ಸುಂಟಿಕೊಪ್ಪ, ಸೆ. ೫: ಸುಂಟಿಕೊಪ್ಪ ವಾಹನ ಚಾಲಕರ ಸಂಘದ ೨೦೨೩-೨೪ನೇ ಸಾಲಿನ ಅಧ್ಯಕ್ಷರಾಗಿ ಎಸ್. ಸುರೇಶ್, ಪ್ರಧಾನ ಕಾರ್ಯ ದರ್ಶಿಯಾಗಿ ಕುಂಞಕೃಷ್ಣ ಅವರುಗಳನ್ನು ನೇಮಕಗೊಳಿಸಲಾಯಿತು.
ಸಂಘದ ಸಾರ್ವಜನಿಕ ಸಂಭಾಗಣ ದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಬಿ.ಎಂ.ಪೂವಪ್ಪ ವಹಿಸಿದ್ದರು. ಅವರ ನಡೆದು ಕಳೆದ ಸಾಲಿನ ಲೆಕ್ಕಪತ್ರ ಮಂಡನೆಯ ನಂತರ ೨೦೨೩-೨೪ರ ಸಾಲಿನ ಆಡಳಿತ ಮಂಡಳಿ ನೇಮಕಗೊಳಿಸಲಾಗಿದ್ದು, ಅಧ್ಯಕ್ಷರಾಗಿ ಎಸ್.ಸುರೇಶ, ಉಪಾಧ್ಯಕ್ಷರಾಗಿ ಮುನೀರ್ ಕಂಬಿಬಾಣೆ, ಬಿ.ಎ. ಕೃಷ್ಣಪ್ಪ, ಗೌರವ ಅಧ್ಯಕ್ಷರಾಗಿ ಬಿ.ಎಂ.ಪೂವಪ್ಪ, ಹೆಚ್.ಹಂಸ,(ಅಚ್ಚುಪ್ಪ), ಕಾರ್ಯದರ್ಶಿಯಾಗಿ ಎಂ.ಕೆ. ಕುಂಞ ಕೃಷ್ಣ, ಸಹಕಾರ್ಯದರ್ಶಿ ಅಂಬೆಕಲ್ ಚಂದ್ರಶೇಖರ್, ಖಜಾಂಚಿಯಾಗಿ ಆಸೀಸ್, ಸಂಘಟನಾ ಕಾರ್ಯದರ್ಶಿಯಾಗಿ ಮೊಹಮ್ಮದ್ ಶರೀಫ್, ಆತಿಕ್, ಕಾರ್ಯಕಾರಿ ಸಮಿತಿಗೆ ಅಣ್ಣಪ್ಪ ಜಿ.ಎಂ. ತರ್ನಶೀರ್, ಪ್ರಕಾಶ್, ಸಲೀಂ, ಮಣಿರಾಜ್(ತಂಬಿ), ಅಸ್ಕರ್, ಸಿ.ಎ.ಬಸಪ್ಪ, ಪವನ್ ಸಂತೋಷ್, ರಾವುಫ್,ಆರ್. ಎಂ.ಕುಮಾರ್, ರಾಜು, ರಫೀಕ್(ಮೋನು), ವಿ.ರಾಜ, ಇಸಾಕ್, ಡಿಸೋಜ ಅವರನ್ನು ಆಯ್ಕೆಗೊಳಿಸಲಾಯಿತು.