ಮಡಿಕೇರಿ, ಸೆ ೧: ಹದಿನೆಂಟು ವರ್ಷ ವಯಸ್ಸಿನ ಮೇಲ್ಪಟ್ಟವರು ನೋಂದಣಿ ಪತ್ರವನ್ನು ತುಂಬುವ ಮೂಲಕ ಅಥವಾ ಜೀವ ಸಾರ್ಥಕತೆ ವೆಬ್‌ಸೈಟ್ hಣಣಠಿs://ತಿತಿತಿ.ರಿeevಚಿsಚಿಡಿಣhಚಿಞಚಿಣhe.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ನೇತ್ರದಾನಿಗಳಾಗಲು ನೋಂದಣಿ ಮಾಡಿಸಬಹುದು. ಆದರೆ ನೇತ್ರದಾನಕ್ಕೆ ಗರಿಷ್ಠ ವಯಸ್ಸಿನ ಮಿತಿ ಇರುವುದಿಲ್ಲ.
ನೇತ್ರದಾನ ಮಾಡಲು ಲಿಂಗ, ಶರೀರದ ಖಾಯಿಲೆಗಳಾದ ಸಕ್ಕರೆ, ರಕ್ತದ ಒತ್ತಡ ಮತ್ತು ಕಣ್ಣಿನ ರೋಗಗಳಾದ ದೃಷ್ಠಿದೋಷ, ಪೊರೆ, ಅಕ್ಷಿಪಟಲ ಕೀಳುವಿಕೆ, ಯಾವುದೇ ಶಸ್ತçಚಿಕಿತ್ಸೆಗೆ ಒಳಪಟ್ಟಿರುವಿಕೆ ಇವುಗಳ ಅಡ್ಡಿಯಿಲ್ಲದೆ ಕಣ್ಣಿನ ಪಾರದರ್ಶಕ ಪಟಲ ಆರೋಗ್ಯವಾಗಿದ್ದಲ್ಲಿ ನೇತ್ರದಾನ ಮಾಡಬಹುದು. ರೇಬಿಸ್, ಸಿಫಿಲಿಸ್, ಏಡ್ಸ್, ಹೆಪಟೈಟಿಸ್ ಮುಂತಾದ ಕಾಯಿಲೆಗಳಿಂದ ಸಾಯುವ ವ್ಯಕ್ತಿ ನೇತ್ರದಾನ ಮಾಡುವಂತಿಲ್ಲ ಮರಣ ಹೊಂದಿದವರು ನೇತ್ರದಾನಕ್ಕೆ ನೋಂದಣಿ ಮಾಡಿಸದಿದ್ದಲ್ಲಿ ಅವರ ಬಂಧುಗಳು ಮರಣ ಹೊಂದಿದವರ ನೇತ್ರದಾನಕ್ಕೆ ಸಮ್ಮತಿ ನೀಡಬಹುದು.
ಮರಣ ಹೊಂದಿದವರ ನೇತ್ರದಾನ ಮಾಡಲು ಹತ್ತಿರದ “ನೇತ್ರ ಭಂಡಾರ” - ನೇತ್ರ ತಜ್ಞರನ್ನು ಯಾವುದೇ ಸಮಯದಲ್ಲಾದರೂ ಸಂಪರ್ಕಿಸಬಹುದು. ಮರಣ ಹೊಂದಿದ ೬ ಗಂಟೆಗಳಲ್ಲಿ ನೇತ್ರದಾನ ಮಾಡಬೇಕು. ಅಲ್ಲಿಯವರೆಗೂ ಮರಣ ಹೊಂದಿದವರ ರೆಪ್ಪೆಗಳನ್ನು ಮುಚ್ಚಿರಬೇಕು.
ನೇತ್ರಗಳನ್ನು ತೆಗೆಯಲು ೧೫-೨೦ ನಿಮಿಷಗಳು ಸಾಕು. ಇದನ್ನು ಮರಣ ಹೊಂದಿದವರು ಇದ್ದ ಜಾಗದಲ್ಲೇ ದಿನದ ಯಾವುದೇ ಸಮಯದಲ್ಲಾದರೂ ಮಾಡಲಾಗುವುದು ಮತ್ತು ಇದರಿಂದ ಮುಖ ವಿಕಾರವಾಗುವುದಿಲ್ಲ ಹಾಗೂ ಇದಕ್ಕೆ ದಾನಿಗಳ ಬಂಧುಗಳು ಯಾವ ಖರ್ಚನ್ನು ಭರಿಸಬೇಕಿಲ್ಲ.
ನಮ್ಮ ದೇಶದಲ್ಲಿ ಅಂದಾಜು ೧೫ ಲಕ್ಷ ಮಂದಿ ಕಣ್ಣಿನ ಪಾರದರ್ಶಕ ಪಟಲದ ತೊಂದರೆಯಿAದ ಉಂಟಾದ ಕುರುಡುತನದಿಂದ ನರಳುತ್ತಿದ್ದಾರೆ. ಇದನ್ನು ಪಾರದರ್ಶಕ ಪಟಲದ ಕಸಿ ಮಾಡುವುದರ ಮೂಲಕ ಗುಣಪಡಿಸಬಹುದು.
ಯಾವುದೇ ನೇತ್ರ ಭಂಡಾರದಲ್ಲಿ ನೋಂದಣಿ ಮಾಡಿಸಿದ್ದರೂ ಮರಣ ಹೊಂದಿದ ಸ್ಥಳಕ್ಕೆ ಹತ್ತಿರದಲ್ಲಿರುವ ನೇತ್ರ ಭÀಂಡಾರಕ್ಕೆ ನೇತ್ರಗಳನ್ನು ನೀಡಬಹುದು. ನೇತ್ರ ಭಂಡಾರಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ೧೦೪ ಸಹಾಯವಾಣಿಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ದಾನ ಮಾಡಿದ ಕಣ್ಣುಗಳನ್ನು ಮರಣದ ನಂತರವೇ ತೆಗೆಯಬೇಕು. ಜೀವಂತ ವ್ಯಕ್ತಿಯ ಕಣ್ಣುಗಳನ್ನು ದಾನಕ್ಕಾಗಿ ತೆಗೆಯಬಾರದು. ಯಾವುದೇ ಕೃತಕ ಅಥವಾ ಪ್ರಾಣಿಯ ಕಣ್ಣು ಮನುಷ್ಯನ ಕಣ್ಣಿಗೆ ಬದಲಾಗಿ ಉಪಯೋಗಿಸುವುದಿಲ್ಲ. ಅಂರ‍್ರಾಷ್ಟಿçÃಯ ನಿಯಮಗಳನುಸಾರ ದಾನಿಗಳ ಹಾಗೂ ದಾನ ಪಡೆದವರ ಹೆಸರುಗಳನ್ನು ನೇತ್ರ ಭಂಡಾರದಲ್ಲಿ ಗೌಪ್ಯವಾಗಿರಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿಯಂತ್ರಣ ವಿಭಾಗದ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊ. ೦೮೨೭೨-೨೨೩೪೪೪ನ್ನು ಸಂಪರ್ಕಿಸಬಹುದು.