ಮಡಿಕೇರಿ, ಸೆ. ೪: ಸಕಲೇಶಪುರ ದಲ್ಲಿ ಆನೆಯನ್ನು ಕಾಡಿಗಟ್ಟುವ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿ ಯನ್ನು ಅಟ್ಟಾಡಿಸಿ ಬಲಿ ತೆಗೆದುಕೊಂಡ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಯೋರ್ವ ಒಂಟಿ ಸಲಗ ದಾಳಿಗೆ ಉಸಿರು ಚೆಲ್ಲಿದ್ದಾನೆ.
ಸುಂಟಿಕೊಪ್ಪ ಸಮೀಪದ ಕೆದಕಲ್ನಲ್ಲಿ ಘಟನೆ ಸಂಭವಿಸಿದ್ದು, ಕ್ಷಿಪ್ರ ಕಾರ್ಯಾಚರಣೆ ತಂಡದ (ಆರ್.ಆರ್.ಟಿ.) ಗಿರೀಶ್ (೩೫) ಮೃತಪಟ್ಟ ದುರ್ದೈವಿ.
ಇಂದು ಬೆಳಿಗ್ಗೆ ೯ ಗಂಟೆ ಮಡಿಕೇರಿ, ಸೆ. ೪: ಸಕಲೇಶಪುರ ದಲ್ಲಿ ಆನೆಯನ್ನು ಕಾಡಿಗಟ್ಟುವ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿ ಯನ್ನು ಅಟ್ಟಾಡಿಸಿ ಬಲಿ ತೆಗೆದುಕೊಂಡ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಯೋರ್ವ ಒಂಟಿ ಸಲಗ ದಾಳಿಗೆ ಉಸಿರು ಚೆಲ್ಲಿದ್ದಾನೆ.
ಸುಂಟಿಕೊಪ್ಪ ಸಮೀಪದ ಕೆದಕಲ್ನಲ್ಲಿ ಘಟನೆ ಸಂಭವಿಸಿದ್ದು, ಕ್ಷಿಪ್ರ ಕಾರ್ಯಾಚರಣೆ ತಂಡದ (ಆರ್.ಆರ್.ಟಿ.) ಗಿರೀಶ್ (೩೫) ಮೃತಪಟ್ಟ ದುರ್ದೈವಿ.
ಇಂದು ಬೆಳಿಗ್ಗೆ ೯ ಗಂಟೆ ಮುಂದಾಗಿದೆ. ಈ ಹಿನ್ನೆಲೆ ಆರ್.ಆರ್.ಟಿ. ಹಾಗೂ ಇ.ಟಿ.ಎಫ್. ಪಡೆಯ ೧೫ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಕೆದಕಲ್ನಿಂದ ಅರ್ಧ ಕಿ.ಮೀ ದೂರದ ದೇವಗಿರಿ ತೋಟದಲ್ಲಿ ಮರೆಯಾಗಿದ್ದ ಆನೆಯನ್ನು ಓಡಿಸಲು ಕಾರ್ಯಾ ಚರಣೆ ಕೈಗೆತ್ತಿಕೊಂಡಿದ್ದಾರೆ.
ತೋಟ ಸೇರಿದ್ದ ಆನೆಯನ್ನು ಸಿಬ್ಬಂದಿಗಳು ಪತ್ತೆ ಹಚ್ಚಿ ಕೇಕೆ ಹಾಕಿ, ಪಟಾಕಿ ಸಿಡಿಸಿ ಓಡಿಸುವ ಪ್ರಯತ್ನ ಮಾಡಿ ಕಾಡಾನೆ ಅರಣ್ಯದತ್ತ ಓಡುತಿತ್ತು. ಆದರೆ, ಆನೆ ಒಮ್ಮೆಲೆ ಸಿಬ್ಬಂದಿ ಮೇಲೆ ದಾಳಿಗೆ ಮುಂದಾಗಿದೆ. ಉಳಿದವರು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಗಿರೀಶ್ ದಾಳಿಗೆ ಸಿಲುಕಿದ್ದಾರೆ. ಆನೆಯು ಸೊಂಡಿಲಿನಿAದ ಎತ್ತಿ ಬಿಸಾಡಿ, ಎದೆ ಹಾಗೂ ದೇಹದ ಮೇಲೆ ತುಳಿದು ಸ್ಥಳದಿಂದ ಮರೆಯಾಗಿದೆ. ಪರಿಣಾಮ ಗಿರೀಶ್ ಗಂಭೀರ ಗಾಯಗೊಂಡಿದ್ದಾರೆ.
