*ಗೋಣಿಕೊಪ್ಪ, ಸೆ. ೭: ಶಿಕ್ಷಕರ ದಿನಾಚರಣೆಯ ಅಂಗವಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವೀರಾಜಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ನಡೆಸಲಾಯಿತು.

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೌಮ್ಯ ಬಾಲು ಭಾರದಗುಂಡು ಎಸೆದು ಕ್ರೀಡೆ ಮತ್ತು ಸಂಸ್ಕೃತಿ ಸ್ಪರ್ಧೆಗೆ ಚಾಲನೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಪ್ರಕಾಶ್, ಸಮನ್ವಯಾಧಿಕಾರಿ ವನಜಾಕ್ಷಿ, ಸರ್ಕಾರಿ ನೌಕರರ ಸಂಘದ ಉಪಾಧÀ್ಯಕ್ಷ ಪದ್ಮಕುಮಾರ್, ಗೌರವಾಧ್ಯಕ್ಷ ವಿಶ್ವನಾಥ್, ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯತ್ರಿ, ಬಿ.ಇ.ಒ ಕಚೇರಿ ವ್ಯವಸ್ಥಾಪಕರು ದಿನೇಶ್ ಭಂಡಾರಕರ್, ನಿವೃತ್ತ ಮುಖ್ಯ ಶಿಕ್ಷಕಿ ಸಿದ್ದರಾಜಮ್ಮ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧÀ್ಯಕ್ಷ ಹೆಚ್.ಕೆ. ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧÀ್ಯಕ್ಷ ಸುರೇಂದ್ರ ಈ, ಬಿ.ಆರ್.ಪಿ, ಸಿಆರ್‌ಪಿಗಳು, ಸಂಘದ ಪದಾಧಿಕಾರಿಗಳು, ಶಿಕ್ಷಕರು ಇದ್ದರು.

ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಶಾಲೆಯ ಶಿಕ್ಷಕರು, ಅತಿಥಿ ಶಿಕ್ಷಕರು ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಕ್ರೀಡಾ ಸ್ಪರ್ಧೆಯಲ್ಲಿ ವಾಲಿಬಾಲ್, ಹಗ್ಗ-ಜಗ್ಗಾಟ, ಶಾಟ್ ಪುಟ್, ೧೦೦ ಮೀ ಓಟ, ಥ್ರೋಬಾಲ್, ಹಗ್ಗ ಜಗ್ಗಾಟ, ‘ಬಾಂಬ್ ಇನ್ ದಿ ಸಿಟಿ’ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಸಪ್ರಶ್ನೆ, ಅಭಿನಯಗೀತೆ, ಭಾವಗೀತೆ, ನೆನಪಿನ ಶಕ್ತಿ ಆಟ ನಡೆದವು.