ವೀರಾಜಪೇಟೆ, ಸೆ. ೬: ಐತಿಹಾಸಿಕ ಹಿನೆÀ್ನಲೆ ಹೊಂದಿರುವ ವೀರಾಜಪೇಟೆ ಗೌರಿ-ಗಣೇಶೋತ್ಸವ ಹಬ್ಬವನ್ನು ಯಾವುದೇ ಅಡೆತಡೆಗಳಿಲ್ಲದೆ ಉತ್ಸವ ಸಮಿತಿಗಳು ಹಾಗೂ ಸಾರ್ವಜನಿಕರ ಸಹಕಾರ ದೊಂದಿಗೆ ಅದ್ಧೂರಿಯಾಗಿ ಆಚರಿಸುವಂತಾಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಇಲ್ಲಿನ ಪುರಭವನದಲ್ಲಿ ವೀರಾಜಪೇಟೆ ಗೌರಿ ಗಣೇಶ ನಾಡ ಹಬ್ಬ ಒಕ್ಕೂಟದ ವತಿಯಿಂದ ಗೌರಿಗಣೇಶ ಹಬ್ಬದ ಪ್ರಯುಕ್ತ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಟ್ಟಣದ ವಿವಿಧ ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪಿಸುವ ಸಮಿತಿಗಳು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದ ರೀತಿಯಲ್ಲಿ ನೋಡಿಕೊಳ್ಳಬೇಕು. ಸರ್ಕಾರದ ನೀತಿ ನಿಬಂಧನೆಗಳನ್ನು ಪಾಲಿಸಬೇಕು ಎಂದರು.

ಶ್ರೀ ಬಸವೇಶ್ವರ ದೇವಾಲಯದ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಎನ್.ಜಿ ಕಾಮತ್ ಮಾತನಾಡಿ ಗಣೇಶ ಮೂರ್ತಿಗೆ ಪೂಜೆ ಮುಗಿಯುವಾಗ ಸಂಜೆ ೮ ಗಂಟೆಯಾಗುತ್ತದೆ. ನಂತರ ನಡೆಯುವ ವೇದಿಕೆ ಕಾರ್ಯಕ್ರಮ ಮುಗಿಯುವಾಗ ೧೧ ಗಂಟೆಯಾಗಲಿದೆ. ಪೊಲೀಸ್ ಇಲಾಖೆ ಸಹಕಾರ ನೀಡಬೇಕು. ನಾವು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದಿಲ್ಲ. ಶಾಂತಿಯುತವಾಗಿ ವರ್ಷಂಪ್ರತಿ ಹಬ್ಬ ಆಚರಿಸುತ್ತೇವೆ. ಸ್ಥಳೀಯ ಕಲಾವಿದರು ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ಆದ್ದರಿಂದ ಅಧಿಕಾರಿಗಳು

(ಮೊದಲ ಪುಟದಿಂದ) ಎಲ್ಲಾ ಸಮಿತಿಗಳಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಇದೇ ಸಂದರ್ಭ ಶಾಸಕರಿಗೆ ಒಕ್ಕೂಟದ ಪದಾಧಿಕಾರಿಗಳು ೧೭ ಬೇಡಿಕೆಗಳನ್ನೊಳಗೊಂಡ ಮನವಿ ಸಲ್ಲಿಸಿದರು. ಮನವಿಗೆ ಸಂಬAಧಿಸಿ ಉತ್ತರಿಸಿದ ಶಾಸಕರು ಗಣೇಶ ವಿಸರ್ಜನೆಯ ದಿನ ಅಪರಾಹ್ನದ ನಂತರ ರಜೆ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ವೀರಾಜಪೇಟೆ ಪುರಸಭೆಯಾದರೂ ಹೆಚ್ಚಿನ ಅನುದಾನ ನೀಡಲು ಅನುದಾನ ಇಲ್ಲ. ಆದರೂ ವರ್ಷಂಪ್ರತಿ ನೀಡುವಂತೆ ಅನುದಾನ ನೀಡಲಾಗುತ್ತದೆ. ಸರಕಾರಿ ಕಚೇರಿ ಅಲಂಕಾರದ ವಿಚಾರದಲ್ಲಿ ಅನುಮತಿ ಇತ್ಯಾದಿ ಸಮಸ್ಯೆಗಳಿವೆೆ. ಗಣೇಶ ಪ್ರತಿಷ್ಠಾಪನೆ ಅನುಮತಿ ಸೇರಿದಂತೆ ಎಲ್ಲವನ್ನು ಏಕಗವಾಕ್ಷಿಯಲ್ಲಿ ನಡೆಯುವಂತೆ ಮಾಡಲಾಗುತ್ತದೆ. ರಸ್ತೆ ದುರಸ್ಥಿ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ. ಉಳಿದಂತೆ ಎಲ್ಲಾ ಬೇಡಿಕೆಗಳ ಬಗ್ಗೆ ಪೊಲೀಸ್, ಪುರಸಭೆ, ಕಂದಾಯ, ಆರೋಗ್ಯ, ಅಗ್ನಿಶಾಮಕ, ಚೆಸ್ಕಾಂ, ಪಿಡಬ್ಲುö್ಯಡಿ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಅಲ್ಲದೆ ಈ ಬಾರಿ ತಾಲೂಕು ತಹಶೀಲ್ದಾರ್ ರಾಮಚಂದ್ರ ಅವರಿಗೆ ತಮ್ಮ ಅಧ್ಯಕ್ಷತೆಯಲ್ಲಿ ಒಂದು ನೂತನ ಸಮಿತಿ ಮಾಡಲು ಸೂಚಿಸಿದ್ದು, ಅವರು ಸಮಿತಿ ರಚಿಸುತ್ತಾರೆ. ಆ ಸಮಿತಿ ಮೂಲಕ ಅಧಿಕಾರಿಗಳನ್ನು ಒಳಗೊಂಡು ಉತ್ಸವವನ್ನು ಎಲ್ಲಾ ರೀತಿಯಲ್ಲಿ ಸಮರ್ಪಕವಾಗಿ ನಡೆಸಲಾಗುತ್ತದೆ ಎಂದು ಹೇಳಿದರು.

ಪಂಜರಪೇಟೆ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಪ್ರದೀಪ್ ರೈ ಮಾತನಾಡಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಗುಂಡಿಮುಚ್ಚುವ ಕೆಲಸವನ್ನು ಸಮರ್ಪಕವಾಗಿ ಮಾಡುವುದಿಲ್ಲ. ಇದೇ ಮೊದಲ ಬಾರಿಗೆ ಸಭೆಗೆ ಹಾಜರಾಗಿದ್ದಾರೆ. ಎಷ್ಟೇ ಮನವಿ ಮಾಡಿದರೂ ತಕ್ಷಣಕ್ಕೆ ಸ್ಪಂದಿಸುವ ಕೆಲಸ ಮಾಡುವುದಿಲ್ಲ ಎಂದು ಆರೋಪಿಸಿದರು.

ಸಭೆಯಲ್ಲಿ ಐತಿಹಾಸಿಕ ಗೌರಿ ಗಣೇಶ ನಾಡಹಬ್ಬ ಒಕ್ಕೂಟದ ಅಧ್ಯಕ್ಷ ಸಾಯಿನಾಥ್, ಕಾರ್ಯದರ್ಶಿ ರಾಕೇಶ್, ತಾಲೂಕು ತಹಶೀಲ್ದಾರ್ ರಾಮಚಂದ್ರ ಡಿವೈಎಸ್‌ಪಿ ಮೋಹನ್ ಕುಮಾರ್, ಪೊಲೀಸ್ ವೃತ್ತ ನಿರೀಕ್ಷಕ ಶಿವರುದ್ರ, ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್, ಲೋಕೋಪಯೋಗಿ ಸಹಾಯಕ ಅಭಿಯಂತರ ರಾಮಣ್ಣಗೌಡ, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಪುರಸಭೆ ಸದಸ್ಯರುಗಳು ಹಾಗೂ ೨೨ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.