ಮಡಿಕೇರಿ, ಸೆ. ೨: ಮಡಿಕೇರಿಯ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಶತಮಾನೋತ್ಸವ ಭವನದಲ್ಲಿ ನಿಧಿ ವತಿಯಿಂದ ಶ್ರೀ ರಾಘವೇಂದ್ರ ಆರಾಧನೆ ಮತ್ತು ವರ ಮಹಾಲಕ್ಷಿö್ಮ ಪೂಜೆಯು ಶುಕ್ರವಾರ ನಡೆಯಿತು.
ಈ ಸಂದರ್ಭ ನಗರದ ಶ್ರುತಿ ಲಯ ಮಹಿಳಾ ತಂಡದಿAದ ವೀಣಾ ಹೊಳ್ಳ ಅವರ ನೇತೃತ್ವದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ ನೆರವೇರಿತು. ರಾಮಕೃಷ್ಣ ಭಟ್ ಅವರು ಗುರು ಆರಾಧನೆ ಮತ್ತು ಲಕ್ಷಿö್ಮ ಪೂಜೆಯನ್ನು ನೆರವೇರಿಸಿದರು.
ನಿಧಿಯ ಅಧ್ಯಕ್ಷ ಎ. ಗೋಪಾಲಕೃಷ್ಣ, ಕಾರ್ಯದರ್ಶಿ ಬಿ.ಕೆ. ಅರುಣ್ ಕುಮಾರ್, ನಿರ್ದೇಶಕರು ಗಳಾದ ಗೀತಾ ಗಿರೀಶ್, ಜಯಶೀಲ, ಸವಿತಾ ಭಟ್, ಬಿ.ಕೆ. ಜಗದೀಶ್, ರಾಮಚಂದ್ರ ಮೂಗೂರು, ಲಲಿತಾ ರಾಘವನ್, ಭರತೇಶ್ ಖಂಡಿಗೆ, ಪಿ.ವಿ. ಅಶೋಕ್ ಮೊದಲಾದವರಿದ್ದರು.