ಸುಂಟಿಕೊಪ್ಪ, ಸೆ. ೧: ಇಲ್ಲಿನ ವಾಹನ ಚಾಲಕರ ಸಂಘದ ವಾರ್ಷಿಕ ಮಹಾಸಭೆ, ಅಧ್ಯಕ್ಷ ಬಿ.ಎಂ. ಪೂವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಎಸ್.ಸುರೇಶ, ಉಪಾಧ್ಯಕ್ಷರಾಗಿ ಮುನೀರ್ ಕಂಬಿಬಾಣೆ, ಬಿ.ಎ. ಕೃಷ್ಣಪ್ಪ, ಗೌರವ ಅಧ್ಯಕ್ಷರಾಗಿ ಬಿ.ಎಂ. ಪೂವಪ್ಪ, ಹೆಚ್.ಹಂಸ, (ಅಚ್ಚುಪ್ಪ), ಕಾರ್ಯದರ್ಶಿ ಯಾಗಿ ಎಂ.ಕೆ. ಕುಂಞಕೃಷ್ಣ, ಸಹಕಾರ್ಯದರ್ಶಿ ಅಂಬೆಕಲ್ ಚಂದ್ರಶೇಖರ್, ಖಜಾಂಚಿಯಾಗಿ ಆಸೀಸ್ ಕೊಡಗರಹಳ್ಳಿ, ಸಂಘಟನಾ ಕಾರ್ಯದರ್ಶಿಯಾಗಿ ಮೊಹಮ್ಮದ್ ಶರೀಫ್, ಆತಿಕ್, ಕಾರ್ಯಕಾರಿ ಸಮಿತಿಗೆ ಅಣ್ಣಪ್ಪ ಜಿ.ಎಂ. ತರ್ನಶೀರ್, ಪ್ರಕಾಶ್, ಸಲೀಂ, ಮಣಿರಾಜ್ (ತಂಬಿ), ಅಸ್ಕರ್, ಸಿ.ಎ.ಬಸಪ್ಪ, ಪವನ್ ಸಂತೋಷ್, ರಾವುಫ್, ಆರ್. ಎಂ.ಕುಮಾರ್, ರಾಜು, ರಫೀಕ್ (ಮೋನು), ವಿ.ರಾಜ, ಇಸಾಕ್, ಡಿಸೋಜ, ಅವರನ್ನು ಆಯ್ಕೆಗೊಳಿ ಸಲಾಯಿತು.