ಕೂಡಿಗೆ, ಸೆ. ೨: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ನೂತನ ರೈತರ ಸಮುದಾಯ ಭವನದ ಕಾಮಗಾರಿ ಗಳು ಭರದಿಂದ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೪ ಮುಖ್ಯ ಗ್ರಾಮಗಳು ಸೇರಿದಂತೆ ಉಪಗ್ರಾಮಗಳ ರೈತ ಸದಸ್ಯರಿಗೆ ಮತ್ತು ಈ ವ್ಯಾಪ್ತಿಯ ಸಾರ್ವಜನಿಕರಿಗೆ ಸದುಪ ಯೋಗವಾಗುವ ಹಿನ್ನೆಲೆಯಲ್ಲಿ ಸಂಘವು ನಬಾರ್ಡ್ನ ೨ ಕೋಟಿ ಹಣಕಾಸಿನ ಸಾಲದೊಂದಿಗೆ ಕೂಡಿಗೆ ರಾಮೇಶ್ವರ ಕೂಡು ಮಂಗಳೂರು ಸಹಕಾರ ಸಂಘ ಜಾಗದಲ್ಲಿ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣಗೊಳ್ಳುತ್ತಿದ್ದು, ಈಗಾಗಲೇ ಶೇ. ೯೦ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ರೈತ ಸದಸ್ಯರ ಸಹಕಾರದೊಂದಿಗೆ ಉದ್ಘಾಟನೆ ಸಿದ್ಧಗೊಂಡಿದೆ.

ಇದರ ಜೊತೆಯಲ್ಲಿ ಸೀಗೆಹೊಸೂರು, ಭುವನಗಿರಿ, ಗಂಗೆ ಕಲ್ಯಾಣ, ಹುಣಸೆಪಾರೆ, ಗ್ರಾಮಗಳಿಗೆ ಉಪಯುಕ್ತವಾಗುವಂತೆ ಸಂಘದ ಮುಖೇನ ಖರೀದಿ ಮಾಡಿರುವ ಎರಡು ಎಕರೆಗಳಷ್ಟು ಪ್ರದೇಶದಲ್ಲಿ ಆ ವ್ಯಾಪ್ತಿಯ ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಅಲ್ಲಿಯೂ ಸಹ ಸಣ್ಣ ಪ್ರಮಾಣದ ಗೋದಾಮು ಸೇರಿದಂತೆ ಎರಡು ವಾಣಿಜ್ಯ ಕಟ್ಟಡಗಳ ನಿರ್ಮಾಣ ಕಾರ್ಯವಾಗಿದೆ. ಮುಂದಿನ ದಿನಗಳ ಎಲ್ಲಿ ರೈತರು ಆರ್ಥಿಕವಾಗಿ ಸಬಲೀಕರಣ ಹೊಂದಲು ಬೇಕಾಗುವ ಎಲ್ಲಾ ಸಾಲ ಸೌಲಭ್ಯಗಳನ್ನು ಅವರ ಬೇಸಾಯಕ್ಕೆ ಅನುಕೂಲವಾಗುವಂತೆ ರಸಗೊಬ್ಬರ ಸೇರಿದಂತೆ ವಿವಿಧ ಬಗೆಯ ಸವಲತ್ತುಗಳನ್ನು ಒದಗಿಸುವುದು ಸಂಘದ ಮುಖ್ಯ ಉದ್ದೇಶವಾಗಿದೆ, ಅದರನ್ವಯ ಕೂಡಿಗೆ ಮತ್ತು ಸೀಗೆಹೊಸೂರು ಗ್ರಾಮಗಳಲ್ಲಿ ಸುಸಜ್ಜಿತವಾದ ರೈತ ಸಮುದಾಯ ಭವನದ ಕಟ್ಟಡವು ನಿರ್ಮಿಸಲಾಗುತ್ತಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಮಾಹಿತಿ ನಿರ್ಮಾಣ ಕಾರ್ಯವಾಗಿದೆ. ಮುಂದಿನ ದಿನಗಳ ಎಲ್ಲಿ ರೈತರು ಆರ್ಥಿಕವಾಗಿ ಸಬಲೀಕರಣ ಹೊಂದಲು ಬೇಕಾಗುವ ಎಲ್ಲಾ ಸಾಲ ಸೌಲಭ್ಯಗಳನ್ನು ಅವರ ಬೇಸಾಯಕ್ಕೆ ಅನುಕೂಲವಾಗುವಂತೆ ರಸಗೊಬ್ಬರ ಸೇರಿದಂತೆ ವಿವಿಧ ಬಗೆಯ ಸವಲತ್ತುಗಳನ್ನು ಒದಗಿಸುವುದು ಸಂಘದ ಮುಖ್ಯ ಉದ್ದೇಶವಾಗಿದೆ, ಅದರನ್ವಯ ಕೂಡಿಗೆ ಮತ್ತು ಸೀಗೆಹೊಸೂರು ಗ್ರಾಮಗಳಲ್ಲಿ ಸುಸಜ್ಜಿತವಾದ ರೈತ ಸಮುದಾಯ ಭವನದ ಕಟ್ಟಡವು ನಿರ್ಮಿಸಲಾಗುತ್ತಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಮಾಹಿತಿ