ವಿದ್ಯಾರ್ಥಿಗಳೇ ಹೇಗಿದ್ದೀರಾ ? ನೀವೆಲ್ಲರೂ ಶಿಕ್ಷಕರ ದಿನಾಚರಣೆ ಸಿದ್ಧತೆಯಲ್ಲಿ ತೊಡಗಿರಬಹುದು ಅಲ್ಲವೇ? ತಮ್ಮ ಪ್ರೀತಿಯ ಶಿಕ್ಷಕರಿಗೆ ಸರ್‌ಪ್ರೆöÊಸ್ ಪಾರ್ಟಿ, ಗ್ರೀಟಿಂಗ್ ಕಾರ್ಡ್ ತಯಾರಿ ಉಡುಗೊರೆ ವಿಶೇಷ ಕಾರ್ಯ ಕ್ರಮಗಳನ್ನು ಆಯೋಜಿಸುವ ಬಗ್ಗೆ ಸ್ನೇಹಿತರೆಲ್ಲಾ ಸೇರಿ ಪ್ಲಾನ್ ಮಾಡುತ್ತಿರ ಬಹುದು. ನಿಜ ತಾನೆ. ಆದರೆ ಇವಿಷ್ಟೆ ಸಾಕೆ ? ನಿಮ್ಮ ಪ್ರೀತಿಯ ಶಿಕ್ಷಕರು ನಿಮ್ಮಿಂದ ಮತ್ತಿನ್ನೇನೋ ಬಹುದೊಡ್ಡ ಉಡುಗೊರೆಗಳನ್ನು ನಿರೀಕ್ಷಿಸುತ್ತಿರು ತ್ತಾರೆ. ಕೊಡಬಲ್ಲಿರಾ ? ಅದಕ್ಕಾಗಿ ಹಣ ಕೊಡಬೇಕಾಗಿಲ್ಲ, ಯಾವುದೇ ಅಂಗಡಿಗಳಿAದ ಖರೀದಿ ಮಾಡಬೇಕಾಗಿಲ್ಲ. ಅದು ನಿಮ್ಮಲ್ಲೇ ಇದೆ ಏನೆಂದು ಊಹಿಸಬಲ್ಲಿರಾ ? ನೀವು ಒಬ್ಬ ಮಾನವೀಯ ಮೌಲ್ಯವುಳ್ಳ ಸತ್ಪçಜೆಯಾಗಿ ಸಂತೋಷದಿAದ ಉತ್ತಮ ಬದುಕನ್ನು ಬಾಳಿ ತೋರಿಸು ವುದೇ ನಿಮ್ಮ ಶಿಕ್ಷಕರು ನಿಮ್ಮಿಂದ ನಿರೀಕ್ಷಿಸುವ ಬಹುದೊಡ್ಡ ಉಡುಗೊರೆ. ಇದನ್ನು ನೀವು ನಿಮ್ಮ ಪ್ರೀತಿಯ ಶಿಕ್ಷಕರಿಗೆ ಕೊಡುತ್ತೀರಿ ಅಲ್ಲವೇ ?

