ಮಡಿಕೇರಿ ಸೆ. ೧ : ಬದಲಾದ ಇಂದಿನ ಕಾಲಘಟ್ಟದಲ್ಲಿ ಕೊಡವ ಭೂಮಿ ಮತ್ತು ಅತ್ಯಂತ ಸೂಕ್ಷö್ಮ ಕೊಡವ ಬುಡಕಟ್ಟು ಜನಾಂಗದ ಸಂರಕ್ಷಣೆಯ ಅನಿವಾರ್ಯ ಎದುರಾಗಿದೆ ಎಂದು ಹೈಕೋರ್ಟ್ ನ್ಯಾಯವಾದಿ ಕೀರನ್ ನಾರಾಯಣ್ ಪ್ರತಿಪಾದಿಸಿದ್ದಾರೆ.

ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮಡಿಕೇರಿ ನಗರದ ಹೊರ ವಲಯದ ಕ್ಯಾಪಿಟಲ್ ವಿಲೇಜ್ ಮಂದ್‌ನಲ್ಲಿ ನಡೆದ ೨೯ನೇ ವರ್ಷದ ಸಾರ್ವತ್ರಿಕ “ಕೈಲ್ ಪೊಳ್ದ್” ಹಬ್ಬದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಡವರ ಅನನ್ಯ ಭೂಮಿ ಮತ್ತು ಸುಂದರವಾದ ಕೊಡವ ರೇಸ್ ಅನ್ನು ಒಟ್ಟಿಗೆ ಸಂರಕ್ಷಿಸಬೇಕಾಗಿದೆ. ಶಿಕ್ಷಣ, ಆರ್ಥಿಕ ಪ್ರಗತಿ ಮತ್ತು ಭವಿಷ್ಯವನ್ನು ಹುಡುಕಿಕೊಂಡು ಇಂದು ಯುವ ಜನಾಂಗ ಕೊಡಗಿನಿಂದ ಹೊರ ಹೋಗುತ್ತಿದ್ದಾರೆ. ಆದ್ದರಿಂದ ಭೂಮಿ ಮತ್ತು ಕೊಡವ ಜನಾಂಗವನ್ನು ಒಟ್ಟಿಗೆ ಸಂರಕ್ಷಿಸುವುದು ಬಹಳ ಮುಖ್ಯ. ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯನ್ನು ಸಾಧಿಸುವ ಮೂಲಕ ಆ ಎಲ್ಲಾ ಉತ್ತಮ ಅವಕಾಶಗಳನ್ನು ಸೃಷ್ಟಿಸಲಾಗುತ್ತದೆ ಮತ್ತು ಕೊಡವ ಜನಾಂಗದ ಸರ್ವಾಂಗೀಣ ಸಬಲೀಕರಣ ಸಶಕ್ತಗೊಳಿಸಲು ಹಾದಿ ಸುಗಮವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಿಎನ್‌ಸಿ ಸಂಘಟನೆಯ ನ್ಯಾಯಸಮ್ಮತ ಬೇಡಿಕೆಗಳನ್ನು ಬೆಂಬಲಿಸಿ ಖ್ಯಾತ ಅರ್ಥಶಾಸ್ತçಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಕರ್ನಾಟಕದ ಹೈಕೋರ್ಟ್ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ನಾವು ಕಾನೂನು ಪ್ರಕ್ರಿಯೆಗಳಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಕೀರನ್ ನಾರಾಯಣ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಕೊಡವ ಜನಾಂಗದ ಹಬ್ಬಗಳು ಪ್ರಕೃತಿ ಪೂಜೆಗೆ ಪೂರಕವಾಗಿವೆ. ಇವುಗಳನ್ನು ಎಲ್ಲಾ ಕೊಡವರು ಸಾರ್ವತ್ರಿಕವಾಗಿ ಆಚರಿಸುವ ಮೂಲಕ ಕೊಡವ ಬುಡಕಟ್ಟು ಜನಾಂಗದ ಶ್ರೀಮಂತ ಮತ್ತು ವಿಶಿಷ್ಟ ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ಸಾಕ್ಷೀಕರಿಸಬೇಕು ಎಂದು ಕರೆ ನೀಡಿದ ಅವರು, ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಇದೇ ಸಂದರ್ಭ ಅವರು ಮಂಡಿಸಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು “ಕೈಲ್ ಪೊಳ್ದ್” ಪ್ರಯುಕ್ತ ಶಾಸ್ತೊçÃಕ್ತ ಪ್ರಾರ್ಥನೆ ಮತ್ತು ಆರಾಧನೆ ನಡೆಯಿತು. ಕೊಡವ ರಕ್ಷಕರು ಹಾಗೂ ಪೂರ್ವಜರು, ಭೂದೇವಿ, ಪ್ರಕೃತಿ ಮತ್ತು ಪರ್ವತ ದೇವತೆ, ದೈವಿಕ ವಸಂತ ಕಾವೇರಿ ಮಾತೆ, ಸೂರ್ಯ ಹಾಗೂ ಚಂದ್ರರಿಗೆÀ ವಿಶೇಷ ಪ್ರಾರ್ಥನೆ ಸಲ್ಲಿಸಿ ಮೀದಿ ಅರ್ಪಿಸಲಾಯಿತು. ಸಂಸ್ಕಾರದ ಬಂದೂಕು-ಆಯುಧಗಳು ಮತ್ತು ಕೃಷಿ ಉಪಕರಣಗಳನ್ನು ತೋಕ್ ಪೂಗಳಿಂದ ಅಲಂಕರಿಸಿ ಕೊಡವ ಜನಾಂಗದ ಮಂದ್‌ನ ಗರ್ಭಗುಡಿ ಯಲ್ಲಿಟ್ಟು ಪೂಜಿಸಲಾಯಿತು.

