ಕೂಡಿಗೆ, ಸೆ. ೧: ಹೆಬ್ಬಾಲೆ ಶ್ರೀ ಕಾಳಿಕಾಂಬ ವಿಶ್ವಕರ್ಮ ಕುಶಲ ಕೈಗಾರಿಕಾ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಅವಿರೋಧವಾಗಿ ಹೆಚ್.ಬಿ. ಲಿಂಗಮೂರ್ತಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಕೆ.ಎಸ್. ಕಾಂತರಾಜ್, ಕಾರ್ಯದರ್ಶಿಯಾಗಿ ನಾಗರಾಜ್, ಸಹ ಕಾರ್ಯದರ್ಶಿ ಲೋಕನಾಥ್ ಆಚಾರಿ ಆಯ್ಕೆಗೊಂಡರು. ಸಂಘದ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡರು. ಈ ಸಂದರ್ಭ ಸಂಘದ ನಿರ್ದೇಶಕರಾದ ಉಷಾ, ದೇವದಾಸ್, ದಿನೇಶ್ ಆಚಾರಿ, ರಾಜಾಚಾರಿ, ನಂಜುAಡಾಚಾರಿ ಇದ್ದರು.