ಇಂದಿನ ಸ್ಥಿತಿಗತಿಗಳನ್ನು ಅವಲೋಕಿಸಿದಾಗ ಮೊಬೈಲ್ ಗೀಳಿನಿಂದಾಗಿ ಅಥವಾ ಇನ್ನಾöವುದೊ ಕಾರಣದಿಂದಾಗಿ ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳು ಆರಂಭವಾಗುತ್ತಿದೆ. ನಿಮ್ಮ ತಂದೆ-ತಾಯಿ ಹೊಟ್ಟೆ-ಬಟ್ಟೆ ಕಟ್ಟಿ ಒಳ್ಳೆಯ ಶಾಲೆಗಳಿಗೆ ಸೇರಿಸುತ್ತಾರೆ. ಯಾಕಾಗಿ? ಅವರ ಹತ್ತಿರ ಹಣ ಕೊಳೆಯುತ್ತಾ ಬಿದ್ದಿಲ್ಲ. ‘ನಾನು ಪಟ್ಟ ಕಷ್ಟ ನನ್ನ ಮಕ್ಕಳಿಗೆ ಬೇಡ’ ಎಂಬ ಒಂದೇ ಒಂದು ಕಾರಣಕ್ಕಾಗಿ ನನ್ನ ಮಕ್ಕಳು ನನಗಿಂತ ವಿದ್ಯಾವಂತರಾಗಿ ಈ ಸಮಾಜದಲ್ಲಿ ಒಂದು ಉನ್ನತ ಸ್ಥಾನಕ್ಕೇರಲಿ ಎಂಬ ಆಸೆಯಿಂದ. ಆದರೆ ನೀವು ಎಷ್ಟರ ಮಟ್ಟಿಗೆ ಅವರ ಕಷ್ಟಗಳನ್ನು, ಕನಸುಗಳನ್ನು ಅರ್ಥಮಾಡಿಕೊಂಡಿದ್ದೀರಿ ನಿಮಗೆ ನೀವೇ ಪ್ರಶ್ನಿಸಿಕೊಳ್ಳಿ. ನಿಮ್ಮ ಕನಸಿಗೆ ಬಣ್ಣ ಬಳಿಯುವವರು ನಿಮ್ಮ ತಂದೆ-ತಾಯಿ. ಅಪ್ಪ ಪೆನ್ನು, ಅಮ್ಮ ತಿಂಡಿ ಎಂದಾಗ ತಟ್ಟನೆ ಒದಗಿಸಿಕೊಡುವದು ಆ ಎರಡು ಜೀವ.

ಶಾಲಾ ಕಾಲೇಜುಗಳಲ್ಲಿ ಸ್ನೇಹಿತರ ನಡುವೆ ಜಗಳ ಮಾತನಾಡದೆ ಇರುವುದು ಇವೆಲ್ಲ ಮಾಮೂಲಿ, ನಮ್ಮ ಕಾಲದಲ್ಲಿ ನಮ್ಮ ಶಿಕ್ಷಕರು ಜಗಳಾಡಿದವರನ್ನು ಒಂದೆಡೆ ಸೇರಿಸಿ ಅವರಿಂದ ಇವರಿಗೆ ಇವರಿಂದ ಅವರಿಗೆ ಹಸ್ತಲಾಘವ ಮಾಡಿಸಿ ರಾಜೀ ಮಾಡಿಸುತ್ತಿದ್ದರು. ಅಲ್ಲಿಗೆ ಅದು ಮುಗಿಯುತ್ತಿತ್ತು. ಅವರು ಮತ್ತೆ ಮೊದಲಿನಂತೆ ಸ್ನೇಹಿತರಾಗಿ ಉಳಿಯುತ್ತಿದ್ದರು. ಆದರೆ ಈಗ ನಿಮ್ಮ ಜಗಳಗಳೂ ಹೊಡೆದಾಟದ ವರೆಗೂ ಸಾಗುತ್ತಿರುವುದು ಸರಿಯಲ್ಲ. ನೀವೇ ನಮ್ಮ ದೇಶದ ಸಂಪತ್ತು. ಆ ಸಂಪತ್ತೆ ನಿಮ್ಮ ಪೋಷಕರ, ನಿಮ್ಮ ಗುರುಗಳ ಉಡುಗೊರೆ. ವಿದ್ಯಾರ್ಥಿ ಗಳೇ ಮರೆಯದಿರಿ. ನಿಮ್ಮ ಉಡುಗೊರೆಗಾಗಿ ನಿಮ್ಮ ಶಿಕ್ಷಕರು ಕಾಯುತ್ತಿರು ತ್ತಾರೆ. ಅವರು ನನ್ನ ವಿದ್ಯಾರ್ಥಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಆದರ್ಶ ಪ್ರಜೆಗಳಾಗಿ ಬಾಳಿ. ಪೋಷಕರಿಗೂ, ಶಿಕ್ಷಕರಿಗೂ ದೇಶಕ್ಕೂ ಕೀರ್ತಿ ತರುವಂತಹ ಸಾಧನೆ ಮಾಡಿ. ನಿಮ್ಮನ್ನು ಸದಾ ಪ್ರೀತಿಸುವ ಶಿಕ್ಷಕ ಬಳಗ.

ರ‍್ಯಾಕ್ಮಿ ಪ್ರವೀಣ್ ಎಂ. ಜಿ., ಪೊನ್ನಂಪೇಟೆ

ಮೊ. ೮೮೬೧೩೨೩೧೨೯