ಇದು ದಶಕಗಳ ಹಿಂದೆ ನಡೆದ ಘಟನೆ. ಗ್ರಾಮೀಣ ಪ್ರದೇಶವೊಂದರ ಸರಕಾರಿ ಶಾಲೆಯಲ್ಲಿ ಶಿಕ್ಷಕರೊಬ್ಬರು ಸಹಜ ಕುತೂಹಲಕ್ಕೆಂದು ಒಂದು ಪ್ರಶ್ನೆ ಕೇಳಿದರು. ನಾನು ನಿಮಗೆ ೧೦೦ ರೂ. ಕೊಡುತ್ತೇನೆ ಅಂದುಕೊಳ್ಳಿ ಅದರಲ್ಲಿ ನೀವೇನು ಮಾಡುತ್ತೀರಿ ? ಕೆಲವು ಮಕ್ಕಳು ಪುಸ್ತಕ, ಪೆನ್ನು, ಚಾಕೊಲೇಟ್, ಆಟದ ಸಾಮಾನು, ಗೊಂಬೆ ಖರೀದಿಸುತ್ತೇವೆ ಎಂದು ಉತ್ತರಿಸಿದರು. ಒಬ್ಬ ಬಾಲಕ ಮಾತ್ರ ನಿಮ್ಮ ೧೦೦ ರೂ. ಪಡೆದ ನಂತರ, ನಾನೂ ೧೦೦ ರೂ. ಸಂಗ್ರಹಿಸಿ ಅದನ್ನು ವಿನಿಯೋಗಿಸುವೆ ಎಂದು ಉತ್ತರಿಸುತ್ತಾನೆ. ಆ ೨೦೦ ರೂ ಹೇಗೆ ವಿನಿಯೋಗಿಸುವೆ ಎಂದು ಶಿಕ್ಷಕರು ಮರು ಪ್ರಶ್ನಿಸುತ್ತಾರೆ. ನನಗೆ ತಂದೆ ಇಲ್ಲ, ತಾಯಿ ನನ್ನನ್ನು ಕಷ್ಟಪಟ್ಟು ಓದಿಸುತ್ತಿದ್ದಾರೆ. ದರ್ಜಿಯಾಗಿ, ಊರಿನವರ ಬಟ್ಟೆ ಹೊಲಿಗೆ ಮಾಡಿ ನನ್ನನ್ನು ಪೋಷಿಸುತ್ತಿದ್ದಾರೆ. ಈಗ ಅವರಿಗೆ ಸೂಜಿಗೆ ನೂಲು ಸೇರಿಸುವುದು ಪ್ರಯಾಸವಾಗುತ್ತಿದೆ. ವೈದ್ಯರಿಗೆ ತೋರಿಸಿದರೆ ದೃಷ್ಟಿ ದೋಷವಿದೆ, ಕನ್ನಡಕ ಕೊಂಡುಕೊಳ್ಳಲು ಹೇಳಿದ್ದಾರೆ. ಅದಕ್ಕೆ ೨೦೦ ರೂ. ವೆಚ್ಚವಾಗುತ್ತದೆ. ಈಗ ಅಷ್ಟು ಹಣ ನಮ್ಮ ಬಳಿ ಇಲ್ಲ. ನಾನು ಹೇಗಾದರೂ ಹಣ ಸಂಗ್ರಹಿಸಿ ಅಮ್ಮನಿಗೆ ಕನ್ನಡಕ ಕೊಡಿಸುತ್ತೇನೆ ಎಂದು ಆ ಬಾಲಕ ನೀಡಿದ ಉತ್ತ್ತರ ಶಿಕ್ಷಕರಿಗೆ ಕನಿಕರ ಮೂಡಿಸಿತ್ತು.