ತಕ್ಷಣ ಸಿಬ್ಬಂದಿಗಳು ಗಿರೀಶ್ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಗಂಭೀರಗೊAಡಿದ್ದ ಗಾಯಾಳುವಿಗೆ ಚಿಕಿತ್ಸೆ ಕೊಟ್ಟರು ಸ್ಪಂದಿಸದೆ ಮಧ್ಯಾಹ್ನ ೨ ಗಂಟೆ ಸುಮಾರಿಗೆ ಅಸುನೀಗಿದ್ದಾರೆ.
ಮೃತ ಗಿರೀಶ್ ಮೂಲತಃ ಮಾಲ್ದಾರೆಯ ಅಂಚೆತಿಟ್ಟು ಹಾಡಿ ನಿವಾಸಿಯಾಗಿದ್ದು, ಕಳೆದ ೮ ವರ್ಷಗಳಿಂದ ಕುಶಾಲನಗರ ಅರಣ್ಯ ವಲಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಕುಶಾಲನಗರ ಅರಣ್ಯ ಇಲಾಖೆ ವಸತಿ ನಿಲಯದಲ್ಲಿ ವಾಸವಾಗಿದ್ದರು. ಮೃತರ ತಂದೆ-ತಾಯಿ ಈ ಮೊದಲೇ ಮೃತಪಟ್ಟಿದ್ದು, ತಂಗಿ ಮಾತ್ರ ಇದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ತಾ. ೫ರಂದು (ಇಂದು) ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ
ಘಟನೆ ಸಂಬAಧ ಮಾತನಾಡಿದ ಮಡಿಕೇರಿ
(ಮೊದಲ ಪುಟದಿಂದ) ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಕಾರ್ಯಾಚರಣೆ ಸಂದರ್ಭ ಕೈಗೊಳ್ಳಬೇಕಾದ ಕ್ರಮ ವಹಿಸಲಾಗಿದೆ. ಕಾಡಿನತ್ತ ಓಡಿದ ಆನೆ ವಾಪಾಸಾಗಿ ದಾಳಿ ಮಾಡಿದೆ. ಮೃತ ಗಿರೀಶ್ ಜೇಬಿನಲ್ಲಿಯೂ ಪಟಾಕಿ ಇತ್ತು. ಅಗತ್ಯ ಆಯುಧಗಳಿದ್ದವು ಎಂದು ತಿಳಿಸಿದ್ದಾರೆ.
ಜೊತೆಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಸುನಿಲ್ ಮಾತನಾಡಿ, ಆನೆಯನ್ನು ಟ್ರಾö್ಯಕ್ ಮಾಡಿ ಓಡಿಸುವ ಸಂದರ್ಭ ದಿಢೀರ್ ಆಗಿ ಕಾಡಾನೆ ನಮ್ಮ ಮೇಲೆ ದಾಳಿಗೆ ಯತ್ನಿಸಿದೆ. ನಾವು ಓಡಿ ಪಾರಾದೆವು. ಆದರೆ, ಗಿರೀಶ್ ಸಿಲುಕಿಕೊಂಡರು. ನಾವು ಕೇಕೆ ಹಾಕಿ ಓಡಿಸುವ ಪ್ರಯತ್ನ ಮಾಡಿದರು ಆನೆ ದಾಳಿ ಮುಂದುವರೆಸಿ ನಂತರ ಅಲ್ಲಿಂದ ಹೋಯಿತು ಎಂದು ಘಟನೆ ಕುರಿತು ಮಾಹಿತಿ ನೀಡಿದರು.
ಮಂಥರ್ ಭೇಟಿ
ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು. ಪರಿಹಾರ ಮೊತ್ತವನ್ನು ರೂ. ೧೫ ಲಕ್ಷದಿಂದ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.