ಸಾಂಪ್ರದಾಯಿಕ ಆಚರಣೆಯ ನಂತರ, ಸಾಂಸ್ಕöÈತಿಕ ಕಾರ್ಯಕ್ರಮ ಗಳಾದ ತೆಂಗೆ ಬೋಡಿ, ಪರೆಯ ಕಳಿ, ಶಕ್ತಿಕೋಲ್ ಬಲಿ, ಮುಕ್ಕೋಡ್ಲು ವ್ಯಾಲಿ ಡ್ಯೂ ಸಾಂಸ್ಕöÈತಿಕ ಸಂಘದಿAದ ಕತ್ತಿಯಾಟ್, ಕೋಲಾಟ್ ಮತ್ತು ಕೊಡವ, ಕೊಡವತಿಯರ ಜಾನಪದ ಕುಣಿತ, ಕೊಡವ ಜಾನಪದ ಆಟಗಳೊಂದಿಗೆ ಸಂಭ್ರಮಿಸಲಾಯಿತು. ಯುವಕರಿಗೆ ಮತ್ತು ಮುಖ್ಯ ಅತಿಥಿಗಳಿಗೆ ಬಾಳೆ ರ‍್ಯಾದೆ ನೀಡಲಾಯಿತು.

“ಕೈಲ್ ಪೊಳ್ದ್” ಹಬ್ಬದ ಪ್ರಯುಕ್ತ ಕೊಡವ ಸಾಂಪ್ರದಾಯಿಕ ಖಾದ್ಯಗಳ ಭೋಜನವನ್ನು ನೆರೆದಿದ್ದವರು ಸವಿದರು. ಮುಖ್ಯ ಅತಿಥಿಗಳಾಗಿ ಶ್ರುತಿ ಕಿರಣ್ ಉಪಸ್ಥಿತರಿದ್ದರು.

ಸಿಎನ್‌ಸಿ ಪ್ರಮುಖರಾದ ಬೊಪ್ಪಂಡ ಬೊಳ್ಳಮ್ಮ, ಕಲಿಯಂಡ ಮೀನಾ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ನಂದಿನೆರವAಡ ನಿಶಾ, ಪುಲ್ಲೇರ ಸ್ವಾತಿ ಕಾಳಪ್ಪ, ಪಟ್ಟಮಾಡ ಲಲಿತಾ, ಚೋಳಪಂಡ ಜ್ಯೋತಿ, ಬಾಚಮಂಡ ಕಸ್ತೂರಿ, ನಂದೇಟಿರ ಕವಿತ ರವಿ, ಕರವಂಡ ಸರಸು, ಬಾಚರಣಿಯಂಡ ಪ್ರಮೀಳಾ ಚಿಪ್ಪಣ್ಣ, ಅಪ್ಪಚ್ಚಿರ ರೀನಾ ನಾಣಯ್ಯ, ಕೂಪದಿರ ಪುಷ್ಪ ಮುತ್ತಪ್ಪ, ಅರೆಯಡ ಸವಿತ, ಬಲ್ಲಡಿಚಂಡ ಬೇಬಿ ಮೇದಪ್ಪ, ಅಪ್ಪಾರಂಡ ನಂದಿನಿ ನಂಜಪ್ಪ, ಮಂದಪAಡ ರಚನಾ ಮನೋಜ್, ನಂದಿನೆರವAಡ ಬೀನ ಅಯಣ್ಣ, ಅಜ್ಜಿಕುಟ್ಟೀರ ನೀತು ಲೋಕೇಶ್, ಕಲಿಯಂಡ ಪ್ರಕಾಶ್, ಬಾಚಮಂಡ ರಾಜ ಪೂವಣ್ಣ, ಕಾಂಡೇರ ಸುರೇಶ್, ಹಂಚೆಟ್ಟಿರ ಮನು ಮುದ್ದಪ್ಪ, ಪಟ್ಟಮಾಡ ಕುಶ, ಬಾಚರಣಿಯಂಡ ಚಿಪ್ಪಣ್ಣ, ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಅಜ್ಜಿಕುಟ್ಟೀರ ಲೋಕೇಶ್, ನಂದೇಟಿರ ರವಿ, ಬೇಪಡಿಯಂಡ ದಿನು, ಅರೆಯಡ ಗಿರೀಶ್, ನಂದಿನೆರವAಡ ಶಶಾಂಕ್ ಪೊನ್ನಣ್ಣ, ಪುಲ್ಲೇರ ಕಾಳಪ್ಪ, ಬಾಚಮಂಡ ಬೆಲ್ಲು ಪೂವಪ್ಪ, ಅಪ್ಪಾರಂಡ ಪ್ರಸಾದ್, ಬೊಟ್ಟಂಗಡ ಬೆಲ್ಲು ಪೂವಪ್ಪ, ಅಪ್ಪಾರಂಡ ಪ್ರಸಾದ್, ಬೊಟ್ಟಂಗಡ ಗಿರೀಶ್, ಪಾರ್ವಂಗಡ ನವೀನ್, ಕಾಟುಮಣಿಯಂಡ ಉಮೇಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಚೋಳ ಪಂಡ ನಾಣಯ್ಯ, ಮಣವಟ್ಟೀರ ಚಿಣ್ಣಪ್ಪ, ಪುಟ್ಟಿಚಂಡ ದೇವಯ್ಯ, ನೆರ್ಪಂಡ ಜಿಮ್ಮಿ, ಮಣವಟ್ಟೀರ ನಂದಾ, ಪುಲ್ಲೇರ ಹರ್ಷ, ನಂದಿನೆರ ವಂಡ ಅಯ್ಯಣ್ಣ, ನಂದಿನೆರವAಡ ದಿನೇಶ್, ಚೆಂಬಾAಡ ಜನತ್, ಕಿರಿಯ ಮಾಡ ಶರೀನ್, ನಂದಿನೆರವAಡ ವಿಜು, ಬೇಪಡಿಯಂಡ ಬಿದ್ದಪ್ಪ, ಮಂದಪAಡ ಮನೋಜ್, ಪುಳ್ಳಂಗಡ ನಟೇಶ್, ಚಿಯಬೇರ ಸತೀಶ್, ಅಲ್ಮಂಡ ಜೈ, ಅಲ್ಮಂಡ ನೆಹರು, ಸುಳ್ಳಿಮಾಡ ಸುತನ್, ಚೇನಂಡ ಸುರೇಶ, ಬೊಳಕಾರಂಡ ವಿಠಲ, ಬಡುವಂಡ ವಿಜಯ, ಪೆಮ್ಮುಡಿಯಂಡ ವೇಣು, ಅಪ್ಪಾರಂಡ ವಿಜು, ಪಟ್ಟಮಾಡ ಅಶೋಕ್, ಅಪ್ಪಾರಂಡ ಮಂದಣ್ಣ, ಮೇದುರ ಕಂಠಿ, ಕೂಪದಿರ ಸಾಬು, ಐಲಪಂಡ ಮಿಟ್ಟು, ಚಂಡೀರ ರಾಜ, ಐಚೆಟ್ಟಿರ ಸುಬ್ಬಯ್ಯ, ಮಂಡಿರ ಚಿಣ್ಣಪ್ಪ, ಮಂಡಿರ ಉತ್ತಪ್ಪ, ಚಾಮೇರ ಚೀಯಣ್ಣ, ಮುಕ್ಕಾಟ್ಟೀರ ಪೊನ್ನಪ್ಪ ಮತ್ತಿತರರು ಉಪಸ್ಥಿತರಿದ್ದು ಹಬ್ಬದ ಸಂಭ್ರಮ ಹಂಚಿಕೊAಡರು.