ತರಗತಿಯ ಪಾಠ ಮುಗಿದ ನಂತರ ಶಿಕ್ಷಕರು ಆ ಬಾಲಕನನ್ನು ಸ್ಟಾಫ್ ರೂಮ್‌ಗೆ ಕರೆದು, ೨೦೦ ರೂ. ನೀಡಿ ಅಮ್ಮನಿಗೆ ಕನ್ನಡಕ ಖರೀದಿಸು ಎನ್ನುತ್ತಾರೆ. ಇದಾಗಿ ವರ್ಷಗಳೇ ಕಳೆಯುತ್ತವೆ. ಶಿಕ್ಷಕರೂ ಈ ಘಟನೆಯನ್ನು ಮರೆತಿರುತ್ತಾರೆ. ಸುಮಾರು ೨೫ ವರ್ಷಗಳು ಕಳೆದಿರುತ್ತವೆ. ನಿವೃತ್ತಿಯ ಅಂಚಿಗೆ ಬಂದ ಆ ಶಿಕ್ಷಕರು ಅದೇ ಶಾಲೆಯಲ್ಲಿ ಪಾಠ ಮಾಡುತ್ತಿದ್ದಾಗ ರಸ್ತೆಯಲ್ಲಿ ಧೂಳೆಬ್ಬಿಸುತ್ತಾ ಬಂದ ಸರಕಾರಿ ವಾಹನವೊಂದು ಶಾಲೆಯ ಎದುರು ನಿಲ್ಲುತ್ತದೆ. ಅದರ ಹಿಂದೆಯೇ ಬಂದ ಮತ್ತೆರಡು ವಾಹನಗಳೂ ಅಲ್ಲಿಯೇ ನಿಲ್ಲುತ್ತವೆ. ಆ ಕಾರಿನಿಂದಿಳಿದ ಸೂಟುಬೂಟು ತೊಟ್ಟ ಯುವಕರೊಬ್ಬರನ್ನು ನೋಡಿದÀ ಶಿಕ್ಷಕರು ಪೇಚಿಗೆ ಸಿಲುಕಿದರು. ಅಯ್ಯೋ ಜಿಲ್ಲಾಧಿಕಾರಿಗಳೇ ಬಂದರಲ್ಲಾ? ನನಗೇನೋ ಕಾದಿದೆಯೋ ಎಂದು ಗೊಂದಲಕ್ಕೆ ಸಿಲುಕಿ ಕುರ್ಚಿಯ ಧೂಳೊರೆಸಿ ಅಧಿಕಾರಿಯನ್ನು ಕುಳಿತುಕೊಳ್ಳಲು ವಿನಂತಿಸುತ್ತಾರೆ. ಥಟ್ಟನೆ ಶಿಕ್ಷಕರ ಕಾಲಿಗೆರಗಿದ ಆ ಅಧಿಕಾರಿ ನಾನಾರು ಗೊತ್ತಾಯಿತೆ ನಾವು ನಿಮ್ಮ ಶಿಷ್ಯ. ನನ್ನ ತಾಯಿಗೆ ಕನ್ನಡಕ ಖರೀದಿಸಲು ನೀವು ೨೦೦ ರೂ. ಕೊಟ್ಟಿದ್ದಿರಿ. ಜ್ಞಾಪಕವಿದೆಯೆ? ಮೊನ್ನೆಯಷ್ಟೇ ಈ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದಿರುವೆ. ಮೊದಲಿಗೆ ಗುರುವಿನ ಆಶೀರ್ವಾದ ಪಡೆಯಲು ಬಂದಿರುವೆ ಎಂದಾಗ ಶಿಕ್ಷಕರ ಕಣ್ಗಳಲ್ಲಿ ಆನಂದಭಾಷ್ಪ. ಇದಕ್ಕಿಂತ ಜೀವನ ಸಾರ್ಥಕತೆ ಬೇಕೆ ? ಇಂತಹ ಹತ್ತು ಹಲವಾರು ಘಟನೆಗಳನ್ನು ಉದಾಹರಿಸಬಹುದು. ಹೀಗೆ ಪ್ರತಿಯೊಬ್ಬ ವ್ಯಕ್ತಿಯನ್ನು ತಿದ್ದಿ ತೀಡಿ ಸ್ವಸ್ಥ ಆರೋಗ್ಯ ಸಮಾಜ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಇತರ ಎಲ್ಲ ವೃತ್ತಿಗಳಿಗೂ ಬೋಧನೆಯೊಂದಿಗೆ ಭದ್ರ ಬುನಾದಿ ಒದಗಿಸುವ ಶಿಕ್ಷಕ ವೃತ್ತಿ ನಿಜಕ್ಕೂ ಬೆಲೆ ಕಟ್ಟಲಾರದಂತದ್ದು ಹೌದು ಖಿಇಂಅಊIಓಉ IS ಂ PಖಔಈಇSSIಔಓ WಊIಅಊ ಖಿಇಂಅಊಇS ಂಐಐ ಔಖಿಊಇಖ PಖಔಈಇSSIಔಓS ಎಲ್ಲಕ್ಕೂ ಮೊದಲು ಅಮ್ಮನೇ ಮಗುವಿನ ಮೊದಲ ಗುರು.

