ಮಡಿಕೇರಿ, ಸೆ. ೧: ಕುಶಾಲನಗರ ಠಾಣಾ ವ್ಯಾಪ್ತಿಯ ಮಾದಪಟ್ಟಣ ಬಳಿ ಗಾಂಜಾ ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ಕೇರಳದ ೭ ಮಂದಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳ ರಾಜ್ಯದ ವಯನಾಡು ಜಿಲ್ಲೆಯ ಶಾಫಿ (೨೫), ಅಬ್ದುಲ್ ರೆಹಮಾನ್ (೩೩), ಅಬ್ದುಲ್ ಲತೀಫ್ (೪೦), ವಿಷ್ಣು (೨೩), ಕುಂಞÂಮೊಹಮ್ಮದ್ (೪೩) ಜಿನೇಶ್ (೪೧), ಮಹೇಶ್ (೨೦) ಬಂಧಿತ ಆರೋಪಿಗಳು.

ಈ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ೭೬ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಮಾದಕ ವಸ್ತು ತಡೆಗಟ್ಟುವ ಹಿನ್ನೆಲೆಯಲ್ಲಿ ಸೋಮವಾರಪೇಟೆ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ, ಕುಶಾಲನಗರ ಸಿಪಿಐ ಯಶ್ವಂತ್‌ಕುಮಾರ್, ಚಂದ್ರಶೇಖರ್, ಪಿಎಸ್‌ಐ ಹೆಚ್.ವಿ. ಗೀತಾ ನೇತೃತ್ವದಲ್ಲಿ ರಚಿಸಲಾಗಿದ್ದ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.