ಮಡಿಕೇರಿ, ಸೆ. ೨: ೨೦೨೩-೨೪ನೇ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ೯ ಮಂದಿ ಆಯ್ಕೆಯಾಗಿದ್ದಾರೆ.
ದೇವರಕೊಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಬಿ.ಸಿ. ವನಜ, ನಾಪೋಕ್ಲು ಕೆ.ಪಿ.ಎಸ್. ಮುಖ್ಯ ಶಿಕ್ಷಕಿ ಕೆ.ಪಿ. ಚಂದ್ರಕಲಾ, ಚೆಂಬು ಸರಕಾರಿ ಪ್ರೌಢಶಾಲೆ ಸಹ ಶಿಕ್ಷಕಿ ಪಿ.ಎಸ್. ಕಾಮಾಕ್ಷಿ, ಹಟ್ಟಿಹೊಳೆ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಶಾಂತಶೀಲ, ರಂಗಸಮುದ್ರ ಹಿರಿಯ ಪ್ರಾಥಮಿಕ ಶಾಲೆಯ ಕೆ.ಕೆ. ಸುನಿತ, ಕೂಡುಮಂಗಳೂರು ಪ್ರೌಢಶಾಲೆಯ ದಯಾನಂದ ಪ್ರಕಾಶ, ಎಲಿಯಂಗಾಡು ಪ್ರಾಥಮಿಕ ಶಾಲೆಯ ಪಿ.ಎಂ. ಸುಬ್ರಮಣ್ಯ, ಗೋಣಿಕೊಪ್ಪ ಮಾದರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್, ಜಿ.ಪಿ.ಎಸ್. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲಾಲ್ಕುಮಾರ್ ಪ್ರಶಸ್ತಿಗೆ ಭಾಜನರಾದವರು. ತಾ. ೫ರಂದು ಮಡಿಕೇರಿ ಗೌಡ ಸಮಾಜದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಳಿಸಿದ್ದಾರೆ.