ವೀರಾಜಪೇಟೆ, ಸೆ. ೨: ನಾಡು, ಧರ್ಮ, ಸಂಸ್ಕೃತಿಯ ರಕ್ಷಣೆ ಮಾಡಲು ಪ್ರತಿಯೊಬ್ಬರು ಪಣತೊಡಬೇಕು ಎಂದು ಸಂಘ ಪ್ರಚಾರಕ್ ಮಡಿಕೇರಿಯ ಅರುಣ್ ಕುಮಾರ್ ಕರೆ ನೀಡಿದರು.
ರಾಷ್ಟಿçÃಯ ಸ್ವಯಂ ಸೇವಕ ಸಂಘ ವೀರಾಜಪೇಟೆ ನಗರ ಶಾಖೆಯ ವತಿಯಿಂದ ನಗರದ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆದ ರಕ್ಷಾ ಬಂಧನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘದ ಸರ್ವ ಕಾರ್ಯಕರ್ತರು ಸಮಾಜ, ರಾಷ್ಟç ಧರ್ಮ ರಕ್ಷಣೆಗಾಗಿ ಸಂಸ್ಕೃತಿಯ ಉಳಿವಿಗಾಗಿ ಸೇವಾ ಮನೋಭಾವದಿಂದ ಶ್ರಮಿಸುತ್ತಾ ಬಂದಿದ್ದಾರೆ. ಸಮಾಜದ ಸಂಘಟನೆ, ದೇಶದ ಸುರಕ್ಷತೆಗಾಗಿ ನಾವೆಲ್ಲ ಹಿಂದೂ, ನಾವೆಲ್ಲ ಶ್ರಮಿಸುತ್ತಾ ಒಂದು ಎಂಬ ಸಹೋದರ ಭಾವದಿಂದ ಸಾಗೋಣ ಎಂದರು.
ನಿವೃತ್ತ ಉಪನ್ಯಾಸಕ ಸಿ.ಎಂ. ಭೀಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ಯಾಂ ಭಟ್ ರಕ್ಷಾ ಬಂಧನ ಕಾರ್ಯಕ್ರಮದ ಸಂದೇಶ ನೀಡಿದರು. ಅಜಯ್ ರಾವ್ ರಕ್ಷೆಯ ಕುರಿತು ಗೀತೆ ಹಾಡಿದರು.