ಪಾಲಿಬೆಟ್ಟ, ಸೆ. ೬: ಓಣಂ ಆಚರಣೆ ಸಮಿತಿ ವತಿಯಿಂದ ಎರಡನೇ ವರ್ಷದ ಓಣಂ ಆಚರಣೆಯ ಅಂಗವಾಗಿ ವಿವಿಧ ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮಗಳು ಚೆನ್ನಯ್ಯನಕೋಟೆ ಶಾಲಾ ಮೈದಾನದಲ್ಲಿ ನಡೆಯಿತು.

ಚೆನ್ನಯ್ಯನಕೋಟೆ ಅಯ್ಯಪ್ಪ ದೇವಸ್ಥಾನ ಬಳಿಯಿಂದ ಮಹಾಬಲಿ ಚಕ್ರವರ್ತಿಯೊಂದಿಗೆ ಚಂಡೆ ವಾದ್ಯ ಮೇಳದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡ ಬಾಂಧವರು ಓಣಂ ಹಬ್ಬದ ಸಂದೇಶ ಸಾರಿದರು. ಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮ ವನ್ನು ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೆರಿರ ಅರುಣ್ ಕುಮಾರ್ ಉದ್ಘಾಟಿಸಿ ಮಾತನಾಡಿ, ಆಚಾರ - ವಿಚಾರ ಸಂಸ್ಕೃತಿ ಪರಂಪರೆಯೊAದಿಗೆ ಹಬ್ಬ ಆಚರಣೆಗಳ ಮೂಲಕ ಸೌಹಾರ್ದ ಸಮಾಜ ನಿರ್ಮಾಣವಾಗಲು ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸುವಂತಾಗಬೇಕು ಪ್ರತಿ ಯೊಬ್ಬರು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯ ಬೇಕೆಂದರು.

ಓಣA ಆಚರಣಾ ಸಮಿತಿ ಅಧ್ಯಕ್ಷ ಎನ್. ಆರ್. ಬಾಬು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಸುತ್ತಮುತ್ತಲ ಬಾಂಧವರನ್ನ ಒಗ್ಗೂಡಿಸಿ ಓಣಂ ಹಬ್ಬವನ್ನು ಸಂಭ್ರಮವಾಗಿ ಆಚರಣೆ ಮಾಡಲಾಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬಾಂಧವರು ವಿವಿಧ ಕ್ರೀಡಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಎಂದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಹಗ್ಗ ಜಗ್ಗಾಟ, ಗುಂಡು ಎಸೆಯುವುದು ಮ್ಯೂಸಿಕಲ್ ಚೇರ್ , ಮಡಿಕೆ ಹೊಡೆಯುವುದು, ಓಟ, ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಮಕ್ಕಳ ಛದ್ಮವೇಷ, ಮಹಿಳೆಯರ ನೃತ್ಯ ಹಲವು ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆದವು. ಎಲ್ಲರಿಗೂ ವಿವಿಧ ಬಗೆಯ ಖಾದ್ಯಗಳ ಓಣಂ ಸದ್ಯ ಏರ್ಪಡಿಸಲಾಗಿತ್ತು.

ಮಾಲ್ದಾರೆ ಗ್ರಾಂ.ಪA. ಅಧ್ಯಕ್ಷ ಮಾಲತಿ, ಓಣಂ ಕಮಿಟಿಯ ಮಾಜಿ ಅಧ್ಯಕ್ಷ ಮದುಸೂದನ್, ಸಮಾಜ ಸೇವಕ ಟಿ.ಜಿ ವಿಜೇಶ್ ಸದಾಶಿವ ನಾಯರ್, ರಾಜನ್, ಪೃಥ್ವಿರಾಜ್, ಸಜೀಶ್, ಶೈಲಜಾ, ಗ್ರಾಂ. ಪಂ. ಸದಸ್ಯರಾದ ಶೀಲಾ, ಪ್ರೇಮಾ ಓಣಂ ಸಮಿತಿಯ ಉಪಾಧ್ಯಕ್ಷ ರದೀಶ್, ಮಹಿಳಾ ಅಧ್ಯಕ್ಷೆ ಲಕ್ಷಿö್ಮÃ, ಹರೀಶ್, ಸುನಿಲ್, ರವೀಂದ್ರ ಬಾವ, ಶೋಭಾ, ಇಂದಿರಾ ಮುರುಗೇಶ್, ಮುಂತಾ ದವರು ಹಾಜರಿದ್ದರು.