ವೀರಾಜಪೇಟೆ, ಸೆ. ೫: ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ೨೦೨೩-೨೦೨೪ ನೇ ಸಾಲಿನ ಶೈಕ್ಷಣಿಕ ವರ್ಷದ ಪೋಷಕ ಮತ್ತು ಶಿಕ್ಷಕರ ಸಭೆ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಡಾ.ಆನಂದ್ ಕಾರ್ಲಾ ಅವರು ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೋಷಕರ ಬೆಂಬಲ ಅಗತ್ಯ, ಅಂಕ ಗಳಿಕೆಯೇ ಮುಖ್ಯವಲ್ಲ ಹಾಗೂ ರಾಷ್ಟçದ ಅಭಿವೃದ್ಧಿಗೆ ವಿದ್ಯಾರ್ಥಿಗಳು ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕೆಂದು ಕರೆ ನೀಡಿದರು.

ವಿದ್ಯಾರ್ಥಿ ಸಲಹಾ ಸಮಿತಿಯ ಸಂಚಾಲಕಿ ಅಂಬಿಕಾ ಮಾತನಾಡಿ, ವಿದ್ಯಾರ್ಥಿಗಳು ನಾಯಕತ್ವ ಗುಣ ಗಳನ್ನು ಕಾಲೇಜು ಹಂತ ದಿಂದಲೇ ಬೆಳೆಸಲು ಪ್ರಾರಂಭಿಸಬೇಕು ಎಂದರು.

ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಚಾಲಕಿ ಡಾ. ಕೆ.ಜಿ. ವೀಣಾ ಕಾಲೇಜಿನಲ್ಲಿರುವ ಕಾರ್ಯಕ್ರಮಗಳನ್ನು ಬಗ್ಗೆ ವಿವರಿಸಿದರು. ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ (ಪದಾಧಿಕಾರಿಗಳು) ಸಂಚಾಲಕರು ಕಾಲೇಜಿನಲ್ಲಿರುವ ಸಾಂಸ್ಕöÈತಿಕ ಚಟುವಟಿಕೆಯ ಮಹತ್ವವನ್ನು ತಿಳಿಕೊಟ್ಟರು. ಇತಿಹಾಸ ಉಪನ್ಯಾಸಕಿ ಅನುಪಮ ಸಿ.ಪಿ. ಪ್ರಾರ್ಥಿಸಿದರು. ಪೋಷಕ ಮತ್ತು ಶಿಕ್ಷಕರ ಸಂಘದ ಸಂಚಾಲಕ ನಾಗರಾಜು ಸ್ವಾಗತಿಸಿದರು. ಪೋಷಕ ಮತ್ತು ಶಿಕ್ಷಕರ ಸಂಘದ ಸದಸ್ಯೆ ಅಕ್ಷತಾ ನಾಯ್ಕ್ ವಂದಿಸಿದರು.

ಅರ್ಥಶಾಸ್ತç ವಿಭಾಗದ ಉಪನ್ಯಾಸಕ ಬೆನೆಡಿಟ್ ಸಾಲ್ಡಾನ ನಿರೂಪಿಸಿದರು. ಈ ಸಂದರ್ಭ ಕಾಲೇಜಿನ ಉಪನ್ಯಾಸಕ ವೃಂದದವರು ಹಾಗೂ ಪೋಷಕರು ಸಭೆಯಲ್ಲಿ ಹಾಜರಿದ್ದರು.