ಮಡಿಕೇರಿ, ಸೆ. ೫: ಕೊಡಗಿನಲ್ಲಿ ಹಲವು ವರ್ಷಗಳಿಂದ ಪರಿಹಾರ ಕಾಣದೆ ಬಾಣೆ ಜಾಗ ಹೊಂದಿದ್ದವರು ಎದುರಿಸುತ್ತಿದ್ದ ಗಂಭೀರ ಸಮಸ್ಯೆಯೊಂದಕ್ಕೆ ಮುಕ್ತಿ ಸಿಗುವ ಸಾಧ್ಯತೆ ಕಂಡುಬAದಿದೆ. ಜಿಲ್ಲೆಯ ಎಲ್ಲಾ ಬಾಣೆ ಜಾಗಗಳಿಗೆ ಕಂದಾಯ ನಿಗದಿಯಾಗದೆ ಬಾಣೆದಾರರು ಸಮಸ್ಯೆ ಎದುರಿಸುತ್ತಿದ್ದು ಇದೀಗ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಸ್ಪಂದಿಸಿ ಕಾರ್ಯೋನ್ಮುಖರಾಗಿರುವುದು ಗೋಚರವಾಗಿದೆ.
ಪ್ರಾರಂಭಿಕವಾಗಿ ಜಿಲ್ಲೆಯ ಐದು ತಾಲೂಕು ವ್ಯಾಪ್ತಿಗಳಲ್ಲಿ ಒಂದೊAದು ಗ್ರಾಮವನ್ನು ಪ್ರಾಯೋಗಿಕವಾಗಿ ಪರಿಗಣಿಸಿ ಆ ಐದು ಗ್ರಾಮಗಳಲ್ಲಿ ಎಲ್ಲಾ ಬಾಣೆ ಜಮೀನುಗಳಿಗೆ ಕಂದಾಯ ನಿಗದಿಪಡಿಸಲು ಜಿಲ್ಲಾಧಿಕಾರಿ ವೆಂಕಟ್ರಾಜಾ ಅವರು ಆದೇಶ ಹೊರಡಿಸಿದ್ದಾರೆ.
ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ನಿರ್ದೇಶನದಂತೆ ಜಿಲ್ಲಾಡಳಿತ ಇದೀಗ ಈ ಪ್ರಾಯೋಗಿಕ ಕಾರ್ಯಕ್ಕೆ ಮುಂದಾಗಿ ರುವುದಾಗಿ ತಿಳಿದು ಬಂದಿದೆ.
ಜಿಲ್ಲೆಯ ಐದು ತಾಲೂಕುಗಳ ಐದು ಗ್ರಾಮಗಳನ್ನು ಈಗ ಆಯ್ಕೆ ಮಾಡಲಾಗಿದೆ. ಆ ಗ್ರಾಮಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಂಡÀ ಬಳಿಕ ಶಾಸಕರ ಮೂಲಕ ರಾಜ್ಯ ಕಂದಾಯ ಸಚಿವರ ಗಮನಕ್ಕೂ ತಂದು ಕಾರ್ಯ ಯೋಜನೆಯನ್ನು ಜಿಲ್ಲೆಯ ಎಲ್ಲ ಗ್ರಾಮಗಳಿಗೂ ವಿಸ್ತ್ತರಿಸಲಾಗುವು ದೆಂದು ಜಿಲ್ಲಾಧಿಕಾರಿ ವೆಂಕಟ್ರಾಜಾ “ಶಕ್ತಿ” ಗೆ ಖಚಿತಪಡಿಸಿದ್ದಾರೆ. ಇದೀಗ ವಾರದಲ್ಲಿ ಮೂರು ದಿನ ಬಾಣೆ ಸರ್ವೆ ಕಾರ್ಯ ನಡೆಯಲಿದ್ದು ಉಳಿದ ದಿನಗಳಲ್ಲಿ ಸರ್ವೆ ಸಿಬ್ಬಂದಿ ತಮ್ಮ ಇತರ ದೈನಂದಿನ ಕಾರ್ಯಗಳನ್ನು ನಡೆಸುತ್ತಾರೆ ಎಂದು ಖಚಿತ ಪಡಿಸಿದರು.
