ಸೋಮವಾರಪೇಟೆ, ಸೆ. ೫: ತಾಲೂಕಿನ ಗೌಡಳ್ಳಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎನ್.ಕೆ. ನಾಗೇಂದ್ರ ಅವರು ವಯೋ ನಿವೃತ್ತಿ ಹೊಂದಿದ್ದು, ಇವರಿಗೆ ಮುಖ್ಯ ಶಿಕ್ಷಕರ ಸಂಘ ಹಾಗೂ ಶಾಲಾ ಆಡಳಿತದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.

ಈ ಸಂದರ್ಭ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜೇಶ್, ಕ್ಷೇತ್ರ ಸಮನ್ವಯಾಧಿಕಾರಿ ಹೇಮಂತ್ ಕುಮಾರ್, ಕೂಡಿಗೆ ಡಯಟ್ ಹಿರಿಯ ಉಪನ್ಯಾಸಕ ಕೃಷ್ಣಪ್ಪ, ಲೋಕೇಶ್, ೭ನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸೋಮಯ್ಯ, ಫಾತಿಮಾ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸಿಸ್ಟರ್ ತೆರೇಸಾ, ಪ್ರಮುಖರಾದ ದೇವರಾಜೇಗೌಡ, ಐ.ಡಿ. ಜಾದವ್, ಕೆ.ಸಿ. ಮಹೇಶ್, ಜಯಕುಮಾರ್, ಸಂದೇಶ್, ಕೆ. ಪಾಲಾಕ್ಷ ಉಪಸ್ಥಿತರಿದ್ದರು.