ಮಡಿಕೇರಿ, ಸೆ. ೨: ಜಿಲ್ಲೆಯ ಪ್ರಮುಖ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾಗಿರುವ ‘ಕೈಲ್ಪೊಳ್ದ್’ (ಕೈಲುಮುಹೂರ್ತ) ತಾ. ೩ರಂದು (ಇಂದು) ಜಿಲ್ಲೆಯಾದ್ಯಂಥ ಆಚರಿಸಲ್ಪಡಲಿದೆ. ಕೃಷಿಪರಿಕರಗಳು, ಕೋವಿ-ಕತ್ತಿ ಸಹಿತವಾದ ಆಯುಧಗಳ ಪೂಜೆಯೊಂದಿಗೆ ಹಬ್ಬದ ಸಂಭ್ರಮ ನಡೆಯಲಿದೆ. ಈ ದಿನದ ವಿಶೇಷವಾಗಿ ಜಿಲ್ಲೆಯ ಹಲವಾರು ಭಾಗಗಳಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯೂ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಲಿವೆ.
ಮಡಿಕೇರಿ, ಮೂರ್ನಾಡು, ತಾಳತ್ಮನೆ, ಮರಗೋಡು, ಕಾಕೋಟುಪರಂಬು, ವೀರಾಜಪೇಟೆ, ಆಲೂರು ಸಿದ್ದಾಪುರ ಸೇರಿದಂತೆ ಅಲ್ಲಲ್ಲಿ ಕ್ರೀಡಾಸ್ಪರ್ಧೆಗಳು ಆಯೋಜಿತಗೊಂಡಿವೆ. ಪೊನ್ನಂಪೇಟೆ ಕೊಡವ ಸಮಾಜದಲ್ಲಿ ವಿಶೇಷವಾಗಿ ಸಾಂಪ್ರದಾಯಿಕ ಆಯುಧಗಳ ಪೂಜೆಯೊಂದಿಗೆ ವಾಹನಗಳ ಪೂಜೆಯೂ ಜರುಗಲಿದೆ.