕನಿಷ್ಟ), ೪೦,೨೨೫ ಕಿ.ಮೀ (ಗರಿಷ್ಠ) ಕಕ್ಷೆಯಲ್ಲಿ ಭೂಮಿಯ ಸುತ್ತ ಚಲಿಸುತ್ತಿದೆ. ತಾ.೧೦ ರಂದು ಈ ಕಕ್ಷೆಯನ್ನು ಇನ್ನೂ ಹೆಚ್ಚಿಸುವುದಾಗಿ ಇಸ್ರೋ ಮಾಹಿತಿ ನೀಡಿದೆ.