ಅಮೇರಿಕಾ, ಸೆ. ೬ :ಪ್ರತಿ ವರ್ಷ ಆಗಸ್ಟ್ - ಸೆಪ್ಟೆಂಬರ್ನಲ್ಲಿ ಅಮೇರಿಕಾದಲ್ಲಿ ಜರುಗುವ ಟೆನ್ನಿಸ್ ಗ್ರಾಂಡ್ ಸ್ಲಾಮ್ ನ ಭಾಗವಾದ ಯು.ಎಸ್ ಓಪನ್ನ ಸೆಮಿಫೈನಲ್ ಹಂತಕ್ಕೆ, ಭಾರತವನ್ನು ಪ್ರತಿನಿಧಿಸುತ್ತಿರುವ ಕೊಡಗಿನವರಾದ ರೋಹನ್ ಬೋಪಣ್ಣ ಹಾಗೂ ಆಸ್ಟೆçÃಲಿಯಾದ ಎಬ್ಡನ್ ಅವರುಗಳ ಪುರುಷರ ಡಬಲ್ಸ್ ಜೋಡಿಯು ತಲುಪಿದೆ. ೪೩ ವರ್ಷದ ಬೋಪಣ್ಣ ಅವರು ಜುಲೈನಲ್ಲಿ ಇಂಗ್ಲ್ಯಾAಡ್ನಲ್ಲಿ ನಡೆದ ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯಲ್ಲಿಯೂ ತನ್ನ ಡಬಲ್ಸ್ ಜೋಡಿ ಎಬ್ಡನ್ ಅವರೊಂದಿಗೆ ಸೆಮಿಫೈನಲ್ ತಲುಪಿ ಸಾಧನೆ ಮಾಡಿದ್ದರು. ಇದೀಗ ಮತ್ತೆ ಅದೇ ಜೋಡಿ ಯು.ಎಸ್ ಓಪನ್ನಲ್ಲಿಯೂ ಸೆಮಿಫೈನಲ್ ಹಂತ ತಲುಪಿದೆ. ಕ್ವಾರ್ಟರ್ ಫೈನಲ್ನಲ್ಲಿ ಅಮೇರಿಕಾದ ನತೇನಿಯಲ್ ಹಾಗೂ ಜ್ಯಾಕ್ಸನ್ ಜೋಡಿಯ ವಿರುದ್ಧ ೭-೬(೧೦), ೬-೧ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿ ತಾ.೭ ರಂದು (ಇಂದು) ಫ್ರಾನ್ಸ್ ಜೋಡಿಯೊಂದಿಗೆ ನಡೆಯುವ ಸೆಮಿಫೈನಲ್ ಹಂತಕ್ಕೆ ಬೋಪಣ್ಣ ಹಾಗೂ ಎಬ್ಡನ್ ಪ್ರವೇಶಾತಿ ಪಡೆದುಕೊಂಡಿದ್ದಾರೆ.