ಮಡಿಕೇರಿ, ಸೆ. ೧ : ಸೂರ್ಯನು ಬಾನಂಚಿನಲ್ಲಿರುವ ಸಂದರ್ಭ ತೇವಾಂಶ ಭರಿತ ವಾತಾವರಣದ ಸಮ್ಮುಖದಲ್ಲಿ ಸೂರ್ಯನಿಗೆ ಬೆನ್ನು ಕೊಟ್ಟು ಬಾನಂಚನ್ನು ಗಮನಿಸಿದರೆ, ಆಕರ್ಷಕ ೭ ಬಣ್ಣಗಳ ಕಾಮನ ಬಿಲ್ಲನ್ನು ಗಮನಿಸಬಹುದು. ಆದರೆ ಇಂದು, ಕೊಡಗು ಜಿಲ್ಲೆಯ ವೀರಾಜಪೇಟೆ, ಕುಶಾಲನಗರ, ಭಾಗಮಂಡಲ, ಗೋಣಿಕೊಪ್ಪ ಸೇರಿದಂತೆ ಇತರೆಡೆಗಳಲ್ಲಿ ವಿಚಿತ್ರವೆಂಬAತೆ ಸೂರ್ಯನಿಗೆ ಮುಖ ಮಾಡಿದಾಗಲೇ ಸೂರ್ಯನ ಸುತ್ತ ವೃತ್ತಾಕಾರದ ಕಾಮನಬಿಲ್ಲನ್ನು ಗಮನಿಸಿದ ಜನ ಅಚ್ಚರಿಗೊಂಡಿದ್ದಾರೆ. ಈ ಆಕರ್ಷಕ ಸನ್ನಿವೇಶವನ್ನು ತಮ್ಮ ಫೋನ್‌ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊAಡಿದ್ದಾರೆ.
ನೈಸರ್ಗಿಕ ಪ್ರಕ್ರಿಯೆ: ೭ ಬಣ್ಣಗಳನ್ನು ಹೊಂದಿರುವ ಸೂರ್ಯನಲ್ಲಿನ ಬಿಳಿ ಬಣ್ಣವು ಭೂಮಿಯ ತೇವಾಂಶಭರಿತ ವಾತಾವರಣದಲ್ಲಿನ ನೀರಿನ ಹನಿಗಳಿಗೆ ಅಪ್ಪಳಿಸುವ ಪರಿಣಾಮ, ವಿವಿಧ ತರಂಗಾAತರವುಳ್ಳ ೭ ಬಣ್ಣಗಳು ಪ್ರತಿಬಿಂಬಗೊAಡು ಕಾಣಸಿಗುತ್ತವೆ. ಇದೇ ಕಾಮನಬಿಲ್ಲು. ಪ್ರತಿಬಿಂಬವಾಗಿರುವ ಕಾರಣ ಸೂರ್ಯನ ವಿರುದ್ಧದ ದಿಕ್ಕಿನಲ್ಲಿ ಇದು ಗೋಚರಿಸುತ್ತದೆ. ಈ ಕಾಮನಬಿಲ್ಲು ಸೃಷ್ಟಿಯಾಗಲು ವಾತಾವರಣದಲ್ಲಿ ತೇವಾಂಶ ಹೆಚ್ಚಿರುವುದು ಅಗತ್ಯ.
ಇಂದು ಗೋಚರಿಸಿದ ವೃತ್ತಾಕಾರದ ಕಾಮನಬಿಲ್ಲು: ಇಂದು ಗೋಚರಿಸಿದ
(ಮೊದಲ ಪುಟದಿಂದ) ವೃತ್ತಾಕಾರದ ಕಾಮನಬಿಲ್ಲು ಸೂರ್ಯನ ವಿರುದ್ಧ ದಿಕ್ಕಿನ ಬದಲು ಸೂರ್ಯನ ಸುತ್ತವೇ ಸೃಷ್ಟಿಯಾಗಿದೆ. ಇದು ಸೃಷ್ಟಿಯಾಗಬೇಕಾದರೆ ತೇವಾಂಶದ ಬದಲು ವಾತಾವರಣದಲ್ಲಿ ಮಂಜುಗಡ್ಡೆ ಪುಡಿಗಳು ಅವಿತಿರಬೇಕು. ಇಲ್ಲಿ ಸುಮಾರು -೨೦ ಡಿಗ್ರಿ ಸೆಲ್ಶಿಯಸ್ ತಾಪಮಾನವಿರಬೇಕು. ಇಂತಹ ಸಂದರ್ಭದಲ್ಲಿ ಸೂರ್ಯನ ಬಿಳಿ ಕಿರಣವು ವಿಸ್ತಾರವಾಗಿ ಹರಡಿ ಕಾಮನಬಿಲ್ಲಿನ ಬಣ್ಣಗಳಾಗಿ ಹರಡುತ್ತವೆ. ಇಲ್ಲಿ ಸೂರ್ಯನ ಬೆಳಕು ಮಂಜುಗಡ್ಡೆ ಪುಡಿಗಳೊಳಗೆ ಸಾಗುವಾಗ ಕಾಮನಬಿಲ್ಲು ಸೃಷ್ಟಿಯಾಗುತ್ತದೆ. ಯಾವುದೇ ರೀತಿಯ ಪ್ರತಿಬಿಂಬ ಇರುವುದಿಲ್ಲ. ಆದುದರಿಂದ ಸೂರ್ಯನ ದಿಕ್ಕಿನಲ್ಲಿಯೇ ಸೃಷ್ಟಿಯಾಗುತ್ತದೆ. ಅತ್ಯಂತ ಚಳಿಯ ವಾತಾವರಣ ಹೊಂದಿರುವ ಹಿಮಾಲಯ ಪರ್ವತದಲ್ಲಿ ಈ ಸನ್ನಿವೇಶ ಸಾಮಾನ್ಯ, ಇತರೆಡೆ ಅಪರೂಪ.
- ಪಿ.ಜಿ.ಆರ್