ಕ್ರೀಡಾ ಕ್ಷೇತದಲ್ಲಿ ಮಿನುಗಿದವರಿಗೆ ತರಬೇತು ದಾರರೇ ಗುರುಗಳು. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ತಮ್ಮ ಕೋಚ್ ರಮಾಕಾಂತ್ ಆಚ್ರೇಕರ್ ಅವರನ್ನು ನೆನೆದಾಗೆಲ್ಲಾ ಭಾವುಕರಾಗುತ್ತಾರೆ. ಓಟದ ರಾಣಿ ಪಯ್ಯೋಲಿ ಎಕ್ಸ್ಪ್ರೆಸ್ ಎಂದೇ ಖ್ಯಾತಿವೆತ್ತ ಪಿ.ಟಿ. ಉಷಾ ತಮ್ಮ ತರಬೇತುದಾರ ಓ.ಎಮ್. ನಂಬಿಯಾರ್ ಅವರನ್ನು ಆಗಾಗ್ಗೆ ನೆನಪಿಸುತ್ತಾರೆ. ಹೀಗೆ ಪ್ರತಿಫಲ ಬಯಸದೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಲು ತಮ್ಮನ್ನು ಅರ್ಪಿಸಿಕೊಳ್ಳ್ಳುವ ಶಿಕ್ಷಕರು ‘ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ’ ಎಂಬ ನುಡಿಯಂತೆ ಪ್ರಶಸ್ತಿ ಪುರಸ್ಕಾರಗಳಿಂದ ದೂರ ಉಳಿಯುವುದೇ ಹೆಚ್ಚು. ಮಾಜಿ ರಾಷ್ಟçಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ೨೦೧೫ರ ಜುಲೈ ೨೭ ರಂದು ಶಿಲ್ಲಾಂಗ್‌ನ ಐಐಎಂನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿದ್ದ ಸಂದರ್ಭ ಹೃದಯಾಘಾತದಿಂದ ನಿಧನರಾದರು. ತಾನು ಮಕ್ಕಳಿಗೆ ಭೋದಿಸುತ್ತಿರುವಾಗಲೇ ಕೊನೆಯುಸಿರೆಳೆಯಲು ಬಯಸುವು ದಾಗಿಯೂ ಅವರು ಬದುಕಿದ್ದಾಗ ಹೇಳಿದ್ದುದು ಅವಿಸ್ಮರಣೀಯ. ೧೮೮೮ರ ಸೆಪ್ಟೆಂಬರ್ ೫ ರಂದು ಜನಿಸಿದ ಮಾಜಿ ರಾಷ್ಟçಪತಿ ಡಾ||ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆಶಯದಂತೆ ಇಂದು ಶಿಕ್ಷಕರ ದಿನಾಚರಣೆ ನಡೆಯುತ್ತದೆ. ನಮ್ಮೆಲ್ಲರ ಬಾಳು, ಭವಿಷ್ಯ ರೂಪಿಸಿದ ಗುರುಗಳ ಸ್ಮರಣೆಯೊಂದಿಗೆ ಅವರಿಗೆ ನಮನ ಸಲ್ಲಿಸುವ ಕೈಂಕರ್ಯ ನಮ್ಮದಾಗಲಿ.

(ಸಂಗ್ರಹ) ಕಲ್‌ಮಾಡಂಡ ದಿನೇಶ್ ಕಾರ್ಯಪ್ಪ,

ಮಡಿಕೇರಿ, ಮೊ. ೯೮೪೫೪೯೯೧೧೨