ಸೋಮವಾರಪೇಟೆ, ಸೆ. ೫: ಸೋಮೇಶ್ವರ ದೇವಾಲಯ ನಿರ್ಮಾಣವಾಗಿ ೭೫ ವರ್ಷಗಳು ತುಂಬುತ್ತಿದ್ದು, ಮುಂದಿನ ೨೦೨೪ಕ್ಕೆ ಅರ್ಥಪೂರ್ಣವಾಗಿ ಅಮೃತ ಮಹೋತ್ಸವ ಕಾರ್ಯಕ್ರಮ ಆಚರಿಸಲು ನಿರ್ಧರಿಸಲಾಯಿತು. ದೇವಾಲಯ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು, ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು. ಇದಕ್ಕೂ ಮುನ್ನ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಋಷಿ ಪೂಜೆ, ಹೋಮ ಹಾಗೂ ಯಜ್ಞಪವಿತಾ ಧಾರಣೆ, ಉಪಾಕರ್ಮ ನಡೆಯಿತು. ಪ್ರಧಾನ ಅರ್ಚಕ ಚಿತ್ರ ಕುಮಾರ್ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ಜರುಗಿದವು. ದೇವಾಲಯದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಕಾರ್ಯದರ್ಶಿ ಎಸ್.ಡಿ. ವಿಜೇತ್, ಖಜಾಂಚಿ ವೈ.ಪಿ. ಹರೀಶ್, ಎಂ.ಆರ್. ನಂದಕುಮಾರ್, ನಾಗರಾಜ್, ಎಸ್.ಆರ್. ಸೋಮೇಶ್, ಎಂ. ಶ್ರೀಕಾಂತ್, ದಿನೇಶ್ ಹಾಲೇರಿ, ಸತೀಶ್ ಸುದರ್ಶನ್, ಕೌಶಿಕ್, ಜಯಂತ್, ರಾಜೇಶ್ ಪದ್ಮನಾಭ, ಮಂಜುನಾಥ್ ಪ್ರಸಾದ್, ಅರವಿಂದ್ ಬಾಬು, ದೇವಿ ಬಳಗದ ಅಧ್ಯಕ್ಷೆ ವಿಮಲ ರಾಜಗೋಪಾಲ್, ರತನ್ ಪದ್ಮನಾಭ, ರತಿ ನಂದಕುಮಾರ್, ವಸಂತ, ಗಾಯತ್ರಿ, ಕಲ್ಪನಾ ಮತ್ತಿತರರು ಇದ್ದರು.