ಮಡಿಕೇರಿ, ಆ. ೩೧: ಚೈನಾದ ಹ್ಯಾಂಗ್‌ಝಾದಲ್ಲಿ ಸೆ. ೨೩ ರಿಂದ ಆರಂಭ ಗೊಳ್ಳಲಿರುವ ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳಲು ಕೊಡಗಿನವರಾದ ಇನ್ನಿಬ್ಬರು ಆಯ್ಕೆಯಾಗಿದ್ದಾರೆ. ಭಾರತ ಮಹಿಳಾ ಹಾಕಿ ತಂಡದ ಟೆಕ್ನಿಕಲ್ ಅಫಿಷಿಯಲ್ ಆಗಿ ಪುಳ್ಳಂಗಡ ರೋಹಿಣಿ ಬೋಪಣ್ಣ (ಸೌಮ್ಯ) ಹಾಗೂ ಕೋಚ್ ಆಗಿ ಅಂಕಿತಾ ಸುರೇಶ್ ಅವರನ್ನು ಹಾಕಿ ಇಂಡಿಯಾ ಆಯ್ಕೆ ಮಾಡಿದೆ.
ರೋಹಿಣಿ ಬೋಪಣ್ಣ ಮಾಜಿ ಅಂತರರಾಷ್ಟಿçÃಯ ಆಟಗಾರ ಬೆಸಗೂರಿನವರಾದ ಪುಳ್ಳಂಗಡ ಬೋಪಣ್ಣ ಅವರ ಪತ್ನಿ ಹಾಗೂ ಅಂಕಿತಾ ಮೂಲತಃ ಸುಂಟಿಕೊಪ್ಪ ಕೊಡಗರಹಳ್ಳಿಯ ಸುರೇಶ್
ಏಷ್ಯನ್ ಗೇಮ್ಸ್ಗೆ ರೋಹಿಣಿ - ಅಂಕಿತಾ
(ಮೊದಲ ಪುಟದಿಂದ) ಅವರ ಪತ್ನಿಯಾಗಿದ್ದು, ಈ ಹಿಂದೆ ಒಲಂಪಿಕ್ಸ್ನಲ್ಲೂ ಪಾಲ್ಗೊಂಡಿದ್ದರು. ರೋಹಿಣಿ ಅವರು ಕೂಡ ಹಲವಾರು ಅಂತರರಾಷ್ಟಿçÃಯ ಪಂದ್ಯಾವಳಿಯಲ್ಲಿ ಟೆಕ್ನಿಕಲ್ ಅಫಿಷಿಯಲ್ ಆಗಿ ಪಾಲ್ಗೊಂಡಿದ್ದಾರೆ. ಕೊಡಗಿನಿಂದ ಈಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಆರು ಕ್ರೀಡಾಪಟುಗಳು ಸೇರಿದಂತೆ ಒಟ್ಟು ೯ ಮಂದಿ ಭಾಗವಹಿಸುತ್ತಿದ್ದು, ಇದು ಕ್ರೀಡಾ ಜಿಲ್ಲೆ ಖ್ಯಾತಿಯ ಕೊಡಗಿಗೆ ಹಿರಿಮೆಯಾಗಿದೆ.