ಮಡಿಕೇರಿ, ಸೆ. ೫: ಸಮೀಪದ ಮೇಕೇರಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮೇಕೇರಿಯ ಸ್ವಾಗತ ಯುವಕ ಸಂಘ, ಸುಭಾಷ್ ನಗರದ ವಿನಾಯಕ ಗೆಳೆಯರ ಬಳಗ ಹಾಗೂ ಮೇಕೇರಿಯ ಮಹಿಳಾ ಸಂಘಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳ ಸಹಯೋಗ ದೊಂದಿಗೆ ಸುಭಾಷ್ ನಗರ ಜಂಕ್ಷನ್ ನಿಂದ ಮೇಕೇರಿ ಶಾಲೆವರೆಗೆ, ಶಕ್ತಿನಗರ ಜಂಕ್ಷನ್ನಿAದ ಮೇಕೇರಿ ಶಾಲೆವರೆಗೆ, ಬಿಳಿಗೇರಿ ಜಂಕ್ಷನ್ ನಿಂದ ಮೇಕೇರಿ ಶಾಲೆವರೆಗೆ ಹಾಗೂ ಕಾವೇರಿ ಬಡಾವಣೆಯಿಂದ ಮೇಕೇರಿ ಶಾಲೆವರೆಗೆ ಸ್ವಚ್ಛತಾ ಕಾರ್ಯ ನಡೆಯಿತು. ಅಲ್ಲದೆ ಶಾಲಾ ಮೈದಾನ ಹಾಗೂ ಅಂಗನವಾಡಿ ಸುತ್ತಲೂ ಬೆಳೆದು ನಿಂತಿದ್ದ ಕಾಡು ಕಸವನ್ನು ತೆರವು ಗೊಳಿಸಲಾಯಿತು.
ಈ ಸಂದರ್ಭ ಮಾತನಾಡಿದ ಸ್ವಾಗತ ಯುವಕ ಸಂಘದ ಅಧ್ಯಕ್ಷÀ ಟಿ.ಎನ್. ಉಮೇಶ್, ಮುಂದಿನ ದಿನಗಳಲ್ಲಿಯೂ ಹಲವಾರು ಸಮಾಜಮುಖಿ ಕಾರ್ಯ ಹಮ್ಮಿಕೊಳ್ಳ ಲಾಗುವುದು ಎಂದು ತಿಳಿಸಿದರು. ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ವರಿಗೆ ಕುಡಿಯುವ ನೀರು, ಜ್ಯೂಸ್ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಸ್ವಾಗತ ಯುವಕ ಸಂಘದಿAದ ಮಾಡಲಾಗಿತ್ತು.