ಕುಶಾಲನಗರ, ಸೆ. ೧: ಕುಶಾಲನಗರ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಮಹಾಸಭೆ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎನ್.ಕುಮಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ರೂ. ೮೬.೭೧ ಕೋಟಿ ವಹಿವಾಟು ನಡೆಸಲಾಗಿದ್ದು, ರೂ. ೯.೪೪ ಕೋಟಿ ಗಳ ವ್ಯಾಪಾರ ವಹಿವಾಟು ನಡೆಸಲಾಗಿದೆ.

ರೂ. ೭೬.೨೬ ಲಕ್ಷ ಗಳ ವ್ಯಾಪಾರ ಲಾಭ ಗಳಿಸಿದ್ದು ರೂ. ೩೨.೬೬ ಲಕ್ಷ ರೂಗಳ ನಿವ್ವಳ ಲಾಭ ಗಳಿಸಲಾಗಿದೆ ಎಂದು ಕುಮಾರಪ್ಪ ಮಾಹಿತಿ ನೀಡಿದರು.

ಸಂಘದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.೨೦ ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು. ಇದೇ ಸಂದರ್ಭ ಗಾಯಕಿ ಪ್ರಗತಿ ಬಡಿಗೇರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ಹೆಚ್.ಜೆ.ದೊಡ್ಡಯ್ಯ, ನಿರ್ದೇಶಕರಾದ ಕೆ.ಎಂ.ಪ್ರಸನ್ನ, ಎ.ಪಿ.ನೀಲಮ್ಮ, ಆರ್.ಕೆ.ಚಂದ್ರು, ಕೆ.ಎಸ್.ರತೀಶ್, ಹೆಚ್.ಟಿ.ನಾಗೇಶ್, ಸಿ.ಜಿ.ಲತಾ, ಸಿ.ಎನ್.ಲೋಕೇಶ್, ಪಿ.ಪಿ. ತಿಲಕಕುಮಾರ್, ಮೊಹಮ್ಮದ್ ಸಾಲೇಹ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಜಗದೀಶ್ ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು.