ಸೋಮವಾರಪೇಟೆ, ಸೆ. ೫: ಜೆ.ಸಿ.ಐ. ಕಳಶದ ಆತಿಥ್ಯದಲ್ಲಿ ಕಳಶದ ಮಹಾವೀರ ಭವನದಲ್ಲಿ ಜರುಗಿದ "ಜೆ.ಸಿ.ಐ. ಪುನರ್ವಿ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನದಲ್ಲಿ ಅತೀ ಹೆಚ್ಚು ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಮಾಡಿ ಹೆಚ್ಚಿನ ಅಂಕ ಪಡೆದ ಮೊದಲ ಹತ್ತು ಘಟಕಗಳಿಗೆ ಪ್ರಶಸ್ತಿ ಪುರಸ್ಕಾರ ನೀಡಲಾಯಿತು.

ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆ ಆರನೇ ಸ್ಥಾನ ಪಡೆದುಕೊಂಡಿದ್ದು, ಜೆ.ಸಿ.ಐ. ಭಾರತದ ರಾಷ್ಟಿçÃಯ ಅಧ್ಯಕ್ಷ ಕಾರ್ತಿಕೇಯನ್ ಅವರು ಸಂಸ್ಥೆಯ ಅಧ್ಯಕ್ಷೆ ಎಂ.ಎ. ರುಬೀನಾ ಮತ್ತು ತಂಡದವರಿಗೆ ಪ್ರಶಸ್ತಿ ವಿತರಿಸಿದರು. ಜೆ.ಸಿ.ಐ. ಅಧ್ಯಕ್ಷೆ ಎಂ.ಎ. ರುಬೀನಾ ಅವರಿಗೆ ಇದೇ ಸಂದರ್ಭ ‘ಮಹಿಳಾ ಸಾಧನ ಸಖಿ' ಪ್ರಶಸ್ತಿಯನ್ನು ವಲಯ ೧೪ರ ಅಧ್ಯಕ್ಷೆ ಯಶಸ್ವಿನಿ ಅವರು ನೀಡಿ ಗೌರವಿಸಿದರು. ಇದರೊಂದಿಗೆ ಎಕ್ಸಲೆಂಟ್ ಅಚ್ಯೂಮೆಂಟ್, ಎಕ್ಸ್ಟೆಂಡಿAಗ್ ನ್ಯೂ ಲೋಕಲ್ ಆರ್‌ಗನೈಸೇಷನ್ ಹಾಗೂ ಪ್ರತಿಭಾ ಅನ್ವೇಷಣಾ ಪರೀಕ್ಷೆಗಾಗಿ ಸೋಮವಾರಪೇಟೆ ಘಟಕಕ್ಕೆ ವಿಶೇಷ ಮನ್ನಣೆ ನೀಡಲಾಯಿತು. ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತರಾದ ಡಾ. ಜಿ. ಭೀಮೇಶ್ವರ ಜೋಷಿ, ವಲಯ ಉಪಾಧ್ಯಕ್ಷರಾದ ಹೆಚ್.ಆರ್. ಪ್ರಶಾಂತ, ಕೆ.ಡಿ. ಪ್ರಶಾಂತ್, ಕಳಶ ಘಟಕದ ಅಧ್ಯಕ್ಷ ಚರಣ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.