ವೀರಾಜಪೇಟೆ, ಸೆ. ೭ : ಮಟ್ಕ ದಂಧೆ ಸಂಬAಧ ವೀರಾಜಪೇಟೆ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

ಬೇತ್ರಿ ಗ್ರಾಮದ ನಿವಾಸಿಗಳಾದ ಸೈನುಲ್ಲಾ ಅಭೀದ್ ಟಿ.ಹೆಚ್.ಅಲಿಯಾಸ್ ಅಬೀದಾ (೪೫) ಮತ್ತು ಪಿ.ಎಂ. ಇಬ್ರಾಹಿಂ (೩೫) ಹಾಗೂ ಮೂರ್ನಾಡು ನಿವಾಸಿ ಅಬ್ದುಲ್ ಸಲಾಂ (೪೫) ಬಂಧಿತ ಆರೋಪಿಗಳು.

ಖಚಿತ ಮಾಹಿತಿ ಆಧಾರದ ಮೇಲೆ ಬೇತ್ರಿ ಜಂಕ್ಷನ್‌ನಲ್ಲಿ ಧಾಳಿ ನಡೆಸಿದ ಗ್ರಾಮಾಂತರ ಪೊಲೀಸರು ಬಂಧಿತರಿAದ ರೂ. ೫೦೪೦, ಕೃತ್ಯಕ್ಕೆ ಬಳಸಿದ್ದ ಮೂರು ಮೊಬೈಲ್ ಫೋನ್ ಮತ್ತು ಎರಡು ಆಟೋ (ಕೆಎ-೧೨ಬಿ-೭೭೮೪) (ಕೆಎ-೧೩ಎಂ.ಬಿ-೩೨೨೦) ಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

ತಾ.೬ರÀಂದು ಸಂಜೆ ಸುಮಾರು ೬ ಗಂಟೆ ವೇಳೆಗೆ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿಯಲ್ಲಿ ಕಾರೊಂದರಲ್ಲಿ ಮಟ್ಕ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ನಗರ ಪೊಲೀಸರು ಧಾಳಿ ನಡೆಸಿ ವೀರಾಜಪೇಟೆ ನಿವಾಸಿಗಳಾದ ಪ್ರತೀಕ್, ಅಫ್ರಿದ್ ಮತ್ತು ಸರ್ಫರೋಜ್ ಎಂಬ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿAದ ರೂ. ೫೦೦೦ ನಗದು ಮತ್ತು ಕೃತ್ಯಕ್ಕೆ ಬಳಸಿದ ಮಾರುತಿ ಸುಜುಕಿ ಕಾರು (ಕೆಎ-೦೪ಎಂಎ-೭೫೨೩)ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವೀರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಮೋಹನ್ ಕುಮಾರ್ ಮತ್ತು ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಠಾಣಾಧಿಕಾರಿ ರವೀಂದ್ರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಸಿ.ಸಿ. ಮಂಜುನಾಥ್ ಹಾಗೂ ನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.