ಭಾಗಮಂಡಲ, ಸೆ. ೬: ಭಾಗಮಂಡಲದ ಕೃಷಿ ಪತ್ತಿನ ಸಹಕಾರ ಸಂಘವು ೨೦೨೨-೨೩ರ ಸಾಲಿನಲ್ಲಿ ೪೭.೦೯ ಲಕ್ಷ ರೂ. ಲಾಭ ಗಳಿಸಿದೆ. ಸಂಘದಲ್ಲಿ ಒಟ್ಟು ೩೮೬೯ ಸದಸ್ಯರಿದ್ದಾರೆ ಎಂದು ಸಂಘದ ಅಧ್ಯಕ್ಷ ಹೊಸೂರು ಜೆ. ಸತೀಶ್ ಕುಮಾರ್ ಹೇಳಿದರು . ಭಾಗಮಂಡಲದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಸಂಘದ ದುಡಿಯುವ ಬಂಡವಾಳ ೨೮೭೪.೯೧ ಲಕ್ಷ ರೂ. ಇದ್ದು ೨೦೨೦ -೨೩ರ ಸಾಲಿನಲ್ಲಿ ಅತ್ಯಧಿಕ ೧೦೩.೮೦ ಕೋಟಿ ರೂ. ವ್ಯವಹಾರ ನಡೆಸಲಾಗಿದೆ ಎಂದರು. ಪಾವತಿಸಿದ ಪಾಲು ಬಂಡವಾಳ ೧೪೨.೫೩ ಲಕ್ಷ , ನಿಧಿ ೨೩೪.೩೦ ಲಕ್ಷ ಹಾಗೂ ಠೇವಣಾತಿಗಳು ೧ ೬೯೨.೮೪ ಲಕ್ಷ ಇರುವುದಾಗಿ ತಿಳಿಸಿದರು .೨೦೨೨- ೨೩ರ ಸಾಲಿನಲ್ಲಿ ಸದಸ್ಯರಿಗೆ ಕೃಷಿ ಸಾಲ ೭೨೩.೩೧ ಲಕ್ಷ ರೂ. ಹಾಗೂ ಕೃಷಿಯೇತರ ಸಾಲ ೭೯೯.೧೭ ಲಕ್ಷ ರೂ. ನೀಡಲಾಗಿದೆ ಎಂದರು.

ರೈತರ ಅನುಕೂಲಕ್ಕಾಗಿ ಆರ್‌ಟಿಸಿ ವ್ಯವಸ್ಥೆ , ಜೆರಾಕ್ಸ್ ಹಾಗೂ ರೈತರಿಗಾಗಿ ಮಣ್ಣು ಪರೀಕ್ಷೆ ಕೇಂದ್ರದ ವ್ಯವಸ್ಥೆ ಸಂಘದಲ್ಲಿ ಲಭ್ಯವಿದ್ದು ಎಲ್ಲಾ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಸರ್ಕಾರದಿಂದ ಸಹಕಾರ ಸಂಘಗಳ ಮೂಲಕ ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ ,ಜನ ಔಷಧಿ ಕೇಂದ್ರ ಹಾಗೂ ಕಾಮನ್ ಸರ್ವಿಸ್ ಸೆಂಟರ್ ತೆರೆಯುವ ಯೋಜನೆಗಳಿದ್ದು, ಪೆಟ್ರೋಲ್ ಬಂಕ್ ಹಾಗೂ ಗ್ಯಾಸ್ ಏಜೆನ್ಸಿ ಮಾಡಲು ಸ್ಥಳಾವಕಾಶದ ಕೊರತೆ ಇದೆ. ಜನ ಔಷಧಿ ಕೇಂದ್ರ ಹಾಗೂ ಕಾಮನ್ ಸರ್ವಿಸ್ ಸೆಂಟರ್ ತೆರೆಯಲು ಸಂಘದಲ್ಲಿ ಅವಕಾಶವಿದ್ದು ಈ ಯೋಜನೆಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು .ಕಾಫಿ ಬೆಳೆಗಾರರ ಅನುಕೂಲಕ್ಕಾಗಿ ಕಾಫಿ ಔಟ್‌ಟರ್ನ್ ಪರೀಕ್ಷಾ ಘಟಕ ತೆರೆಯಲು ನಿರ್ಧರಿಸಲಾಗಿದ್ದು ರೈತರಿಗೆ ವ್ಯಾಪಾರಸ್ಥರಿಂದ ಆಗುವ ಅನ್ಯಾಯವನ್ನು ತಡೆಯಲು ಅನುಕೂಲವಾಗುತ್ತದೆ ಎಂದರು.

ಸAಘದ ಸದಸ್ಯರಿಗೆ ೨೦೨೨- ೨೩ರ ಸಾಲಿನಲ್ಲಿ ೪೭.೦೯ ಲಕ್ಷ ರೂ. ಲಾಭದಲ್ಲಿ ಶೇ.೧೫ ಡಿವಿಡೆಂಟ್ ನೀಡಲು ನಿರ್ಧರಿಸಲಾಗಿದೆ. ೨೫೪೨ ಪೂರ್ಣ ಶೇರುದಾರ ಸದಸ್ಯರಿಗೆ ೬,೩೫೫೦೦ ಮಹಾಸಭೆ ಭತ್ಯೆಯನ್ನು ನೀಡಲಾಗುತ್ತದೆ . ಅಂದಾಜು ೨೫ ಲಕ್ಷ ರೂಪಾಯಿ ಸದಸ್ಯರಿಗೆ ನೇರವಾಗಿ ಲಾಭದಲ್ಲಿ ಪಾವತಿಯಾಗುತ್ತದೆ ಎಂದರು. ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಕೊಡುವ ಪ್ರೋತ್ಸಾಹದ ಮೊತ್ತವನ್ನು ಪ್ರಥಮ ಬಹುಮಾನ ೪,೦೦೦, ದ್ವಿತೀಯ ಬಹುಮಾನ ೩,೦೦೦ ತೃತೀಯ ಬಹುಮಾನ ೨೫೦೦ಕ್ಕೆ ಹೆಚ್ಚಿಸಲಾಗಿದೆ ಎಂದರು. ಸಂಘವು ೨೦೩೦ರಲ್ಲಿ ತನ್ನ ೧೨೫ನೇ ವರ್ಷಾಚರಣೆಯನ್ನು ಆಚರಿಸಲಿದ್ದು ಅದಕ್ಕಾಗಿ ಈ ವರ್ಷದ ಲಾಭದಲ್ಲಿ ೪೨,೫೫೪ ರೂ. ಕಾಯ್ದಿರಿಸಲಾಗಿದೆ ಎಂದರು.

ಸAಘದ ನಿರ್ದೇಶಕರು, ಡಿಸಿಸಿ ಬ್ಯಾಂಕಿನ ಪ್ರತಿನಿಧಿ ಕೆ. ನಾರಾಯಣ ಉಪ ಅಧ್ಯಕ್ಷರಾದ ನಂಜುAಡಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈ.ಜಿ ಜಗನ್ನಾಥ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.