ಮಡಿಕೇರಿ, ಸೆ. ೬: ಶಾಲೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿ ಮಕ್ಕಳ ಪುಸ್ತಕಗಳನ್ನು ಹರಿದು ಹಾಕಿ ಮದ್ಯ ಸೇವಿಸಿ ಪರಾರಿಯಾದ ಘಟನೆ ವೀರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘಟ್ಟದಳ ಸರ್ಕಾರಿ ತಮಿಳು ಶಾಲೆಯಲ್ಲಿ ನಡೆದಿದೆ.
ಎಂದಿನAತೆ ಶಾಲೆಗೆ ಆಗಮಿಸಿದ ಶಿಕ್ಷಕರುಗಳಿಗೆ ಕೊಠಡಿಯೊಂದರ ಬೀಗವನ್ನು ಕಬ್ಬಿಣದ ರಾಡಿನಿಂದ ಮುರಿಯಲಾಗಿರುವ ದೃಶ್ಯ ಕಂಡು ಬಂದಿದ್ದು ಶಾಲಾ ಮುಖ್ಯ ಶಿಕ್ಷಕ ಅಶ್ರಫ್ ಸಿದ್ದಾಪುರ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಠಡಿಯೊಂದರಲ್ಲಿ ಸಂಗ್ರಹಿಸಿ ಇಡಲಾಗಿದ್ದ ಪುಸ್ತಕಗಳನ್ನು ಹರಿದು ಹಾಕಿ ಚೆಲ್ಲಾಪಿಲ್ಲಿ ಮಾಡಲಾಗಿದ್ದು, ಕೊಠಡಿಯಲ್ಲಿಯೇ ಮದ್ಯ ಸೇವಿಸಿರುವುದು ಕಂಡುಬAದಿದೆ. ಬಾಟಲಿ ಮುಚ್ಚಳ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಲತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಹಿಂದೆಯೂ ಕಳ್ಳತನ ಪ್ರಕರಣ ನಡೆದಿದ್ದು ಕಳ್ಳತನ ಆರೋಪಿಗಳನ್ನು ಬಂಧಿಸಬೇಕೆAದು ಒತ್ತಾಯಿಸಿದ್ದಾರೆ. -ಮುಬಾರಕ್