ಕೂಡಿಗೆ, ಸೆ. ೨: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಚಿಕ್ಕತ್ತೂರಿನ ಸಮು ದಾಯ ಭವನದ ಆವರಣಕ್ಕೆ ಶೀಟ್ ಅಳವಡಿಕೆ ಮತ್ತು ವ್ಯಾಯಾಮ ಶಾಲೆ ಪ್ರಾರಂಭ ಕಾಮಗಾರಿಗೆ ಗ್ರಾ.ಪಂ. ಸದಸ್ಯರುಗಳು ಚಾಲನೆ ನೀಡಿದರು. ರೂ. ೬ ಲಕ್ಷ ವೆಚ್ಚದಲ್ಲಿ ಕೈಗೊಂಡಿ ರುವ ಅಭಿವೃದ್ಧಿ ಕಾಮಗಾರಿಗೆ ಗ್ರಾ.ಪಂ. ಸದಸ್ಯರಾದ ದಿನೇಶ್, ಖತೀಜ, ಭಾಗ್ಯರವಿ ಭೂಮಿಪೂಜೆ ನೆರವೇರಿಸಿದರು.

ಗ್ರಾಮಸ್ಥರ ಕೋರಿಕೆ ಮೇರೆಗೆ ಗ್ರಾಮದಲ್ಲಿ ನಡೆಯುವ ಶುಭ ಸಮಾರಂಭಗಳು, ಹಬ್ಬ ಹರಿದಿನಗಳ ಸಾಮೂಹಿಕ ಆಚರಣೆಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಅಂದಾಜು ರೂ. ೬ ಲಕ್ಷ ವೆಚ್ಚದಲ್ಲಿ ಛಾವಣಿ ಅಳವಡಿಕೆ ಕಾಮಗಾರಿ ಕೈಗೊಳ್ಳಲಾಗಿದೆ. ಸಮುದಾಯ ಭವನ ಬಳಸಿಕೊಂಡು ವ್ಯಾಯಾಮ ಶಾಲೆ ಕೂಡ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಗ್ರಾಮಸ್ಥರು ದೂರದ ಸ್ಥಳಗಳನ್ನು ಅವಲಂಬಿಸದೆ ಗ್ರಾಮದಲ್ಲಿಯೇ ಸಾಮೂಹಿಕ ಆಚರಣೆ ನಡೆಸಲು ಈ ಸಮುದಾಯ ಭವನ ಉಪಯೋಗಕ್ಕೆ ಬರಲಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ ತಿಳಿಸಿದರು. ಈ ಸಂದರ್ಭ ಗ್ರಾ.ಪಂ. ಮಾಜಿ ಅಧ್ಯಕ್ಷ ಸಿ.ಸಿ. ಸ್ವಾಮಿ, ತಾ.ಪಂ. ಮಾಜಿ ಸದಸ್ಯ ಗಣೇಶ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಗಜೇಂದ್ರ, ಚಿಕ್ಕತ್ತೂರು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ರಾಮು, ಪ್ರಮುಖರಾದ ಕುಮಾರ ಸ್ವಾಮಿ, ಕೃಷ್ಣ, ಉದಯಕುಮಾರ್, ರಾಧಾಕೃಷ್ಣ, ಶಿವಾನಂದ ರೈ, ಹೊನ್ನಣ್ಣ, ಮಾದಪ್ಪ, ನಿರ್ಮಲ, ಮಂಜುಳಾ, ಆನಂದ್, ಸುರೇಶ್, ಕೃಷ್ಣಕಾಂತ್, ತುಂಡು ಗುತ್ತಿಗೆದಾರ ಹರೀಶ್ ಮತ್ತಿತರರು ಇದ್ದರು.