ಸೋಮವಾರಪೇಟೆ, ಸೆ. ೬ : ಕಸಬಾ ಹೋಬಳಿ ಐಗೂರು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಸಭೆ ಕಾಜೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಾವೇರಿ ಸಭಾಂಗಣದಲ್ಲಿ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಐಗೂರು ಗ್ರಾಮ ಪಂಚಾಯಿತಿಗೆ ಸೇರಿದ ಕಟ್ಟಡದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕಛೇರಿ ತೆರೆಯುವ ಬಗ್ಗೆ, ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯೊAದಿಗೆ ಮಾತುಕತೆ ನಡೆಸಲು ತೀರ್ಮಾನಿಸಿತು.
ಸಾಹಿತ್ಯ ಪರಿಷತ್ನಲ್ಲಿ ಸದಸ್ಯರ ಸಂಖ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದು, ದತ್ತಿ ಕಾರ್ಯಕ್ರಮ ಆಯೋಜಿಸುವುದು, ಮುಂದಿನ ದಿನಗಳಲ್ಲಿ ಐಗೂರಿನಲ್ಲಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಯೋಜನೆಯನ್ನು ಮಾಡಿಕೊಳ್ಳುವ ಬಗ್ಗೆ ಸಭೆ ತೀರ್ಮಾನಿಸಿತು.
ಸಭೆಯಲ್ಲಿ ವಿಶೇಷ ಆಹ್ವಾನಿತರಾದ ಕೆ.ಪಿ. ದಿನೇಶ್, ಧರ್ಮಪ್ಪ, ಹೋಬಳಿ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ ವಿಶ್ವನಾಥ ರಾಜೇ ಅರಸ್, ಸರಳ ಕುಮಾರಿ, ಕೋಶಾಧಿಕಾರಿ ಎಸ್.ಎಂ. ಬೆಳ್ಳಿಯಪ್ಪ, ಸದಸ್ಯರಾದ ಮಚ್ಚಂಡ ಅಶೋಕ್, ತಿಮ್ಮಯ್ಯ, ವಾಸುದೇವ, ಅಜಿತ್ ಕುಮಾರ್, ಧನ್ಯ, ಆಶಾ ಸೇರಿದಂತೆ ಇತರರು ಉಪಸ್ಥಿತರಿದ್ದರು.