ಮಡಿಕೇರಿ: ‘ಫುಡ್ ಸೇಫ್ಟಿ ಆ್ಯಂಡ್ ಸ್ಟಾಂಡರ್ಸ್ ಅಥಾರಿಟಿ ಆಫ್ ಇಂಡಿಯಾ’ದ (ಎಫ್. ಎಸ್.ಎಸ್.ಎ.ಐ) ಸದಸ್ಯರಾಗಲು ದಿವಂಗತ ಕೋಣೇರಿರ ಅಯ್ಯಪ್ಪ ಹಾಗೂ ದೇವಕಿ (ತಾಮನೆ ಬಿದ್ದಂಡ) ದಂಪತಿಯ ಪುತ್ರ ಡಾ.ಅನು ಅಪ್ಪಯ್ಯ ಅವರನ್ನು ಆಹ್ವಾನಿಸಲಾಗಿದೆ. ಭಾರತದಾದ್ಯಂತ ಎಲ್ಲಾ ಆಹಾರ ಪದಾರ್ಥಗಳ ನಿಯಂತ್ರಣದಲ್ಲಿ ಅಧಿಕಾರ ಹೊಂದಿರುವ ಕೇಂದ್ರ ಸರಕಾರದ ಆಹಾರ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಡಿಯ ಎಫ್.ಎಸ್. ಎಸ್.ಎ.ಐ, ಅಪ್ಪಯ್ಯ ಅವರನ್ನು ೩ ವರ್ಷಗಳ ಅವಧಿಗೆ (೨೦೨೩-೨೫) ಸದಸ್ಯರಾಗು ವಂತೆ ಆಹ್ವಾನಿಸಿದೆ.
ಎಫ್.ಎಸ್.ಎಸ್.ಎ.ಐ ಸದಸ್ಯರಾಗಿ ಡಾ.ಅನು ಅಪ್ಪಯ್ಯ
(ಮೊದಲ ಪುಟದಿಂದ) ಅಪ್ಪಯ್ಯ ಅವರು ಸಿ.ಎಸ್.ಐ.ಆರ್-ಸಿ.ಎಫ್.ಟಿ.ಆರ್.ಐ ನಿವೃತ್ತ ವಿಜ್ಞಾನಿಯಾಗಿದ್ದು, ‘ಇಂಡಿಯನ್ ಡೆಲಿಗೇಷನ್ ಟು ಇಂಟರ್ನ್ಯಾಷನಲ್ ಆರ್ಗನೈಸೇಷನ್ ಆಫ್ ವೈನ್ ಆ್ಯಂಡ್ ವೈನ್’ನ ಅಧ್ಯಕ್ಷರಾಗಿ, ಕೇಂದ್ರ ಸರಕಾರದ ‘ಕಮಿಟಿ ಆನ್ ಆಲ್ಕೊಹಾಲಿಕ್ ಬೆವರೇಜಸ್ ಆಫ್ ಬ್ಯೂರೋ ಆಫ್ ಇಂಡಿಯನ್ ಸ್ಟಾö್ಯಂಡರ್ಸ್’ನ ಅಧ್ಯಕ್ಷರಾಗಿಯೂ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪತ್ನಿ ಡಾ.ಸುಶ್ಮಾ ಅಪ್ಪಯ್ಯ ಅವರು ‘ನ್ಯೂಟ್ರಿಷಿಯನ್ ಹಾಗೂ ಡೈಯಟ್’ ಸಂಸ್ಥೆಯೊAದರ ಸ್ಥಾಪಕಿಯಾಗಿದ್ದಾರೆ.