ಸುಂಟಿಕೊಪ್ಪ, ಸೆ. ೫: ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಎಸ್.ಜಾನ್ ಹಾಗೂ ಸಮಾಜಶಾಸ್ತç ಉಪನ್ಯಾಸಕಿ ಮಂಜುಳಾ ಅವರು ವರ್ಗಾವಣೆ ಗೊಂಡಿದ್ದು, ಈ ಹಿನ್ನಲೆಯಲ್ಲಿ ಕಾಲೇಜಿನ ವತಿಯಿಂದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಈ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ೫ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಅವಿಸ್ಮರಣೀಯ ಕ್ಷಣಗಳು ಮರೆಯಲಾಗದು ಎಂದು ಜಾನ್ ಹೇಳಿದರು.
ವರ್ಗಾವಣೆಗೊಂಡ ಸಮಾಜಶಾಸ್ತç ಉಪನ್ಯಾಸಕಿ ಮಂಜುಳಾ ಮಾತನಾಡಿ ಅವಿಭಕ್ತ ಕುಟುಂಬದAತೆ ಇದ್ದ ಕಾಲೇಜಿನಿಂದ ಬಿಡುಗಡೆ ಹೊಂದಿ ಬೇರೆ ಕಾಲೇಜಿಗೆ ಹೋಗುತ್ತಿರುವುದು ಮನಸ್ಸಿಗೆ ತೀವ್ರ ನೋವುಂಟು ಮಾಡುತ್ತದೆ ಎಂದರು. ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ಸಹಕಾರವನ್ನು ಸ್ಮರಿಸಿದರು. ಉಪನ್ಯಾಸಕರಾದ ಸುನೀತ, ಕವಿತಾ, ಸರಳ, ಅಭಿಷೇಕ್, ಈಶ, ಮಂಜುಳಾ, ಕಾಲೇಜಿನ ವಿದ್ಯಾರ್ಥಿಗಳು ಇದ್ದರು.