ಕೂಡಿಗೆ, ಸೆ. ೨: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಸಂಘ, ರಾಷ್ಟಿçÃಯ ಸೇವಾ ಯೋಜನೆ( ಎನ್.ಎಸ್.ಎಸ್) ವತಿಯಿಂದ ಸೂರ್ಯನ ಬಗ್ಗೆ ಅಧ್ಯಯನ ಮಾಡಲು ಇಸ್ರೋ ವತಿಯಿಂದ ಶನಿವಾರ ಉಡಾಯಿಸಲಾದ ಆದಿತ್ಯ: ಎಲ್-೧ ರ ನೌಕೆಯ ಉಡಾವಣೆಯ ನೇರ ದೃಶ್ಯವನ್ನು ಶಾಲೆಯ ಕಂಪ್ಯೂಟರ್ ಕೊಠಡಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ತೋರಿಸಲಾಯಿತು.
ಆದಿತ್ಯ ಎಲ್- ೧ರ ಉದ್ದೇಶ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಸೂರ್ಯನ ಮೇಲ್ಮೆöÊ ಮೇಲೆ ಅಧ್ಯಯನ ನಡೆಸಲು ಇದೇ ಮೊದಲ ಬಾರಿ ಭಾರತ ದೇಶವು ಈ ನೌಕೆಯನ್ನು ಯಶಸ್ವಿಯಾಗಿ ಉಡಾಯಿಸಿದೆ. ಈ ಯಶಸ್ವಿ ಉಡ್ಡಯನಕ್ಕೆ ಕಾರಣರಾದ ಇಸ್ರೋ ಸಂಸ್ಥೆಯ ಅಧ್ಯಕ್ಷ ಸೋಮನಾಥ್ ಹಾಗೂ ವಿಜ್ಞಾನಿಗಳ ಸಾಧನೆಯು ಭಾರತದ ಬಾಹ್ಯಾಕಾಶ ಸಂಸ್ಥೆಯ ಮೈಲಿಗಲ್ಲು ಆಗಿದೆ ಎಂದರು.
ವಿಜ್ಞಾನ ಸಂಘದ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ, ಕೆ.ಗೋಪಾಲಕೃಷ್ಣ, ಎಂ.ಟಿ. ದಯಾನಂದ ಪ್ರಕಾಶ್, ಎಸ್.ಎಂ. ಗೀತಾ, ಬಿ.ಎನ್. ಸುಜಾತ, ಅನ್ಸಿಲಾ ರೇಖಾ, ವಿದ್ಯಾರ್ಥಿ ನಾಯಕಿ ಐಶ್ವರ್ಯ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಇದ್ದರು.