ಜಿಲ್ಲಾ ಸರ್ವೆ ಇಲಾಖೆಯ ಸಹಯೋಗದೊಂದಿಗೆ ಜಿಲ್ಲೆಯ ಕಂದಾಯ ಇಲಾಖೆಯು ಜಂಟಿ ಸಮೀಕ್ಷೆ ನಡೆಸಿ ಕ್ರಮ ವಹಿಸಲು ಅಧಿಕಾರಿಗಳನ್ನು ನೇಮಿಸಲಾಗಿದೆ. ಈಗಾಗಲೇ ಕಾರ್ಯೋನ್ಮುಖ ರಾಗಿರುವ
(ಮೊದಲ ಪುಟದಿಂದ) ಅಧಿಕಾರಿಗಳು ಸಂಪೂರ್ಣವಾಗಿ ಕಂದಾಯಕ್ಕೆ ಒಳಪಡದ ಜಮೀನುಗಳನ್ನು ಗುರುತಿಸಿ ಅಳತೆ ಮಾಡಿ ಕಂದಾಯ ನಿಗದಿಗೊಳಿಸುವ ಪ್ರಕ್ರಿಯೆ ಆರಂಭಗೊAಡಿದೆ. ಪ್ರಾಯೋಗಿಕವಾಗಿ ಗುರುತಿಸಲಾದ ಗ್ರಾಮಗಳ ನಿವಾಸಿಗಳು ಕಂದಾಯಕ್ಕೆ ಒಳಪಡದ ಜಮೀನುಗಳನ್ನು ಗುರುತಿಸಿ ಸರ್ವೆ Pಶೀಘ್ರವಾಗಿ ವಿಲೇವಾರಿ ಮಾಡುವ ಮತ್ತು ಕಂದಾಯ ನಿಗದಿ ಪ್ರಕರಣಗಳಲ್ಲಿ ಆಗುತ್ತಿರುವ ವಿಳಂಬವನ್ನು ನಿವಾರಿಸುವ ದೃಷ್ಟಿಯಿಂದ ಇಂಥ ಪ್ರಕರಣಗಳನ್ನು ಗ್ರಾಮವಾರು ಆಂದೋಲನದ ಮೂಲಕ ಕ್ರಮ ಜರುಗಿಸಿ ವಿಲೇವಾರಿ ಮಾಡುವ ಅವಶ್ಯಕತೆ ಕಂಡು ಬಂದಿದ್ದರಿAದ ಜಿಲ್ಲೆಯ ಎಲ್ಲಾ ತಾಲೂಕು ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿಯಿತ್ತಿದ್ದಾರೆ. ಕಂದಾಯ ನಿಗದಿಯಾದರೆ ಮಾತ್ರವೇ Áರ್ಯಕ್ಕೆ ಬರುವ ಅಧಿಕಾರಿಗಳಿಗೆ ಸ್ಥಳವನ್ನು ತೋರಿಸುವ ಕೆಲಸ ಆಗಬೇಕಾಗಿದೆ. ಇದುವರೆಗೂ ಜಿಲ್ಲೆಯಲ್ಲಿ ಕಂದಾಯಕ್ಕೆ ಒಳಪಡದ ಬಾಣೆ ಜಮೀನುಗಳಿಗೆ ಕಂದಾಯ ನಿಗದಿ ಪಡಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದ್ದು ಇದರಿಂದ ಸಂಬAಧಿಸಿದ ಸರ್ವೆ ನಂಬರ್ನ ಹಕ್ಕುದಾರರಿಗೆ ಜಮೀನುಗಳ ಹಕ್ಕು ವರ್ಗಾವಣೆ, ಭೂ ಪರಿವರ್ತನೆ ,ಸಿವಿಲ್ ನ್ಯಾಯಾಲಯಗಳಲ್ಲಿ ವ್ಯಾಜ್ಯ ದಾಖಲಿಸುವುದು, ಇತ್ಯಾದಿ ಭೂ ಸಂಬAಧಿತ ವ್ಯವಹಾರಗಳಿಗೆ ತೊಂದರೆಯಾಗುತ್ತಿದ್ದು ಹೆಚ್ಚಿನ ಪ್ರಕರಣಗಳು ತಾಲೂಕು ಕಚೇರಿ ಮತ್ತು ಭೂಮಾಪನಾ ಕಚೇರಿಗಳಲ್ಲಿ ಬಾಕಿ ಉಳಿದುಕೊಂಡಿವೆ. ಅವುಗಳನ್ನು ಬಾಣೆ ಜಾಗಗಳ ಮೇಲಿನ ಹಕ್ಕು ಅಧಿಕೃತಗೊಳ್ಳಲು ಸಾಧ್ಯವಿದೆ ಎನ್ನುವುದು ಬಲು ಮುಖ್ಯವಾಗಿದೆ.
ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಪ್ರಸಕ್ತ ಮಡಿಕೇರಿ ತಾಲೂಕಿನ ಭಾಗಮಂಡಲದ ಬೇಂಗೂರು ಗ್ರಾಮ, ಸೋಮವಾರಪೇಟೆ ತಾಲೂಕಿನ ಕಿರುಗಂದೂರು ಗ್ರಾಮ, ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸನಿಹದÀ ನಾಕೂರು ಶಿರಂಗಾಲ ಗ್ರಾಮ, ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮ ಮತ್ತು ಪೊನ್ನಂಪೇಟೆ ತಾಲೂಕಿನ ಕುಂದ ಗ್ರಾಮಗಳಲ್ಲಿ ಮೊದಲ ಹಂತದಲ್ಲಿ ಪ್ರಾಯೋಗಿಕ ಸಮೀಕ್ಷೆ ನಡೆಸಿ ಕಂದಾಯ ನಿಗದಿಗೊಳಿಸಲಾಗುವುದು ಎಂದು ಜಿಲ್ಲಾ ಭೂಮಾಪನಾ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ದಾರೆ.
ಆಯಾ ವಿಭಾಗದ ತಹಶೀಲ್ದಾರರುಗಳು ಅಲ್ಲಿನ ಗ್ರಾಮಸ್ಥರೊಂದಿಗೆ ಈ ಕುರಿತು ಈಗಾಗಲೇ ಮಾಹಿತಿ ಕಲೆ ಹಾಕಲು ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಅವರು ಮಾಹಿತಿಯಿತ್ತರು.