ಮಡಿಕೇರಿ, ಸೆ. ೭: ನಗರದ ಲಕ್ಷಿö್ಮನರಸಿಂಹ ಕಲ್ಯಾಣ ಮಂಟಪದಲ್ಲಿ ನಾಯರ್ ಸೊಸೈಟಿಯ ಮಡಿಕೇರಿ ಕರಯೋಗಮ್ ಸಮಿತಿ ವತಿಯಿಂದ ಓಣಂ ಆಚರಣೆ ನಡೆಯಿತು. ಶಾಸಕ ಡಾ. ಮಂಥÀರ್ ಗೌಡ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸಮಾಜದ ಉತ್ತಮ ಕಾರ್ಯ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಕೆ.ಎನ್.ಎಸ್.ಎಸ್. ರಾಜ್ಯಾಧ್ಯಕ್ಷ ರಾಮಚಂದ್ರ ಪಾಲೇರಿ, ಮಾಜಿ ಉಪಾಧ್ಯಕ್ಷ ವಿಜಯಕುಮಾರ್ ಹಾಗೂ ಜಂಟಿ ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ಪಾಲ್ಗೊಂಡು ಮಡಿಕೇರಿ ನಾಯರ್ ಸೊಸೈಟಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಡಿಕೇರಿ ಕರಯೋಗಮ್ ಅಧ್ಯಕ್ಷ ಕೆ.ಕೆ. ಹರೀಶ್ ಕುಮಾರ್, ಮಡಿಕೇರಿ ನಾಯರ್ ಸೊಸೈಟಿಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಯೋಗ ಶಿಕ್ಷಕ ಮಹೇಶ್ ಕುಮಾರ್ ಹಾಗೂ ನಾಯರ್ ಸೊಸೈಟಿಯ ೯ ಮಂದಿ ಹಿರಿಯ ತಾಯಂದಿರನ್ನು ಗೌರವಿಸಲಾಯಿತು.
ಖಜಾಂಚಿ ಉತ್ತಮನ್, ಶಾಲಿನಿ, ಪ್ರೀಜಿತಾ ಶ್ರೀಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಅಧ್ಯಕ್ಷೆ ಉಷಾ ಹರೀಶ್ ಸ್ವಾಗತಿಸಿ, ರಜನಿ ರಾಜನ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ರಾಜನ್ ವಂದಿಸಿದರು.
ಮಹಿಳೆಯರಿAದ ತಿರುವಾದಿರಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.