ಡಾ. ಮಾಲತಿ
ಕರಿಕೆ, ಆ. ೩೧: ರಾಷ್ಟಿçÃಯ ಜೇನು ನೊಣ ದಿನದ ಅಂಗವಾಗಿ ಅರಣ್ಯ ಇಲಾಖೆಯ ವತಿಯಿಂದ ಕೊಡಗು ವೃತ್ತ ಮಟ್ಟದ ಜೇನು ಕೃಷಿಕರು ಹಾಗೂ ಸಾರ್ವಜನಿಕರಿಗೆ ಸಾಮರ್ಥ್ಯ ವರ್ಧನೆ ಮತ್ತು ಸಮನ್ವಯ ಕಾರ್ಯಾಗಾರ ಭಾಗಮಂಡಲ ವಲಯದ ಭಾಗಮಂಡಲ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಸಭೆಯನ್ನು ಉದ್ಘಾಟಿಸಿ ಮಾತಾನಾಡಿದ ಮೈಸೂರು ಹಾಗೂ ಕೊಡಗು ವೃತ್ತದ ಅರಣ್ಯ ಸಂರಕ್ಷಣಾ ಅಧಿಕಾರಿ ಡಾ. ಮಾಲತಿ ಪ್ರಿಯ ಎಂ.ರವರು ಜೇನಿನ ಜೀವನ ಕ್ರಮ ರೋಚಕವಾಗಿದ್ದು, ನಾವು ಅವುಗಳನ್ನು ಅಧ್ಯಯನ ಮಾಡಿದಾಗ ಮತ್ತು ದಿನನಿತ್ಯದ ಕಾರ್ಯ ಚಟುವಟಿಕೆಗಳನ್ನು ಅವಲೋಕಿಸಿದಾಗ ಅವುಗಳ ಶ್ರಮ, ಶಿಸ್ತು, ನಾಯಕತ್ವ, ಒಗ್ಗಟ್ಟು ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಇದೆ. ಜೇನು ನೊಣಗಳ ಜೀವನ ಕ್ರಮದ ಬಗ್ಗೆ ಒಂದು ಪುಟದ ಪ್ರಬಂಧ ಬರೆದು ತಮ್ಮ ಶಿಕ್ಷಕರಿಗೆ ನೀಡುವಂತೆ ತಿಳಿಸಿದರು.
ಪ್ರಾಸ್ತಾವಿಕ ಮಾತನಾಡಿದ ಮಡಿಕೇರಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಎ.ಟಿ. ಪೂವಯ್ಯ ಜೇನು ನೊಣ ಪರಿಸರದ ಪ್ರಮುಖ ಅಂಗ, ಪಶ್ಚಿಮ ಘಟ್ಟಗಳ ವ್ಯಾಪ್ತಿ ಸೇರಿದಂತೆ ಪ್ರಪಂಚದಲ್ಲಿ ಪರಾಗಸ್ಪರ್ಶ ಕ್ರಿಯೆ ಶೇ. ೫೦ರಷ್ಟು ಜೇನು ನೊಣಗಳಿಂದ ನಡೆಯುತ್ತದೆ. ಪ್ರಕೃತಿಯ ಬಗ್ಗೆ ಇತ್ತೀಚೆಗೆ ಜನತೆಗೆ ಅರಿವಿನ ಕೊರತೆ ಕಾಣಿಸುತ್ತಿದೆ. ಇದೀಗ ನಾನಾ ಕಾರಣಗಳಿಂದ ಜೇನು ನೊಣಗಳ ಸಂತತಿ ಕಡಿಮೆಯಾಗುತ್ತಿದೆ. ಜೇನಿನ ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವಾಗಿ ಪಶ್ಚಿಮ ಘಟ್ಟಗಳ ತಪ್ಪಲಿನ ಜನತೆ ಜೇನು ಬೆಳೆಯಬೇಕೆಂದರು. ಭಾಗಮಂಡಲ ಜೇನು ಕೃಷಿ ಅಭಿವೃದ್ಧಿ ಅಧಿಕಾರಿ ವಸಂತ ಮಾತನಾಡಿ, ಪ್ರಪಂಚದಾದ್ಯAತ ಜೇನು ನೊಣ ದಿನಾಚರಣೆ ಆಚರಿಸಲಾಗುತ್ತದೆ. ನಮ್ಮಲ್ಲಿ ಜೇನು ಕೃಷಿಗೆ ಪೂರಕವಾಗಿ ವಾತಾವರಣವಿದ್ದು, ಕೃಷಿಕರು ಜೇನು ಬೆಳೆಸಲು ವಿಶೇಷವಾಗಿ ಆಸಕ್ತಿ ವಹಿಸಬೇಕು ಎಂದು ಕರೆ ನೀಡಿದರು. ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಸಹ ಪ್ರಾಧ್ಯಾಪಕರು ಹಾಗೂ ಅರಣ್ಯ ಜೀವಶಾಸ್ತç ಮತ್ತು ವೃಕ್ಷಾಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ. ಆರ್.ಎನ್. ಕೆಂಚರೆಡ್ಡಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತಾನಾಡಿದರು.