ಪೊನ್ನಂಪೇಟೆ, ಸೆ. ೨: ಸ್ವಾತಂತ್ರೊö್ಯÃತ್ಸವ ಪ್ರಯುಕ್ತ ಬಿಟ್ಟಂಗಾಲದ ಕೊಡವ ಫ್ಯಾಮಿಲಿ ಕ್ಲಬ್ ವತಿಯಿಂದ ಬಿಟ್ಟಂಗಾಲದ ಅಂಬಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪಠ್ಯ ವಸ್ತುಗಳನ್ನು ಕೊಡುಗೆಯಾಗಿ ನೀಡಲಾಯಿತು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಲಬ್ಬಿನ ಪದಾಧಿಕಾರಿಗಳು ಪುಸ್ತಕ, ಪೆನ್ನು ಪೆನ್ಸಿಲ್ ಇತ್ಯಾದಿ ಪಠ್ಯ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಟ್ಟಂಗಾಲದ ಕೊಡವ ಫ್ಯಾಮಿಲಿ ಕ್ಲಬ್ಬಿನ ಅಧ್ಯಕ್ಷರಾದ, ನಿವೃತ್ತ ಶಿಕ್ಷಣಾಧಿಕಾರಿ ಮುಲ್ಲೇಂಗಡ ಕುಟ್ಟಪ್ಪ, ಜಿಲ್ಲೆಯ ಪ್ರತಿ ಗ್ರಾಮಗಳಲ್ಲೂ ಸರಕಾರಿ ಶಾಲೆಗಳಿವೆ. ಈ ಸರ್ಕಾರಿ ಶಾಲೆಗಳು ಕಳೆದ ತಲೆಮಾರಿನ ಜನರಿಗೆ ಶೈಕ್ಷಣಿಕ ಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆೆ. ಆದ್ದರಿಂದ ಸರ್ಕಾರಿ ಶಾಲೆಗಳ ಮಹತ್ವವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಿದೆ. ಆಯಾ ಊರಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಗ್ರಾಮಸ್ಥರು ಕೈಜೋಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಇದಕ್ಕೂ ಮೊದಲು ಕ್ಲಬ್ಬಿನ ಆವರಣದಲ್ಲಿ ಮತ್ತು ಶಾಲಾ ವಠಾರದಲ್ಲಿ ರಾಷ್ಟçಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಕ್ಲಬ್ಬಿನ ಕ್ರೀಡಾ ಕಾರ್ಯದರ್ಶಿ ಚಂದೂರ ಸಿ. ತಿಮ್ಮಯ್ಯ, ಕ್ಲಬ್ಬಿನ ಪದಾಧಿಕಾರಿ ಅಪ್ಪಂಡೇರAಡ ದಿನು, ಮುರುವಂಡ ಕುಟ್ಟಪ್ಪ, ಗ್ರಾಮದ ಹಿರಿಯರಾದ ಪುಡಿಯಂಡ ಸೋಮಯ್ಯ ಸೇರಿದಂತೆ ಕ್ಲಬ್ಬಿನ ಪದಾಧಿಕಾರಿಗಳು, ಸದಸ್ಯರು, ಶಾಲಾ ಶಿಕ್ಷಕರು ಹಾಜರಿದ್ದರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.